ETV Bharat / state

ಕಂಪ್ಲಿ ಶಾಸಕರು - ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ.. ಪರಿಸ್ಥಿತಿ ತಿಳಿಗೊಳಿಸಲು ಖಾಕಿ ಸರ್ಕಸ್ - Kampli MLA

ಒಬ್ಬ ಶಾಸಕನಿಗೆ ಭದ್ರತೆ ನೀಡಲು ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ. ಶಾಸಕನಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.‌ ನಂತರ ಪೊಲೀಸರು ಹಾಗೂ ಹಿರಿಯ ಮುಖಂಡರು ವಾತಾವರಣ ತಿಳಿಗೊಳಿಸಿದರು..

ಕಂಪ್ಲಿ
ಕಂಪ್ಲಿ
author img

By

Published : Nov 30, 2020, 12:49 PM IST

Updated : Nov 30, 2020, 1:03 PM IST

ಹೊಸಪೇಟೆ : ವಿಜಯನಗರ ಜಿಲ್ಲೆಗೆ ಕಂಪ್ಲಿ ಸೇರ್ಪಡೆಗೊಳಿಸಬೇಕೆಂದು ಆಗ್ರಹಿಸಿ ನಡೆಸುತ್ತಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಕಂಪ್ಲಿ ಶಾಸಕ ಜೆ ಎನ್​ ಗಣೇಶ್​ ನಡುವೆ ಮಾತಿನ ಚಕಮಕಿ ನಡೆದು ಕೆಲ ಕಾಲ ಬಿಗುವಿನ ವಾತಾವರಣ ಸೃಷ್ಟಿಯಾಯಿತು.

ಪ್ರತಿಭಟನಾ ಮೆರವಣಿಗೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ವೇಳೆ ಬಿಜೆಪಿ ಬೆಂಬಲಿತ ಕಾರ್ಯಕರ್ತರು, ಶಾಸಕ ಜೆ ಎನ್ ಗಣೇಶ್ ಅವರ ವಿರುದ್ಧ ಧಿಕ್ಕಾರ ಕೂಗಿದರು. ಇದಕ್ಕೆ ಕೋಪಗೊಂಡ ಜೆ ಎನ್ ಗಣೇಶ್​ ಆಕ್ರೋಶ ಹೊರ ಹಾಕಿದರು.

ಕಂಪ್ಲಿ ಶಾಸಕರು- ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ

ಬಳಿಕ ಕೆಲ ಕಾಲ ನೂಕಾಟ ಮತ್ತು ತಳ್ಳಾಟವಾಗಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಯಿತು. ಕಾರ್ಯಕರ್ತರನ್ನು ನಿಯಂತ್ರಿಸಲು ಪೊಲೀಸರು ಹರ ಸಾಹಸ ಪಡಬೇಕಾಯಿತು. ಇದೇ ಸಂದರ್ಭದಲ್ಲಿ ಶಾಸಕ ಜೆ ಎನ್ ಗಣೇಶ್ ಮಾತನಾಡಿ, ಒಬ್ಬ ಶಾಸಕನಿಗೆ ಭದ್ರತೆ ನೀಡಲು ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ. ಶಾಸಕನಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.‌ ನಂತರ ಪೊಲೀಸರು ಹಾಗೂ ಹಿರಿಯ ಮುಖಂಡರು ವಾತಾವರಣ ತಿಳಿಗೊಳಿಸಿದರು.

Last Updated : Nov 30, 2020, 1:03 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.