ETV Bharat / state

ವಿಜಯನಗರ: ಕೃಷಿ ಹೊಂಡಕ್ಕೆ ಬಿದ್ದು ಬಾಲಕರಿಬ್ಬರ ಸಾವು

ವಿಜಯನಗರ ಜಿಲ್ಲೆಯಲ್ಲಿ ಬಾಲಕರಿಬ್ಬರು ಕೃಷಿ ಹೊಂಡಕ್ಕೆ ಬಿದ್ದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

author img

By

Published : Feb 6, 2023, 6:47 AM IST

farm pit
ಕೃಷಿ ಹೊಂಡಕ್ಕೆ ಬಿದ್ದು ಸಾವನ್ನಪ್ಪಿದ ಬಾಲಕರಿಬ್ಬರು

ವಿಜಯನಗರ/ಬೆಂಗಳೂರು : ಜಿಲ್ಲೆಯ ಹಗರಿಬೊಮ್ಮನ ಹಳ್ಳಿ ತಾಲೂಕಿನ ಬನ್ನಿಕಲ್ಲು ಗ್ರಾಮದ ಇಬ್ಬರು ಬಾಲಕರು ಕೃಷಿಹೊಂಡದಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ. ಬಾಲಕರಾದ ಅಭಿ(15), ಜಿತೇಂದ್ರ (10) ಬನ್ನಿಕಲ್ಲು ಗ್ರಾಮದ ಮೃತ ದುರ್ದೈವಿಗಳಾಗಿದ್ದಾರೆ. ಬನ್ನಿಕಲ್ಲು ಗ್ರಾಮದ ವ್ಯಾಪ್ತಿಯ ಹಂಪಸಾಗರದ ನಾಗರಾಜ ಎಂಬುವರ ಕೃಷಿ ಹೊಂಡದಲ್ಲಿ ನೀರಿನಲ್ಲಿ ಮುಳುಗಿ ಬಾಲಕರು ಸಾವನ್ನಪ್ಪಿದ್ದಾರೆ.

ಬಾಲಕರ ಸಾವಿನಿಂದ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಉಪತಹಶಿಲ್ದಾರ ಶಂಕ್ರಪ್ಪ, ಎಎಸ್‌ಐ ಕರಿವೀರಪ್ಪ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೃತದೇಹಗಳನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಸದ್ಯ ಪ್ರಕರಣ ತಂಬ್ರಹಳ್ಳಿ ಠಾಣೆಯಲ್ಲಿ ದಾಖಲಾಗಿದೆ.

ತ್ಯಾಜ್ಯ ನೀರು ಸಂಸ್ಕರಣ ಘಟಕದಲ್ಲಿ ಇಬ್ಬರು ಕಾರ್ಮಿಕರು ಸಾವು: ಖಾಸಗಿ ಅಪಾರ್ಟ್‌ಮೆಂಟ್‌ನ ತ್ಯಾಜ್ಯ ನೀರು ಸಂಸ್ಕರಣ ಘಟಕದಲ್ಲಿ ಕೆಲಸ ಮಾಡುತ್ತಿದ್ದಾಗ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದು, ಕಾರಣ ಇನ್ನೂ ತಿಳಿದು ಬಂದಿಲ್ಲ. ಬಯೋ ಸೆಂಟರ್ ಇಂಡಿಯಾ ಐಎನ್​ಸಿ ಯ ಕಾರ್ಮಿಕರಾಗಿದ್ದ ತುಮಕೂರಿನ ಕೊರಟಗೆರೆ ತಾಲ್ಲೂಕಿನ ಗೊಲ್ಲರ ಹಟ್ಟಿಯ ರವಿಕುಮಾರ್ (29) ಹಾಗೂ ಒಡಿಶಾದ ದಿಲೀಪ್ ಕುಮಾರ್ ಜನಾ (25) ಮೃತರು.

