ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನ ಮೆಟ್ರಿಕಿ ಗ್ರಾಮದಲ್ಲಿ ಸಿಡಿಲು ಬಡಿದು ಎರಡು ಹಸುಗಳು ಸ್ಥಳದಲ್ಲೇ ಸಾವನ್ನಪ್ಪಿವೆ.
ಸಂಜೆಯ ವೇಳೆ ಬಿದ್ದ ಸಿಡಿಲಿಗೆ ಎತ್ತು, ಆಕಳು ಮೃತಪಟ್ಟಿವೆ. ಈ ಜಾನುವಾರುಗಳು ಮೆಟ್ರಿಕಿ ಗ್ರಾಮದ ಅಂಜಿನಪ್ಪ ಎಂಬುವರಿಗೆ ಸೇರಿದ್ದವು. ಭಾರೀ ಗಾಳಿಗೆ ಎರಡು ಮನೆಗಳ ಮೇಲ್ಛಾವಣೆಯೂ ಕೂಡ ಹಾರಿ ಹೋಗಿದೆ.
ಜಾನುವಾರು ಕಳೆದುಕೊಂಡ ರೈತ ಆತಂಕಕ್ಕೆ ಒಳಗಾಗಿದ್ದಾರೆ. ಇತ್ತ ಸೂರು ಕಳೆದುಕೊಂಡವರು ಸಂಕಷ್ಟಕ್ಕೆ ಸಿಲುಕಿದ್ದಾರೆ.