ETV Bharat / state

ಐತಿಹಾಸಿಕ ಹಂಪಿಗೆ ಮೂಲ ಸೌಕರ್ಯ ಒದಗಿಸುವಂತೆ ಮನವಿ - ಶ್ರೀಕೃಷ್ಣ ದೇವರಾಯ ಸ್ಮಾರಕ ರಕ್ಷಣಾ ಸಮಿತಿ

ಹೊಸಪೇಟೆ ಸಮೀಪದ ಹಂಪಿಯಲ್ಲಿ ಶ್ರೀಕೃಷ್ಣ ದೇವರಾಯ ಸ್ಮಾರಕ ಸಮಿತಿ ರಕ್ಷಣಾ ಸಮಿತಿಯ ಪದಾಧಿಕಾರಿಗಳು‌ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿ ಗ್ರಾಮ ಪಂಚಾಯತ್​ಗೆ ಮನವಿ ಸಲ್ಲಿಸಿದರು.

Hampi
ಹೊಸಪೇಟೆ
author img

By

Published : Sep 8, 2020, 12:59 PM IST

ಹೊಸಪೇಟೆ(ಬಳ್ಳಾರಿ): ಮೂಲ ಸೌಕರ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಿ ಶ್ರೀಕೃಷ್ಣ ದೇವರಾಯ ಸ್ಮಾರಕ ರಕ್ಷಣಾ ಸಮಿತಿಯ ಪದಾಧಿಕಾರಿಗಳು‌ ತಾಲೂಕಿನ‌ ಹಂಪಿ ಗ್ರಾಮ ಪಂಚಾಯತ್​ಗೆ ಮನವಿ ಸಲ್ಲಿಸಿದರು.

ಎಂ.ಪಿ. ಪ್ರಕಾಶ ನಗರ ಹಾಗೂ ಹೊಸ ಹಂಪಿಗೆ ಬಸ್ ನಿಲ್ದಾಣ ಹಾಗೂ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸಬೇಕು. ಹಲವು ವರ್ಷಗಳ ಜನರು ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಅಲ್ಲದೇ, ಹಂಪಿಗೆ ಬರುವ ಪ್ರವಾಸಿಗರು ತೊಂದರೆ ಅನುಭವಿಸುವಂತಾಗಿದೆ.‌ ಕೂಡಲೇ ಅಧಿಕಾರಿಗಳು ಮೂಲ ಸೌಕರ್ಯಗಳಿಗೆ ಹೆಚ್ಚಿನ ಒತ್ತನ್ನು‌‌ ನೀಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ಮುಖಂಡರಾದ ಹುಲಗಪ್ಪ, ಖಾಜಾಸಾಬ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.