ಕೋಣನಕುಂಟೆ ಕ್ರಾಸ್​ನ ಪ್ರೆಸ್ಟಿಜ್ ಪಾಲ್ಕನ್ ಸಿಟಿ ಅಪಾರ್ಟ್‌ಮೆಂಟ್‌ನಲ್ಲಿನ ತ್ಯಾಜ್ಯ ನೀರು ಸಂಸ್ಕರಣ ಘಟಕಕ್ಕೆ ಇಬ್ಬರೂ ಕಾರ್ಮಿಕರನ್ನು ನೇಮಿಸಲಾಗಿತ್ತು. ಶನಿವಾರ ಮಧ್ಯಾಹ್ನ 2 ಗಂಟೆಗೆ ಕೆಲಸಕ್ಕೆ ಹಾಜರಾಗಿದ್ದ ಇಬ್ಬರೂ ನೌಕರರು, ಕರ್ತವ್ಯ ನಿರ್ವಹಿಸುತ್ತಿದ್ದಾಗ ಸಂಜೆ 5 ಗಂಟೆಯಲ್ಲಿ ಮೇಲ್ವಿಚಾರಕ ರಮೇಶ್ ಬಂದು ವಿಚಾರಿಸಿಕೊಂಡು ಹೋಗಿದ್ದರು. ರಾತ್ರಿ 7.30ರಲ್ಲಿ ತನ್ನ ನೌಕರರಿಗೆ ಕರೆ ಮಾಡಿದಾಗ ಇಬ್ಬರೂ ಕರೆ ಸ್ವೀಕರಿಸಿಲ್ಲ. ಅನುಮಾನಗೊಂಡ ರಮೇಶ್ ಕೂಡಲೇ ಸೆಕ್ಯೂರಿಟಿ ಗಾರ್ಡ್‌ಗೆ ವಿಷಯ ತಿಳಿಸಿದ್ದರು. ಘಟಕದ ಬಳಿ ಹೋಗಿ ನೋಡಿದಾಗ ಇಬ್ಬರು ಪ್ರಜ್ಞೆ ತಪ್ಪಿ ಬಿದ್ದಿರುವುದು ಗೊತ್ತಾಗಿದೆ.

ವಿಷಯ ತಿಳಿದ ಕೋಣನಕುಂಟೆ ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿ 2 ಶವಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ವಿಷ ಅನಿಲ ಸೇವನೆ ಅಥವಾ ವಿದ್ಯುತ್ ಪ್ರವಹಿಸಿ ಮೃತಪಟ್ಟಿದ್ದಾರೆ ಎಂಬುದು ಇನ್ನೂ ಸಹ ನಿಗೂಢವಾಗಿಯೇ ಉಳಿದಿದೆ. ಇಬ್ಬರ ಮೃತದೇಹದ ಮೇಲೆ ಸುಟ್ಟ ಗಾಯವಾಗಿಲ್ಲ. ವಿಷ ಅನಿಲ ಸೇವನೆಗೂ ಸೂಕ್ತ ಕಾರಣ ಸಿಗುತ್ತಿಲ್ಲ. ಅದಕ್ಕಾಗಿ ಮರಣೋತ್ತರ ವರದಿ ಬಂದ ಮೇಲೆ ಖಚಿತ ಮಾಹಿತಿ ಲಭ್ಯವಾಗಲಿದೆ.

ಸದ್ಯ ಮೃತ ರವಿಕುಮಾರ್ ಪತ್ನಿ ಶಶಿಕಲಾ ನೀಡಿದ ದೂರಿನ ಮೇರೆಗೆ ಬಯೋ ಸೆಂಟರ್ ಇಂಡಿಯಾ ಐ ಎನ್​ ಸಿಯ ಮಾಲೀಕ ಮುಕ್ತಿಯಾರ್ ಅಹಮದ್, ಎಲೆಕ್ಟ್ರಿಕಲ್ ಇನ್‌ಚಾರ್ಜ್ ಪ್ರಭು, ಮೇಲ್ವಿಚಾರಕ ರಮೇಶ್, ಪ್ರೆಸ್ಟಿಜ್ ಪಾಲ್ಕರ್ ಸಿಟಿ ಅಪಾರ್ಟ್‌ಮೆಂಟ್ ವ್ಯವಸ್ಥಾಪಕ ಮತ್ತು ಮಾಲೀಕರ ವಿರುದ್ಧ ಎಫ್​ಐಆರ್​ ದಾಖಲು ಮಾಡಲಾಗಿದೆ. ನೌಕರರಿಗೆ ಸರಿಯಾದ ತರಬೇತಿ ನೀಡದೆ ನಿರ್ಲಕ್ಷ್ಯ ವಹಿಸಿದ ಆರೋಪದ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಕಾಂಪೌಂಡ್ ಹಾರಿ ಟೆರೇಸ್​​ ತಲುಪಿದ ಪ್ರಿಯಕರ: ಏಕಾಂತದಲ್ಲಿದ್ದಾಗ ದಿಢೀರ್​ ಬಂದ ಪ್ರೇಯಸಿಯ ತಾಯಿ.. ನಡೀತು ದುರಂತ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.