ETV Bharat / state

ಬಳ್ಳಾರಿಯಲ್ಲಿ ಇಬ್ಬರು ಸೋಂಕಿತರು ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್​​ - ಬಳ್ಳಾರಿ ಸೋಂಕಿತರ ಸಂಖ್ಯೆ

ಸೋಂಕಿನಿಂದ ಗುಣಮುಖರಾದ ಜಿಲ್ಲೆಯ ಇಬ್ಬರನ್ನು ಕೋವಿಡ್ ಜಿಲ್ಲಾಸ್ಪತ್ರೆಯಿಂದ ಇಂದು ಬಿಡುಗಡೆ ಮಾಡಲಾಯಿತು. ಡಿಸ್ಚಾರ್ಜ್ ಆದವರು ರೋಗಿ ಸಂಖ್ಯೆ ಪಿ- 657 ಹಾಗೂ ಪಿ- 712 ಹೊಸಪೇಟೆ ಮತ್ತು ಸಂಡೂರು ಮೂಲದವರಾಗಿದ್ದಾರೆ .

Two coronavirus infected people recovered today in Bellary
ಬಳ್ಳಾರಿಯಲ್ಲಿ ಮತ್ತಿಬ್ಬರು ಕೊರೊನಾ ಸೋಂಕಿತರು ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್​​
author img

By

Published : May 22, 2020, 10:56 PM IST

ಬಳ್ಳಾರಿ: ಕೊರೊನಾ ಸೋಂಕಿನಿಂದ ಗುಣಮುಖರಾದ ಜಿಲ್ಲೆಯ ಇಬ್ಬರನ್ನು ಕೋವಿಡ್ ಜಿಲ್ಲಾಸ್ಪತ್ರೆಯಿಂದ ಇಂದು ಬಿಡುಗಡೆ ಮಾಡಲಾಯಿತು.

ಈ ಮೂಲಕ ಕೋವಿಡ್ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾದವರ ಸಂಖ್ಯೆ 15ಕ್ಕೇರಿದ್ದು, ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 14ಕ್ಕೆ ಇಳಿಕೆಯಾಗಿದೆ. ಮುಂಬೈಯಿಂದ ಬಂದಿದ್ದ ಬಳ್ಳಾರಿ ತಾಲೂಕಿನ ನಾನಾ ಗ್ರಾಮಗಳ 11 ಮಂದಿಯಲ್ಲಿ‌ ಪಾಸಿಟಿವ್ ದೃಢಪಟ್ಟಿತ್ತು. ಜಿಲ್ಲೆಯಲ್ಲಿ ಇಲ್ಲಿಯವರೆಗೆ 30 ಮಂದಿ ಸೋಂಕಿತರಾದಂತಾಗಿದೆ. ಆ ಪೈಕಿ ಓರ್ವ ವೃದ್ಧ ಸಾವನ್ನಪ್ಪಿದ್ದ.

ರೋಗಿ ಸಂಖ್ಯೆ ಪಿ- 657 ಹಾಗೂ ಪಿ- 712 ಹೊಸಪೇಟೆ ಮತ್ತು ಸಂಡೂರು ಮೂಲದವರನ್ನು ಬಿಡುಗಡೆ ಮಾಡಲಾಗಿದೆ. ಜಿಲ್ಲಾಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ಚಪ್ಪಾಳೆ ತಟ್ಟುವ ಮೂಲಕ ಬೀಳ್ಕೊಟ್ಟರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್. ಬಸರೆಡ್ಡಿ ಮಾತನಾಡಿ, ಗುಣಮುಖರಾಗಿ ಡಿಸ್ಚಾರ್ಜ್​ ಆದವರನ್ನು 14 ದಿನಗಳವರೆಗೆ ಹೋಮ್ ಕ್ವಾರಂಟೈನ್ ಮತ್ತು 14 ದಿನಗಳ ಕಾಲ ಸೆಲ್ಫ್​​ ರಿಪೋರ್ಟಿಂಗ್ ಮಾಡಲಾಗುವುದು. ಜಿಲ್ಲಾ ಕಂಟ್ರೋಲ್ ರೂಮ್​​​​ ಮತ್ತು ಆರ್​​​​ಆರ್ ತಂಡದಿಂದ 28 ದಿನಗಳ ಕಾಲ ನಿಗಾವಹಿಸಲಾಗುವುದು. ಗುಣಮುಖರಾಗಿರುವವರ ಮನೆಗಳ ಸುತ್ತಮುತ್ತಲಿನ ಸ್ಥಳೀಯರಿಗೆ ಸೋಂಕಿನ ಕುರಿತು ಜಾಗೃತಿ ಮೂಡಿಸಲಾಗುವುದು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.