ETV Bharat / state

ತುಂಗಭದ್ರಾ ಜಲಾಶಯದ ಒಳಹರಿವಿನಲ್ಲಿ ಗಣನೀಯ ಏರಿಳಿತ

ಮಲೆನಾಡಿನಲ್ಲಿ ಭಾರಿ ಮಳೆಯಾಗದ ಹಿನ್ನೆಲೆ ತುಂಗೆಯಲ್ಲಿ ಸಾಕಷ್ಟು ನೀರಿಲ್ಲ. ಇನ್ನು 133 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವಿದ್ದರೂ ಹೂಳಿನಿಂದಾಗಿ 33 ಟಿಎಂಸಿಯಷ್ಟು ನೀರು ಸಂಗ್ರಹದ ಸಾಮರ್ಥ್ಯ ಕಡಿಮೆಯಾಗಿದೆ. ಹೂಳೆತ್ತುವ ಬಗ್ಗೆ ಸರ್ಕಾರ ಕೇವಲ ಮಾತಿನಲ್ಲಿ ಕಾಲಹರಣ ಮಾಡುತ್ತಿದೆ ಎಂದು ರೈತರು ದೂರಿದ್ದಾರೆ.

ತುಂಗಭದ್ರಾ ಡ್ಯಾಂ
author img

By

Published : Jul 15, 2019, 7:44 PM IST

ಬಳ್ಳಾರಿ: ಹೈದರಾಬಾದ್​​ ಕರ್ನಾಟಕ ಭಾಗದ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯಕ್ಕೆ ಕಳೆದೊಂದು ವಾರದಲ್ಲೇ ಒಳಹರಿವು ಗಣನೀಯ ಪ್ರಮಾಣದಲ್ಲಿ ಏರಿಳಿತ ಕಂಡಿದೆ.

ಜುಲೈ 9ರಂದು 14,911 ಕ್ಯೂಸೆಕ್ ನೀರು, 10ರಂದು 12,875 ಕ್ಯೂಸೆಕ್ ನೀರು ಹರಿದು ಬಂದಿದ್ದು, ಮೊದಲ ದಿನಕ್ಕಿಂತಲೂ ಎರಡನೇ ದಿನ 2,036 ಕ್ಯೂಸೆಕ್​​ನಷ್ಟು ಒಳಹರಿವು ತಗ್ಗಿದೆ. 11ರಂದು 12,932 ಕ್ಯೂಸೆಕ್​​ನಷ್ಟು ಒಳಹರಿವು ಇದ್ದು, ಕೇವಲ 57 ಕ್ಯೂಸೆಕ್​​ನಷ್ಟು ಒಳ ಹರಿವು ಹೆಚ್ಚಿದೆ. ನಾಲ್ಕನೇ (12ರಂದು) ದಿನಕ್ಕೆ ಅಂದಾಜು 20,560 ಕ್ಯೂಸೆಕ್​​ನಷ್ಟು ನೀರು ಹರಿದುಬಂದಿದ್ದು, 7628 ಕ್ಯೂಸೆಕ್ ನೀರು ಒಳಹರಿವು ಹೆಚ್ಚಿದೆ. ಐದನೇ ದಿನಕ್ಕೆ (13 ರಂದು) ಅಂದಾಜು 26,945 ಕ್ಯೂಸೆಕ್ ನೀರು ಹರಿದುಬಂದಿದೆ. ಆರನೇ ದಿನಕ್ಕೆ (14ರಂದು) 20,061 ಕ್ಯೂಸೆಕ್ ನೀರು ಹರಿದುಬಂದಿದೆ. ಏಳನೇ ದಿನಕ್ಕೆ (15ರಂದು) ಕೇವಲ 15,026 ಕ್ಯೂಸೆಕ್ ನೀರು ಬಂದಿದೆ.

