ಬಳ್ಳಾರಿ: ಸಿಡಿಲು ಬಡಿದು ಒಂದೂವರೆ ಲಕ್ಷ ರೂ. ಮೌಲ್ಯದ ಎರಡು ಎತ್ತುಗಳು ಸಾವನ್ನಪ್ಪಿರುವ ಘಟನೆ ಕೂಡ್ಲಿಗಿ ತಾಲೂಕಿನ ರಂಗನಾಥನ ಹಳ್ಳಿಯಲ್ಲಿ ನಡೆದಿದೆ. ರೈತ ಗಂಗಣ್ಣ ಎಂಬುವವರಿಗೆ ಸೇರಿದ ಎತ್ತುಗಳು ಇವಾಗಿವೆ.
ತಾಲೂಕಿನಲ್ಲಿ ಇಂದು ಮಧ್ಯಾಹ್ನ ಸಿಡಿಲು ಸಹಿತ ಭಾರಿ ಮಳೆ ಸುರಿದಿದೆ. ಮರಕ್ಕೆ ಕಟ್ಟಿಹಾಕಿದ್ದ ಎರಡು ಎತ್ತುಗಳಿಗೆ ಈ ವೇಳೆ ಸಿಡಿಲು ಬಡಿದಿದ್ದು, ಎತ್ತುಗಳು ಸ್ಥಳದಲ್ಲೇ ಸಾವನ್ನಪ್ಪಿವೆ ಎನ್ನಲಾಗುತ್ತಿದೆ.
ಸ್ಥಳಕ್ಕೆ ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.