ETV Bharat / state

ಬಳ್ಳಾರಿಯಲ್ಲಿ ಒಂದು ಗಂಟೆ ಬೆಂಗಳೂರು ರಸ್ತೆ ಜಾಮ್: ವಾಹನ ಸವಾರರ ಪರದಾಟ - traffic jam news

ಗಣಿನಾಡು ಬಳ್ಳಾರಿಯಲ್ಲಿ ಇತ್ತೀಚೆಗೆ ಲಾರಿಗಳ ಸಂಚಾರ ಹೆಚ್ಚಾಗಿರುವ ಕಾರಣ , ಟ್ರಾಫಿಕ್​ ಸಮಸ್ಯೆ ಹೆಚ್ಚಾಗುತ್ತಿದೆ. ಇದ್ರಿಂದಾಗಿ ಇತರ ವಾಹನ ಸವಾರರು ಪರದಾಡುವಂತಾಗಿದೆ.

traffic jam
ವಾಹನ ಸವಾರರ ಪರದಾಟ
author img

By

Published : Oct 11, 2020, 4:15 PM IST

ಬಳ್ಳಾರಿ : ಜಿಲ್ಲೆಯ ಹೊರ ವಲಯದ ಬೆಂಗಳೂರು ರಸ್ತೆಯಲ್ಲಿನ ಎ.ಪಿ.ಎಂ.ಸಿಯಿಂದ ಹಿಡಿದು ಮುಂಡರಗಿವರೆಗೆ ಹಾಗೆಯೇ ಬೈಪಾಸ್​ನಲ್ಲಿ ಕೂಡ ಗಂಟೆಗಟ್ಟಲೆ ಸಂಪೂರ್ಣ ವಾಹನ ದಟ್ಟನೆ ಆಗಿದೆ.

ವಾಹನ ಸವಾರರ ಪರದಾಟ

ಬೆಂಗಳೂರು ರಸ್ತೆಯಿಂದ ಹೊಸಪೇಟೆ ಬೈಪಾಸ್ ಹೋಗುವ ಹಾಗೂ ಹೊಸಪೇಟೆಯಿಂದ ಬೆಂಗಳೂರು ಬೈಪಾಸ್‌ಗೆ ಬರುವ ವಾಹನಗಳಿಂದ ತಾಸುಗಟ್ಟಲೆ ರಸ್ತೆಯಲ್ಲಿಯೇ ಕಾಯುವ ಸ್ಥಿತಿ ಉಂಟಾಗುತ್ತಿದೆ.

ನಗರದಲ್ಲಿ ಲಾರಿಗಳ ಸಂಚಾರ ಹೆಚ್ಚಾಗಿರುವುದರಿಂದ ಈ ರೀತಿಯ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗುತ್ತಿದೆ ಎಂದು ಸ್ಥಳೀಯ ವಾಹನ ಸವಾರರು ತಿಳಿಸಿದರು. ಈ ಸಮಯದಲ್ಲಿ ಬಳ್ಳಾರಿ ಸಂಚಾರಿ ಪೊಲೀಸ ಸಿಬ್ಬಂದಿ ಆಗಮಿಸಿ ರಸ್ತೆಯಲ್ಲಿ ಅಡ್ಡವಾಗಿ ಚಲಿಸಿದ ಲಾರಿ ಚಾಲಕರಿಗೆ ಬೈಯ್ದು, ಬೈಕ್, ಕಾರು ಆಟೋ, ಬಸ್​​ಗಳ ಚಾಲಕರಿಗೆ ಟ್ರಾಫಿಕ್ ಜಾಮ್ ಕ್ಲಿಯರ್ ಮಾಡಿಕೊಟ್ಟರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.