ETV Bharat / state

ಶ್ರೀರಾಮುಲು ಅಥವಾ ಜಾರಕಿಹೊಳಿಗೆ ಡಿಸಿಎಂ ಸ್ಥಾನ ನೀಡಿ: ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಒತ್ತಾಯ

author img

By

Published : Dec 28, 2019, 5:52 PM IST

ಪರಿಶಿಷ್ಟ ಪಂಗಡ ಸಮುದಾಯದ ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸಿ 2020ರ ಫೆ. 9ರಿಂದ ಎರಡು ದಿನಗಳ ಕಾಲ ರಾಜ್ಯಮಟ್ಟದ ವಾಲ್ಮೀಕಿ ಜಾತ್ರೆ ನಡೆಯಲಿದೆ ಎಂದು ವಾಲ್ಮೀಕಿ ಗುರು ಪೀಠದ ಪೀಠಾಧ್ಯಕ್ಷ ವಾಲ್ಮೀಕಿ ಪ್ರಸನ್ನಾಂದ ಸ್ವಾಮೀಜಿ ತಿಳಿಸಿದರು.

Valmiki Prasanananda Swamy
ವಾಲ್ಮೀಕಿ ಪ್ರಸನ್ನಾನಂದ ಸ್ವಾಮಿ

ಬಳ್ಳಾರಿ: ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ಡಿಸಿಎಂ ಸ್ಥಾನವನ್ನು ರಮೇಶ್ ಜಾರಕಿಹೊಳಿ ಅಥವಾ ಬಿ.ಶ್ರೀರಾಮುಲು ಈ ಇಬ್ಬರಲ್ಲಿ ಒಬ್ಬರಿಗೆ ಕೊಟ್ಟರೂ ಸರಿ ಎಂದು ವಾಲ್ಮೀಕಿ ಗುರು ಪೀಠದ ಪೀಠಾಧ್ಯಕ್ಷ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ

ನಗರದ ಪ್ರವಾಸಿ ಮಂದಿರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮುದಾಯಕ್ಕೆ 7.5ರಷ್ಟು ಮೀಸಲಾತಿ ಹೆಚ್ಚಿಸಬೇಕು. ರಾಜ್ಯದ ನಾಲ್ಕನೇ ಅತಿ ದೊಡ್ಡ ಸಮುದಾಯವಾಗಿರುವ ವಾಲ್ಮೀಕಿ ಸಮುದಾಯದ ಆರ್ಥಿಕ, ರಾಜಕೀಯ, ಸಾಮಾಜಿಕ ಏಳಿಗೆಗಾಗಿ ಪೀಠ ಸ್ಥಾಪನೆ ಮಾಡಲಾಗ್ತಿದೆ ಎಂದರು. ಪರಿಶಿಷ್ಟ ಪಂಗಡ ಸಮುದಾಯದ ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸಿ 2020ರ ಫೆ. 9ರಿಂದ ಎರಡು ದಿನಗಳ ಕಾಲ ರಾಜ್ಯಮಟ್ಟದ ವಾಲ್ಮೀಕಿ ಜಾತ್ರೆ ನಡೆಯಲಿದೆ ಎಂದು ತಿಳಿಸಿದರು.

ಅಸಂಘಟಿತ ಸಮುದಾಯದ ಸಂಘಟನೆಗಾಗಿ 11 ವರ್ಷಗಳಿಂದ ರಾಜ್ಯದಾದ್ಯಂತ ಓಡಾಡಿ ಸಮುದಾಯದ ಸಂಘಟನೆ ಮಾಡಲಾಗಿದೆ. ಇಲ್ಲಿಯವರೆಗೆ 115 ತಾಲೂಕುಗಳ ಪ್ರವಾಸ ಆಗಿದೆ ಎಂದು ಹೇಳಿದರು.

