ಹೊಸಪೇಟೆ(ವಿಜಯನಗರ): ಹೊಟ್ಟೆ ಪಾಡಿಗಾಗಿ ಗುಳೆಗೆ ಹೊರಟಿದ್ದ ಯುವಕರ ಬೈಕ್ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದ್ದು, ಪರಿಣಾಮ ಇಬ್ಬರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಂದು ಮುಂಜಾನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ಮೊರಬ ಕ್ರಾಸ್ ಬಳಿ ನಡೆದಿದೆ.
![hospet](https://etvbharatimages.akamaized.net/etvbharat/prod-images/12494292_thujpg.jpg)
ಶಂಕರ್ ನಾಯ್ಕ್( 30) ಪೀಕ್ಯಾ ನಾಯ್ಕ್( 50) ಮೃತರು. ಇವರು ಕೂಡ್ಲಿಗಿಯ ಗೋವಿಂದಗಿರಿ ತಾಂಡಾದಿಂದ ಮಂಡ್ಯಕ್ಕೆ ಕಬ್ಬು ಕಟಾವಿಗೆ ಗುಳೆ ಹೊರಟಿದ್ದರು. ಈ ಸಂದರ್ಭದಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದಿದ್ದು ದುರ್ಘಟನೆ ನಡೆದಿದೆ.
ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.