ETV Bharat / state

ಹೊಸಪೇಟೆ: ಪ್ರತ್ಯೇಕ ಅಪಘಾತ ಪ್ರಕರಣದಲ್ಲಿ ಇಬ್ಬರು ಸಾವು; ಹಂಪಿ ಪೊಲೀಸರಿಂದ ಅಂತರ​ರಾಜ್ಯ ಕಳ್ಳನ ಬಂಧನ - ಹಂಪಿ ಪೊಲೀಸರಿಂದ ಕಳ್ಳನ ಬಂಧನ

ಪ್ರತ್ಯೇಕ ಅಪಘಾತ ಘಟನೆಗಳಲ್ಲಿ ವಿದ್ಯಾರ್ಥಿ ಸೇರಿ ಇಬ್ಬರು ಮೃತಪಟ್ಟ ಘಟನೆ ಹೊಸಪೇಟೆಯಲ್ಲಿ ನಡೆದಿದೆ. ಮತ್ತೊಂದೆಡೆ, ಕ್ಯಾಮರಾ ಲೇನ್ಸ್​ಗಳನ್ನು ಕಳ್ಳತನ ಮಾಡಿದ್ದ ಅಂತರರಾಜ್ಯ ಖದೀಮನನ್ನು ಹಂಪಿ‌ ಪೊಲೀಸರು ಬಂಧಿಸಿದ್ದಾರೆ.

Hampi police
ಪ್ರತ್ಯೇಕ ಎರಡು ಅಪಘಾತ ಇಬ್ಬರ ಸಾವು, ಹಂಪಿ ಪೊಲೀಸರಿಂದ ಅಂತರ್​ರಾಜ್ಯ ಕಳ್ಳನ ಬಂಧನ..
author img

By ETV Bharat Karnataka Team

Published : Sep 12, 2023, 9:20 AM IST

ವಿಜಯನಗರ: ಪ್ರತ್ಯೇಕ ಅಪಘಾತ ಪ್ರಕರಣದಲ್ಲಿ ವಿದ್ಯಾರ್ಥಿ ಸೇರಿ ಇಬ್ಬರು ಮೃತಪಟ್ಟ ಘಟನೆ ಹೊಸಪೇಟೆಯಲ್ಲಿ ಇಂದು (ಮಂಗಳವಾರ) ನಡೆಯಿತು.

ಅಪಘಾತ ಪ್ರಕರಣ-1: ಹೊಸಪೇಟೆಯ ಬಳ್ಳಾರಿ ರಸ್ತೆಯಲ್ಲಿ ಬೈಕ್‌ಗೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದು ಕೊಪ್ಪಳ ಜಿಲ್ಲೆಯ ಗಿಣಿಗೇರಿಯ ವಿದ್ಯಾರ್ಥಿ ಪ್ರಜ್ವಲ್ (17) ಮೃತಪಟ್ಟಿದ್ದಾರೆ. ಮತ್ತೊಬ್ಬ ವಿದ್ಯಾರ್ಥಿ ಕೊಪ್ಪಳ ಜಿಲ್ಲೆಯ ಮುನಿರಬಾದ್‌ನ ಭರತ್ ಹಾಗೂ ಹೊಸಪೇಟೆ ಕಾರಿಗನೂರಿನ ಯುವಕ ಎನ್.ಎಸ್.ರಮೇಶ್ ಗಾಯಗೊಂಡಿದ್ದಾರೆ.