ಎಸ್ಸಿ, ಎಸ್ಟಿ ಜನಸಂಖ್ಯೆಗನುಗುಣವಾಗಿ ಮೀಸಲಾತಿ:

ಬೇರೆ ಜಾತಿಯವರು ನಕಲಿ ಪ್ರಮಾಣಪತ್ರ ಪಡೆದು ಅಕ್ರಮವಾಗಿ ಸೌಲಭ್ಯ ಪಡೆಯುತ್ತಿದ್ದಾರೆ. ಸರ್ಕಾರ ಇದನ್ನು ತಡೆಯಬೇಕು. ಪ್ರತ್ಯೇಕ ಸಚಿವಾಲಯ ರಚಿಸಬೇಕು. ಹಂಪಿ ವಿವಿಗೆ ವಾಲ್ಮೀಕಿ ಹೆಸರು ನಾಮಕರಣ ಮಾಡಬೇಕು. ರಾಮನ ಹೆಸರು ಹೇಳಿ ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಅಧಿಕಾರ ಪಡೆದಿದ್ದಾರೆ. ರಾಮ ಮಂದಿರ ನಿರ್ಮಾಣವಾಗುತ್ತಿರುವ ಅಯೋಧ್ಯೆಯಲ್ಲಿ ವಾಲ್ಮೀಕಿ ಮಂದಿರ ನಿರ್ಮಿಸಬೇಕು ಎಂದು ಅವರು ಒತ್ತಾಯಿಸಿದರು.

ಸಮುದಾಯದ ಅಭಿವೃದ್ಧಿಗಾಗಿ ವಿವಿಧ ಬೇಡಿಕೆಗಳನ್ನು ಈಡೇರಿಕೆಗೆ ಒತ್ತಾಯ

ಜೂನ್ 9ರಂದು ರಾಜನಹಳ್ಳಿಯಿಂದ ರಾಜಧಾನಿ ಬೆಂಗಳೂರಿಗೆ ಜೂನ್ 25ರಂದು ಬೃಹತ್ ಹೋರಾಟ ನಡೆಸಿದ ಪರಿಣಾಮ ನಾಗಮೋಹನ್ ದಾಸ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು‌. ಬೆಂಗಳೂರು, ಕಲಬುರಗಿಯಲ್ಲಿ ಸಭೆ ಕರೆದು ಮಾಹಿತಿ ಪಡೆದಿದ್ದಾರೆ. ಜ. 31ರೊಳಗೆ ವರದಿ ನೀಡಿ, ಜಾತ್ರೆಯ ಸಂದರ್ಭದಲ್ಲಿ ಮೀಸಲಾತಿ ಹೆಚ್ಚಳಕ್ಕೆ ಘೋಷಿಸಬೇಕೆಂದು ಒತ್ತಾಯಿಸಿದರು.

Intro:kn_bly_03_281219_valmikisamaja pressmeetI_ka10007

ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ಡಿಸಿಎಂ ಸ್ಥಾನ ಇಬ್ಬರಲ್ಲಿ ( ರಮೇಶ್ ಜಾರಕಿಹೊಳ್ಳೆ ಅಥವಾ ಬಿ.ಶ್ರೀರಾಮುಲು ) ಒಬ್ಬರಿಗೂ ಕೊಟ್ಟರೇ ಸರಿ ಎಂದು
ವಾಲ್ಮೀಕಿ ಗುರು ಪೀಠದ ಪೀಠಾಧ್ಯಕ್ಷ ವಾಲ್ಮೀಕಿ ಪ್ರಸನ್ನಾಂದ ಸ್ವಾಮೀಜಿ ತಿಳಿಸಿದರುBody:.

