ETV Bharat / state

ಕುಂಟುತ್ತಾ ಸಾಗುತ್ತಿರುವ 24x7 ಕುಡಿಯುವ ನೀರು ಪೂರೈಕೆ ಯೋಜನೆ - MLA Gali Somashekar reddy

ಬೇಸಿಗೆ ಸಂದರ್ಭದಲ್ಲಿ ಬಳ್ಳಾರಿ ಮಹಾನಗರಕ್ಕೆ ಎದುರಾಗುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕೆಪಿಟಿಸಿಎಲ್​​ನ ಕೆರೆಯಿಂದ ಹೆಚ್ಚುವರಿಯಾದ 0.7 ಟಿಎಂಸಿ ನೀರನ್ನು ಕುಡಿಯುವ ನೀರಿಗಾಗಿ ಬಳಸಿಕೊಳ್ಳಲಾಗುವುದು ಎಂದು ಶಾಸಕ ಗಾಲಿ ಸೋಮಶೇಖರ ರೆಡ್ಡಿ ಹೇಳಿದರು.

drinking water supply
ಕುಡಿಯುವ ನೀರು
author img

By

Published : Jan 30, 2021, 6:14 PM IST

ಬಳ್ಳಾರಿ: ಮಹಾನಗರಕ್ಕೆ 24x7 ಕುಡಿಯುವ ನೀರು ಪೂರೈಕೆ ಯೋಜನೆ ಐದು ವರ್ಷವಾದರೂ ಕುಂಟುತ್ತಲೇ ಸಾಗುತ್ತಿದೆ. 28 ವಲಯಗಳ ಪೈಕಿ ಈಗಾಗಲೇ 20 ವಲಯಗಳಲ್ಲಿ ಮೀಟರ್-ನಲ್ಲಿಗಳ ಅಳವಡಿಕೆ ಪೂರ್ಣಗೊಂಡರೂ ಕುಡಿಯುವ ನೀರಿನ ಪೂರೈಕೆ ಮಾತ್ರ ಅನುಷ್ಠಾನಗೊಂಡಿಲ್ಲ. ಹೀಗಾಗಿ ಈ ಬಾರಿಯೂ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ತಪ್ಪಿದ್ದಲ್ಲ.

ಇದನ್ನೂ ಓದಿ...ಒಂದು ದಿನದ ಮಟ್ಟಿಗೆ ಜಿಪಂ ಸಿಇಒ ಆದ ವಿದ್ಯಾರ್ಥಿನಿ!

2015ರಲ್ಲೇ ಆರಂಭಗೊಂಡ ಈ ಯೋಜನೆಯ ಅಭಿವೃದ್ಧಿ ಕಾಮಗಾರಿ 2017ರಲ್ಲಿ ಪೂರ್ಣಗೊಳ್ಳಬೇಕಿತ್ತು. ಆದರೆ ಈವರೆಗೂ ಮುಗಿದಿಲ್ಲ. ದೆಹಲಿ ಮೂಲದ ಎಸ್​ಬಿಎಂಎಲ್ ಏಜೆನ್ಸಿ ಗುತ್ತಿಗೆ ಪಡೆದಿದೆ. ಕಾಮಗಾರಿ ಬೇಗನೇ ಪೂರ್ಣಗೊಳಿಸಿ ಎಂದು ಗುತ್ತಿಗೆ ಪಡೆದ ಏಜೆನ್ಸಿಗೆ ಮೂರು ವರ್ಷ ಗಡುವು ನೀಡಲಾಗಿತ್ತು. ಐದಾರು ಬಾರಿ ಎಚ್ಚರಿಕೆಯೂ ನೀಡಲಾಗಿತ್ತು. ಆದರೂ ಎಚ್ಚೆತ್ತುಕೊಳ್ಳದ ಕಾರಣ ಈ ಜವಾಬ್ದಾರಿಯನ್ನು ಕೆಯುಡಬ್ಲ್ಯೂಎಸ್​​ಗೆ ವಹಿಸುವ ನಿರ್ಧಾರಕ್ಕೆ ರಾಜ್ಯ ಸರ್ಕಾರ ಬಂದಿದೆ.

ಈ ಸಂಬಂಧ ಈಟಿವಿ ಭಾರತದೊಂದಿಗೆ ಮಾತನಾಡಿದ ಶಾಸಕ ಗಾಲಿ ಸೋಮಶೇಖರ ರೆಡ್ಡಿ, ಬಳ್ಳಾರಿ ಮಹಾನಗರದ 43 ವಲಯಗಳಿಗೆ ಕುಡಿಯುವ ನೀರು ಪೂರೈಸಲು ಉದ್ದೇಶಿಸಲಾಗಿದ್ದು, ಆರಂಭದ ಹಂತದಲ್ಲಿ 28 ವಲಯಗಳಿಗೆ ಕುಡಿಯುವ ನೀರು ಪೂರೈಕೆಸಲು ಕ್ರಮ ವಹಿಸಲಾಗುವುದು. ಆ ಪೈಕಿ ಅಂದಾಜು 20 ವಲಯಗಳಲ್ಲಿ ಮಾತ್ರ ಪೈಪ್​​ಲೈನ್, ಮೀಟರ್ ಹಾಗೂ ನಲ್ಲಿಗಳ ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ. ಉಳಿದ 8 ವಲಯಗಳಲ್ಲಿ ಅಭಿವೃದ್ಧಿ ಪ್ರಕ್ರಿಯೆ ಮುಂದುವರೆದಿದ್ದು, ಜೂನ್ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದರು.

ಶಾಸಕ ಗಾಲಿ ಸೋಮಶೇಖರ ರೆಡ್ಡಿ

2ನೇ ಹಂತದಲ್ಲಿ ಉಳಿದ 15 ವಲಯಗಳಿಗೆ ಸೂಕ್ತ ಅನುದಾನ ಬಿಡುಗಡೆಯಾಗಬೇಕಿದೆ. ಅದಕ್ಕಾಗಿ‌ ₹243 ಕೋಟಿ ವೆಚ್ಚದ ಕ್ರಿಯಾ ಯೋಜನೆ ತಯಾರಿಸಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.‌ ಬೇಸಿಗೆ ಸಂದರ್ಭದಲ್ಲಿ ಮಹಾನಗರಕ್ಕೆ ಎದುರಾಗುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕೆಪಿಟಿಸಿಎಲ್​​ ಕೆರೆಯಿಂದ ಹೆಚ್ಚುವರಿಯಾದ 0.7 ಟಿಎಂಸಿ ನೀರನ್ನು ಕುಡಿಯುವ ನೀರಿಗಾಗಿ ಬಳಸಿಕೊಳ್ಳಲಾಗುವುದು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.