ಬಳ್ಳಾರಿ ರಸ್ತೆಯ ಮಾರ್ಗ ಮಧ್ಯೆಯಲ್ಲಿ ಪ್ರಜ್ವಲ್, ಭರತ್, ಎನ್.ಎಸ್.ರಮೇಶ್‌ ಮೂವರು ಒಂದೇ ಬೈಕ್‌ನಲ್ಲಿ ಸಂಚರಿಸುತ್ತಿದ್ದರು. ಈ ವೇಳೆ ಹಿಂಬದಿಯಿಂದ ಲಾರಿ ಡಿಕ್ಕಿಯಾಗಿದೆ. ಬೈಕ್​ನಲ್ಲಿದ್ದ ಪ್ರಜ್ವಲ್‌ ಮೈಮೇಲೆ ಲಾರಿ ಹರಿದಿದೆ. ಪ್ರಜ್ವಲ್‌ನನ್ನು ಧಾರವಾಡದ ಎಸ್‌ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಅಪಘಾತ ಪ್ರಕರಣ-2: ಬೈಕ್‌ಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ಹೊಸಪೇಟೆ ನಗರದ ಟಿ.ಬಿ.ಡ್ಯಾಂ ನಿವಾಸಿ ಗಾಳೆಪ್ಪ (45) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಗರದ ಸಿರಸಿನಕಲ್ಲು ಪ್ರದೇಶದ ಚಿತ್ತವಾಡಗೆಪ್ಪ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊಪ್ಪಳ ಕಡೆಯಿಂದ ಹೊಸಪೇಟೆಗೆ ಬರುವ ವೇಳೆ ಚಾಲಕ ಗೊರವರ ಶರಣಪ್ಪ ಟ್ರ್ಯಾಕ್ಟರ್ ಅನ್ನು ಅಜಾಗರಕತೆಯಿಂದ ಚಲಾಯಿಸಿದ್ದಾರೆ ಎನ್ನಲಾಗಿದೆ. ಬೈಕ್​ ಸವಾರ ಗಾಳೆಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಗಾಯಾಳು ಚಿತ್ತವಾಡಗೆಪ್ಪ ಪೊಲೀಸರಿಗೆ ದೂರು ನೀಡಿದ್ದಾರೆ.

Interstate thief arrested by Hampi police
ಹಂಪಿ ಪೊಲೀಸರಿಂದ ಅಂತರರಾಜ್ಯ ಕಳ್ಳನ ಬಂಧನ

ಅಂತರರಾಜ್ಯ ಕಳ್ಳ ಸೆರೆ: ಕ್ಯಾಮೆರಾದ ಲೇನ್ಸ್​ಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದ ಅಂತರರಾಜ್ಯ ಕಳ್ಳ ಹಂಪಿ‌ ಪೋಲಿಸರ ಕಾರ್ಯಚರಣೆಯಲ್ಲಿ ಸಿಕ್ಕಿಬಿದ್ದಿದ್ದಾನೆ. ಆಂಧ್ರಪ್ರದೇಶದ ಕಾರ್ತಿಕ್ ಚೌಧರಿ ಅಕ್ಕಿನೇನಿ ಬಂಧಿತ ಆರೋಪಿ. ತೆಲಂಗಾಣದ ಹೈದರಾಬಾದ್‌ನಲ್ಲಿ ಈತನನ್ನು ಬಂಧಿಸಲಾಗಿದೆ. ಕೆಲವು ದಿನಗಳ ಹಿಂದೆ ಬೆಂಗಳೂರಿನ ಪ್ರವೀಣ್ ಕುಮಾರ್ ಎಂಬವರು ಕ್ಯಾಮೆರಾ ಲೇನ್ಸ್​ಕಳ್ಳತನವಾಗಿರುವ ಕುರಿತು ಪ್ರಕರಣ ದಾಖಲಿಸಿದ್ದರು.

ಹಂಪಿ ಪೊಲೀಸರು ಕಾರ್ಯಾಚರಣೆ ನಡೆಸಿ, ಬಂಧಿತನಿಂದ 12.63 ಲಕ್ಷ ರೂ. ಬೆಲೆಬಾಳುವ ಫೋಟೋ ಶೂಟ್ ಲೇನ್ಸ್​ಗಳೂ ಸೇರಿ ಇತರೆ ವಸ್ತುಗಳು ಜಪ್ತಿ ಮಾಡಿದ್ದಾರೆ. ಹಂಪಿ ಸಿಪಿಐ, ಕೆ.ಶಿವರಾಜ್ ನೇತೃತ್ವದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಹಂಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಖೋಟಾನೋಟು ಸಾಗಣೆ: ಮಹಿಳೆಗೆ ಅಪರಾಧಿ ಎಂದು ಘೋಷಿಸಿ ನಾಳೆಗೆ ಶಿಕ್ಷೆ ಪ್ರಮಾಣ ಪ್ರಕಟಿಸಲಿಸಿರುವ ಎನ್ಐಎ ಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.