ಪರಿಶಿಷ್ಟ ಪಂಗಡ ಸಮುದಾಯದ ಮೀಸಲಾತಿ
ಹೆಚ್ಚಳಕ್ಕೆ ಒತ್ತಾಯಿಸಿ 2020ರ ಫೆಬ್ರವರಿ 9 ರಿಂದ ಎರಡು ದಿನಗಳ ಕಾಲ ರಾಜ್ಯಮಟ್ಟದ ವಾಲ್ಮೀಕಿ ಜಾತ್ರೆ ನಡೆಯಲಿದೆ ಎಂದು ವಾಲ್ಮೀಕಿ ಗುರು ಪೀಠದ ಪೀಠಾಧ್ಯಕ್ಷ ವಾಲ್ಮೀಕಿ ಪ್ರಸನ್ನಾಂದ ಸ್ವಾಮೀಜಿ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಮುದಾಯಕ್ಕೆ 7.5 ಮೀಸಲಾತಿ ಹೆಚ್ಚಿಸಬೇಕು.
ಐತಿಹಾಸಿಕ ಜಾತ್ರಾ ಮಹೋತ್ಸವ, ರಾಜ್ಯದ ನಾಲ್ಕನೇ ಅತಿ ದೊಡ್ಡ ಸಮುದಾಯ. ಆರ್ಥಿಕ, ರಾಜಕೀಯ, ಸಾಮಾಜಿಕವಾಗಿ ಸಮುದಾಯದ ಏಳಿಗೆಗಾಗಿ ಪೀಠ ಸ್ಥಾಪನೆ.

ಅಸಂಘಟಿತ ಸಮುದಾಯದ ಸಂಘಟನೆ. 11 ವರ್ಷಗಳಿಂದ ರಾಜ್ಯದಾದ್ಯಂತ ಓಡಾಡಿ ಸಮುದಾಯ ಸಂಘಟನೆ ಮಾಡಲಾಗಿದೆ. ಇಂದು 115 ತಾಲ್ಲೂಕು ಪ್ರವಾಸ ಆಗಿದೆ.

ಎಸ್ಸಿ, ಎಸ್ಟಿ ಜನಸಂಖ್ಯೆಗನುಗುಣವಾಗಿ ಮೀಸಲಾತಿ :-

ಬೇರೆ ಜಾತಿಯವರು ನಕಲಿ ಪ್ರಮಾಣ ಪತ್ರ ಪಡೆದು ಅಕ್ರಮವಾಗಿ ಸೌಲಭ್ಯ ಪಡೆಯುತ್ತುದ್ದಾರೆ. ಸರ್ಕಾರ ಇದನ್ನು ತಡೆಯಬೇಕು. ಪ್ರತ್ಯೇಕ ಸಚಿವಾಲಯ ರಚಿಸಬೇಕು. ಹಂಪಿ ವಿವಿಗೆ ವಾಲ್ಮೀಕಿ ಹೆಸರು ನಾಮಕರಣ ಮಾಡಬೇಕು.

ರಾಮನ ಹೆಸರು ಹೇಳಿ ರಾಜ್ಯದಲ್ಲಿ ಮತ್ತ ಕೇಂದ್ರದಲ್ಲಿ ಅಧಿಕಾರ ಪಡೆದಿದ್ದಾರೆ. ರಾಮಮಂದಿರ ನಿರ್ಮಾಣ ವಾಗುತ್ತಿರುವ ಅಯೋಧ್ಯೆಯಲ್ಲಿ ವಾಲ್ಮೀಕಿ ಮಂದಿರ ನಿಋಮಿಸಬೇಕು.

ಸಮುದಾಯದ ಅಭಿವೃದ್ಧಿಗಾಗಿ ವಿವಿಧ ಬೇಡಿಕೆಗಳನ್ನು ಈಡೇರಿಕೆಗೆ ಒತ್ತಾಯ.

ಜೂನ್ 9ರಂದು ರಾಜನಹಳ್ಳಿಯಿಂದ ರಾಜಧಾನಿ ಬೆಂಗಳೂರಿಗೆ ಜೂನ್ 25ರಂದು ಬೃಹತ್ ಹೋರಾಟ ನಡೆಸಿದ ಪರಿಣಾಮ ನಾಗಮೋಹನ್ ದಾಸ್ ನೇತೃತ್ತವದಲ್ಲಿ ಸಮಿತಿ ರಚಿಸಲಾಗಿತ್ತು‌. ಬಿಜೆಪಿ ಅದನ್ನು ಮುಂದುವರೆಸಿದೆ. ಬೆಮಗಳೂರು, ಕಲಬುರಗಿ ಯಲ್ಲಿ ಸಭೆ ಕರೆದು ಮಾಹಿತಿ ಪಡೆದಿದ್ದಾರೆ. ಜ. 3 1ರೊಳಗೆ ವರದಿ ನೀಡಿ, ಜಾತ್ರೆಯ ಸಂದರ್ಭದಲ್ಲಿ ಮೀಸಲಾತಿ ಹೆಚ್ಚಳ ಘೋಷಿಸಬೇಕೆಂದು ಒತ್ತಾಯಿಸಿದರು.