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಮಳೆ ಶುರುವಾಗಿ ಒಂದೂವರೆ ತಿಂಗಳಾದ್ರೂ ಸಮರ್ಪಕ ಮಳೆ‌ ಸುರಿದಿಲ್ಲ. ಈವರೆಗೂ ಕೇವಲ 10ರಷ್ಟು ಮಾತ್ರ ಬಿತ್ತನೆ ಕಾರ್ಯವಾಗಿದೆ. ಉಳಿದಂತೆ ಮಳೆಯಿಲ್ಲ, ಬಿತ್ತನೆಯಿಲ್ಲ. ಜಲಾಶಯಕ್ಕಾದರೂ ನೀರು ಬಂದಿದೆಯಾ ಎಂದುಕೊಂಡರೆ ಅದೂ ಇಲ್ಲ. ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಯ ರೈತರು ಹಾಗೂ ನೆರೆಯ ಆಂಧ್ರ ಹಾಗೂ ತೆಲಂಗಾಣದ ರೈತರು ಇದೇ ಟಿಬಿ ಡ್ಯಾಂ ನೀರು ನಂಬಿದ್ದಾರೆ.

ತುಂಗಭದ್ರಾ ಜಲಾಶಯ

ಕಳೆದೊಂದು ವಾರದಿಂದ ಜಲಾಶಯಕ್ಕೆ ಐದು ಟಿಎಂಸಿ ನೀರು ಬಂದಿದೆ. ಸದ್ಯ ಜಲಾಶಯದಲ್ಲಿ 9 ಟಿಎಂಸಿ ನೀರು ಸಂಗ್ರಹವಾಗಿದ್ದು, 15 ಸಾವಿರ ಕ್ಯೂಸೆಕ್​​ ನೀರು ಒಳಹರಿವು ಇದೆ. ಕಳೆದ ವರ್ಷ ಬೆಳೆಗೆ ಡ್ಯಾಂನಿಂದ ನೀರು ಪಡೆದಿದ್ದೆವು. ಈ ಬಾರಿ ಇದೀಗ ಡ್ಯಾಂಗೆ ನೀರು ಬರುತ್ತದೋ ಇಲ್ಲವೋ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ಇದೇ ತಿಂಗಳಲ್ಲಿ 50 ಟಿಎಂಸಿ ನೀರು ಸಂಗ್ರಹವಾಗಿತ್ತು. ಡ್ಯಾಂ ತುಂಬಿ ಬರೋಬ್ಬರಿ 230 ಟಿಎಂಸಿ ನೀರನ್ನು ನದಿ ಮೂಲಕ ಹರಿಬಿಡಲಾಗಿತ್ತು. ಈ ಬಾರಿ ಜುಲೈ ತಿಂಗಳಾದ್ರೂ ಕೇವಲ ಏಳು ಟಿಎಂಸಿ ನೀರು ಬಂದಿದೆ. ಕಳೆದ ವರ್ಷ ಆಗಸ್ಟ್ - ಜುಲೈ ತಿಂಗಳ ಅಂತ್ಯದ ವೇಳೆಗೆ ಜಲಾಶಯದಲ್ಲಿ 100 ಟಿಎಂಸಿ ನೀರು ಸಂಗ್ರಹವಾಗಿತ್ತು.

