ಹೊಸಪೇಟೆ(ವಿಜಯನಗರ): ವ್ಯಾಪಕ ಮಳೆಯಿಂದ ತುಂಗಭದ್ರಾ ಜಲಾಶಯ ಈಗಾಗಲೇ ಭರ್ತಿಯಾಗಿದೆ. ಡ್ಯಾಂನ ಸೌಂದರ್ಯವನ್ನು ಹೆಚ್ಚಿಸುವಲ್ಲಿ ವಿದ್ಯುತ್ ದೀಪಗಳು ಇನ್ನಷ್ಟು ಸಹಾಯಕವಾಗಿವೆ. ಜಲಾಶಯ ಹಗಲು, ರಾತ್ರಿ ವೇಳೆ ಈ ರೀತಿ ಅತ್ಯಂತ ಆಕರ್ಷಕವಾಗಿ ಕಾಣುತ್ತಿದೆ. ಈ ವಿಡಿಯೋ ವೀಕ್ಷಿಸಿ..
ಜಲಾಶಯದ 33 ಕ್ರಸ್ಟ್ ಗೇಟ್ ಮೂಲಕ ನದಿಗೆ ನೀರು ಹರಿಸಲಾಗುತ್ತಿದೆ. ಗೇಟ್‌ಗಳಿಗೆ ವಿವಿಧ ಬಣ್ಣಗಳ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ದೂರದಿಂದ ನೋಡಿದಾಗ ರಾತ್ರಿ ಸಮಯದಲ್ಲಿ ನೀರಿಗೆ ಬಣ್ಣ ಹಚ್ಚಿದಂತೆ ಭಾಸವಾಗುತ್ತಿದೆ. ಅಲ್ಲದೇ, ಜಲಾಶಯದ ಪಾರ್ಕ್ಗೂ ಜೀವಕಳೆ ಬಂದಿದೆ. ಕತ್ತಲಾಗುತ್ತಿದ್ದಂತೆ ಜಲಾಶಯದ ಸೌಂದರ್ಯ ಇಮ್ಮಡಿಯಾಗುತ್ತಿದೆ.
ನಿನ್ನೆ(ಭಾನುವಾರ) ನದಿಗೆ 10 ರಿಂದ 20 ಗೇಟ್ ಮೂಲಕ ನೀರು ಹರಿಬಿಡಲಾಗಿತ್ತು. ಗೇಟ್ ಯಾವಾಗ ತೆರೆಯುತ್ತಾರೋ ಎಂಬುದನ್ನೇ ಕಾತುರದಿಂದ ಕಾಯುತ್ತಿದ್ದ ಜನರಿಗೆ ಸೌಂದರ್ಯದ ದರ್ಶನವಾಗಿದೆ.
ಇದನ್ನೂ ಓದಿ: ಇಂದು ಯಡಿಯೂರಪ್ಪಾಜಿ ಜೊತೆ ನನ್ನ ಪಯಣದ ಅತ್ಯಂತ ಬೇಸರದ ದಿನ: ರೇಣುಕಾಚಾರ್ಯ