ಹೊಸಪೇಟೆ (ವಿಜಯನಗರ) : ಸತತ ನಾಲ್ಕು ವರ್ಷಗಳಿಂದ ತುಂಗಭದ್ರಾ ಜಲಾಶಯ ಭರ್ತಿಯಾಗಿದೆ. ಇದೊಂದು ಸಂತಸದ ಸಂಗತಿಯಾಗಿದೆ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸಂತಸ ವ್ಯಕ್ತಪಡಿಸಿದ್ದಾರೆ.
ನಗರದ ತುಂಗಭದ್ರಾ ಜಲಾಶಯಕ್ಕೆ ಶುಕ್ರವಾರ ಸಂಜೆ ಭೇಟಿ ನೀಡಿ ಅವರು ಮಾತನಾಡಿದರು. ರೈತನ ಮಗನಾಗಿ ತುಂಬಿದ ಜಲಾಶಯ ಕಣ್ತುಂಬಿಕೊಳ್ಳುವುದು ಸಂತಸದ ಸಂಗತಿ. 2018, 2019, 2020 ಮತ್ತು 2021ರಲ್ಲಿಯೂ ಜಲಾಶಯ ತುಂಬಿ ತುಳುಕುತ್ತಿದೆ. ಇದರಿಂದ ರಾಯಲಸೀಮೆ, ಕರ್ನಾಟಕ, ತೆಲಂಗಾಣದ ರೈತರು ಖುಷಿಯಿಂದ ಇದ್ದಾರೆ ಎಂದರು.
ಅಣೆಕಟ್ಟು ದೇಶದ ಅಭಿವೃದ್ಧಿ ಹಾಗೂ ರೈತರ ಪ್ರಗತಿ ಸಂಕೇತವಾಗಿದೆ. ಪ್ರತಿ ಅಣೆಕಟ್ಟೆಗೆ ಭೇಟಿ ನೀಡಿದಾಗಲೂ ಸಂತಸವಾಗುತ್ತದೆ. ಅದರಲ್ಲಿ ತುಂಗಭದ್ರಾ ಜಲಾಶಯವೂ ಒಂದು ಎಂದು ಅಭಿಪ್ರಾಯಪಟ್ಟರು.