ETV Bharat / state

ಕೂಡ್ಲಿಗಿ; ಕೆರೆ ಏರಿ ಮೇಲೆ ಕಾರು ಅಪಘಾತ.. ಇಬ್ಬರಿಗೆ ಗಂಭೀರ ಗಾಯ - Ramadurga

ಬಳ್ಳಾರಿಯ ಡಿಡಿಪಿಐ ಕಚೇರಿಯಲ್ಲಿನ ಕೆಲಸದ ನಿಮಿತ್ತ ಹರಪನಹಳ್ಳಿಯಿಂದ ಬಳ್ಳಾರಿಗೆ ಬರುವ ವೇಳೆ ರಾಮದುರ್ಗ ಕೆರೆ ಏರಿ ಮೇಲಿನ ಕುಡಿಯುವ ನೀರಿನ ಪೈಪ್​​​ಗೆ ಡಿಕ್ಕಿಹೊಡೆದ ಪರಿಣಾಮ ಕಾರು ಆಯತಪ್ಪಿ ಕೆರೆಯ ದಂಡೆ ಮೇಲೆ ಉರುಳಿದೆ. ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯವಾಗಿದೆ.

Two seriously injured in car accident at  Bellary
ರಾಮದುರ್ಗ ಕೆರೆ ಏರಿ ಮೇಲೆ ಕಾರು ಅಪಘಾತ: ಇಬ್ಬರಿಗೆ ಗಂಭೀರ ಗಾಯ
author img

By

Published : Aug 31, 2020, 4:43 PM IST

ಬಳ್ಳಾರಿ: ಜಿಲ್ಲೆಯ ಕೂಡ್ಲಿಗಿ ತಾಲೂಕಿನ ರಾಮದುರ್ಗದ ಕೆರೆ ಏರಿ ಮೇಲೆ ಭೀಕರ ಕಾರು ಅಪಘಾತ ಸಂಭವಿಸಿದ್ದು, ಕಾರಿನೊಳಗಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿವೆ.

ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಲಕ್ಷ್ಮೀಪುರ ತಾಂಡಾದ ನಿವಾಸಿ ಜಗದೀಶ (35) ಮತ್ತು ದಿವಾಕರ (34) ಎಂಬುವರಿಗೆ ಗಾಯವಾಗಿದ್ದು, ಚಿಕಿತ್ಸೆಗಾಗಿ ಇಬ್ಬರನ್ನೂ ಕೂಡ್ಲಿಗಿ ಸರ್ಕಾರಿ ಪ್ರಾಥಮಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಳ್ಳಾರಿಯ ಡಿಡಿಪಿಐ ಕಚೇರಿಯಲ್ಲಿನ ಕೆಲಸದ ನಿಮಿತ್ತ ಹರಪನಹಳ್ಳಿಯಿಂದ ಬಳ್ಳಾರಿಗೆ ಬರುವ ವೇಳೆ ರಾಮದುರ್ಗ ಕೆರೆ ಏರಿ ಮೇಲಿನ ಕುಡಿಯುವ ನೀರಿನ ಪೈಪ್​​​ಗೆ ಡಿಕ್ಕಿಹೊಡೆದ ಪರಿಣಾಮ ಕಾರು ಆಯತಪ್ಪಿ ಕೆರೆಯ ದಂಡೆ ಮೇಲೆ ಉರುಳಿದೆ.

ಘಟನೆ ಸಂಬಂಧ ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.