ಶಾಸಕರು ಸಮುದಾಯದ ಹೆಸರಿನಲ್ಲಿ ಗೆದ್ದಿದ್ದಾರೆ. ಕೇಂದ್ರ ಮೀಸಲಾತಿ ನೀಡಿದ್ದರಿಂದ ಗೆದ್ದರುವ ನೀವು ವಿಧಾನಸೌಧ ಮತ್ತು ಸಂಸತ್ತಿನಲ್ಲಿ ಮಾತಾಡುವಂತೆ ಹೇಳಿದ್ದೆನೆ. ಇವರ ಇಚ್ಚಾಶಕ್ತಿ ಕೊರತೆಯಿಂದ ಜನ ಜಾಗೃತಿಯಾಗಿದ್ದಾರೆ. ಹಾಗಾಗಿ ಸಮುದಾಯದ ಧ್ವನಿಯಾಗಿ ಹೋರಾಟ ಮಾಡಲಾಗದಿದ್ದರೆ ಸಾಮೂಹಿಕವಾಗಿ ರಾಜೀನಾಮೆ ಕೊಡಬೇಕೆಂದು ಹೇಳಿದ್ದೆ. ಅವರೂ ಪಕ್ಷಾತೀತವಾಗಿ ಸಮುದಾಯದ ಕೆಲಸ ಅಗದಿದ್ದರೆ ರಾಜೀನಾಮೆ ನೀಡುವುದಾಗಿ ಹೇಳಿದ್ದರು. ಅದರ ಪರಿಣಾಮ ಆಯೋಗ ರಚನೆಯಾಯಿತು.ವರದಿ ಸಲ್ಲಿಕೆಯಾದ ಮೇಲೆ ಮೀಸಲಾತಿ ಹೆಚ್ಚಳವಾಗದಿದ್ದರೆ ಜನತೆಯೊಂದಿಗೆ ಶಾಸಕರು ಮತ್ತು ಮುಖ್ಯಮಂತ್ರಿಗಳನ್ನು ಒತ್ತಾಯಿಸಲಾಗುವುದು.

ಶಾಸಕರು ರಾಜ್ಯದ ಸಮುದಾಯವನ್ನು ವಂಚಿಸಲು ಸಾಧ್ಯವಿಲ್ಲ. ಲಕ್ಷಾಂತರ ಜನರಿಗೆ ನೀಡಿರುವ ಮಾತಿನಂತೆ ಬದ್ದರಾಗಿರಬೇಕು‌.

ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಸಮುದಾಯವನ್ನು ವೋಟ್ ಬ್ಯಾಂಕ್ ನಂತೆ ಬಳಸಿಕೊಂಡಿದ್ದಿರಿ, ಸಮುದಾಯಕ್ಕೆ ಉಪಮುಖ್ಯಂಮತ್ರಿ ಸ್ಥಾನ ನೀಡಬೇಕು. ರಮೇಶ್ ಜಾರಕಿಹೊಳಿ, ಶ್ರೀರಾಮುಲು ಇಬ್ಬರಲ್ಲಿ ಒಬ್ಬರಿಗೆ ಕೊಟ್ಟರೂ ಸರಿ‌ ಎಂದರು.

Conclusion:ಈ ಪತ್ರಿಕಾಗೋಷ್ಠಿಯಲ್ಲಿ ದಿವಾಕರ,ವೆಂಕಟೇಸಶ ಪ್ರಸಾದ್,ವಿ.ಕೆ.ಬಸಪ್ಪ, ಕಮಲ ಮರಿಸ್ವಾಮಿ, ತಾಯಣ್ಣ, ಅಶೋಕ ಮತ್ತು ಇನ್ನಿತರರು ಹಾಜರಿದ್ದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.