Intro:ವಾರದಲ್ಲೇ ಏರಿಳಿತ ಕಂಡಿರುವ ತುಂಗಭದ್ರಾ ಜಲಾಶಯದ ಒಳಹರಿವು ಹೀಗಿದೆ ನೋಡಿ!
ಬಳ್ಳಾರಿ: ಹೈದರಾಬಾದ ಕರ್ನಾಟಕ ಭಾಗದ ರೈತರ ಜೀವನಾಡಿ ಯಾಗಿರುವ ತುಂಗಭದ್ರಾ ಜಲಾಶಯಕ್ಕೆ ಕಳೆದೊಂದು ವಾರದಲ್ಲೇ ಒಳಹರಿವು ಗಣನೀಯ ಪ್ರಮಾಣದಲ್ಲಿ ಏರಿಳಿತ ಕಂಡಿದೆ.
ಜುಲೈ 9 ರಂದು ಎಲ್ಲಿಂದಲೋ ಎಕಾಏಕಿ 14,911 ಕ್ಯೂಸೆಕ್
ನಷ್ಟು ನೀರು ಈ ಜಲಾಶಯಕ್ಕೆ ಹರಿದುಬಂದಿದೆ. 10 ರಂದು 12,875 ಕ್ಯೂಸೆಕ್ ನಷ್ಟು ನೀರು ಹರಿದುಬಂದಿದ್ದು, ಮೊದಲನೇ ದಿನಕ್ಕಿಂತಲೂ ಎರಡನೇ ದಿನ 2,036 ಕ್ಯೂಸೆಕ್ ನಷ್ಟು ಒಳಹರಿವು ತಗ್ಗಿದೆ. ಮೂರನೇ (11ರಂದು) ದಿನಕ್ಕೆ 12,932 ಕ್ಯೂಸೆಕ್ ನಷ್ಟು ಒಳಹರಿವು ಹರಿದುಬಂದಿದ್ದು, ಕೇವಲ 57 ಕ್ಯೂಸೆಕ್ ನಷ್ಟು ಒಳ ಹರಿವು ಹೆಚ್ಚಿದೆ.
ನಾಲ್ಕನೇ (12ರಂದು) ದಿನಕ್ಕೆ ಅಂದಾಜು 20,560 ಕ್ಯೂಸೆಕ್
ನಷ್ಟು ನೀರು ಹರಿದುಬಂದಿದ್ದು, 7628 ಕ್ಯೂಸೆಕ್ ನೀರು ಒಳ ಹರಿವು ಹೆಚ್ಚಿದೆ. ಐದನೇ ದಿನಕ್ಕೆ (13 ರಂದು) ಅಂದಾಜು 26,945 ಕ್ಯೂಸೆಕ್ ನಷ್ಟು ನೀರು ಹರಿದುಬಂದಿದೆ. ಆರನೇ ದಿನಕ್ಕೆ (14ರಂದು) 20,061 ಕ್ಯೂಸೆಕ್ ನಷ್ಟು ನೀರು ಹರಿದುಬಂದಿದೆ. ಏಳನೇ ದಿನಕ್ಕೆ (15ರಂದು) ಕೇವಲ 15,026 ಕ್ಯೂಸೆಕ್ ನಷ್ಟು ನೀರು ಒಳಹರಿವಿದೆ.
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಮಳೆ ಶುರುವಾಗಿ ಒಂದೂವರೆ ತಿಂಗಳಾದ್ರೂ ಸಮರ್ಪಕ ಮಳೆ‌ ಸುರಿದಿಲ್ಲ.
ಈವರೆಗೂ ಕೇವಲ 10ರಷ್ಟು ಮಾತ್ರ ಬಿತ್ತನೆ ಕಾರ್ಯವಾಗಿದೆ. ಉಳಿದಂತೆ ಮಳೆಯಿಲ್ಲ, ಬಿತ್ತನೆಯಿಲ್ಲ. ಜಲಾಶಯಕ್ಕಾದರೂ ನೀರು ಬಂದಿದೆಯಾ ಎಂದುಕೊಂಡರೆ ಅದೂ ಇರಲಿಲ್ಲ. ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಯ ರೈತರು ಹಾಗೂ ನೆರೆಯ ಆಂಧ್ರ ಹಾಗೂ ತೆಲಂಗಾಣದ ರೈತರು ಇದೇ ಟಿಬಿ ಡ್ಯಾಂ ನೀರು ನಂಬಿದ್ದಾರೆ.
ಕಳೆದೊಂದು ವಾರದಿಂದ ಜಲಾಶಯಕ್ಕೆ ಐದು ಟಿಎಂಸಿ ನೀರು ಆಗಮಿಸಿದೆ. ಸದ್ಯ ಜಲಾಶಯಕ್ಕೆ 9 ಟಿಎಂಸಿ ನೀರು ಸಂಗ್ರಹ ವಾಗಿದ್ದು, 15 ಸಾವಿರ ಕ್ಯೂಸೆಕ್ಸ್ ನೀರು ಒಳಹರಿವು ಇದೆ. ಕಳೆದ ವರ್ಷ ಈ ಸುಗ್ಗಿಯ ಬೆಳೆಗೆ ಡ್ಯಾಂನಿಂದ ನೀರು ಪಡೆದಿದ್ದೆವು, ಈ ಬಾರಿ ಇದೀಗ ಡ್ಯಾಂಗೆ ನೀರು ಆಗಮಿಸುತ್ತಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
Body:ಕಳೆದ ವರ್ಷ ತುಂಗಭದ್ರಾ ಜಲಾಶಯಕ್ಕೆ ಈವತ್ತಿಗೆ 50 ಟಿಎಂಸಿ ನೀರು ಸಂಗ್ರಹವಾಗಿತ್ತು. ಡ್ಯಾಂ ತುಂಬಿ ಬರೋಬ್ಬರಿ 230 ಟಿಎಂಸಿ ನೀರನ್ನು ನದಿ ಮೂಲಕ ಹರಿಬಿಡಲಾಗಿತ್ತು. ಈ ಬಾರಿ ಜುಲೈ ತಿಂಗಳಾದ್ರೂ ಕೇವಲ ಏಳು ಟಿಎಂಸಿ ನೀರು ಬಂದಿದೆ. ಕಳೆದ
ವರ್ಷ ಆಗಸ್ಟ್ ಜುಲೈ ತಿಂಗಳ ಅಂತ್ಯದ ವೇಳೆಗೆ ಜಲಾಶಯದಲ್ಲಿ 100 ಟಿಎಂಸಿ ಸಂಗ್ರಹವಾಗಿತ್ತು. ಆದರೆ ಈ ಬಾರಿ ಆ ಪರಿಸ್ಥಿತಿ ಕಷ್ಟವೆಂದನಿಸುತ್ತದೆ. ಸದ್ಯ ಜಲಾಶಯ ತುಂಬಿದರೆ ಸಾಕು ಎಂದನಿಸುತ್ತಿದೆ.
ಜಲಾಶಯಕ್ಕೆ ನೀರು ಬಿಡುವುದು ಮಲೆನಾಡಿನಲ್ಲಿ ಇನ್ನಷ್ಟು ಉತ್ತಮ ಮಳೆಯಾದರೆ ಮಾತ್ರ ಸಾಧ್ಯ. ಪಶ್ಚಿಮಘಟ್ಟದಲ್ಲಿ ಹೆಚ್ಚಿನ ಮಳೆಯಾಗದ್ದರಿಂದ ಡ್ಯಾಂ ತುಂಬೋದು ಕಷ್ಟ ಸಾಧ್ಯವಾಗಲಿದೆ. ಈ ಕಾರಣಕ್ಕೆ ಸಂಗ್ರಹವಾಗುವ ಜಲಾಶಯದ ನೀರನ್ನು ವ್ಯರ್ಥ ವಾಗದಂತೆ, ಹಿತಮಿತವಾಗಿ ಬಳಕೆ ಮಾಡುವುದಕ್ಕೆ ಟಿಬಿ ಬೋರ್ಡ್ ಗಮನ ಕೊಡಬೇಕು. ಒಂದು ಹನಿ ನೀರಿಗೆ ತತ್ವಾರವಿರುವ ಸಂದರ್ಭದಲ್ಲಿ ಜಲಾಶಯದ ನೀರು ಉಳಿಸಿಕೊಳ್ಳಬೇಕು ಎಂಬುದು ರೈತರ ಅಭಿಪ್ರಾಯ.
ಜಲಾಶಯದಲ್ಲಿ 133 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ವಿದ್ದರೂ, ಹೂಳಿನಿಂದಾಗಿ 33 ಟಿಎಂಸಿಯಷ್ಟು ನೀರು ಸಂಗ್ರಹದ ಸಾಮರ್ಥ್ಯ ಕಡಿಮೆಯಾಗಿದೆ. ಹೂಳೆತ್ತುವ ಬಗ್ಗೆ ಸರ್ಕಾರ ಕೇವಲ ಮಾತಿನಲ್ಲಿ ಕಾಲಹರಣ ಮಾಡುತ್ತಿದೆ ಎಂದು ದೂರಿದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_02_TBDAM_INFLOW_DICREES_STORY_7203310

KN_BLY_02d_TBDAM_INFLOW_DICREES_STORY_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.