ETV Bharat / state

ವಿಎಸ್​ಕೆ ವಿಶ್ವ ವಿದ್ಯಾಲಯ: ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸಲು ಸಹಾಯವಾಣಿ ಕೇಂದ್ರ ಆರಂಭ

author img

By

Published : Aug 20, 2020, 10:44 PM IST

ಕೊರೊನಾ ಕಾಲದಲ್ಲಿ ಶ್ರೀಕೃಷ್ಣ ದೇವರಾಜ ವಿಶ್ವವಿದ್ಯಾಲಯವೂ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸಲು ಸಹಾಯವಾಣಿ ಆರಂಭಿಸಿದೆ. ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳ ಇತ್ಯರ್ಥಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂದು ಕುಲಪತಿ ಪ್ರೊ.ಸಿದ್ದು ಪಿ.ಅಲಗೂರ ಭರವಸೆ ನೀಡಿದರು.

toll free call starts for students
ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸಲು ಸಹಾಯವಾಣಿ ಕೇಂದ್ರ ಆರಂಭ

ಬಳ್ಳಾರಿ: ಮಹಾಮಾರಿ ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯವು ಸಹಾಯವಾಣಿ ಕೇಂದ್ರ ಸ್ಥಾಪಿಸಿದ್ದು, ವಿದ್ಯಾರ್ಥಿಗಳಿಗೆ ಎದುರಾಗುತ್ತಿರುವ ಸಮಸ್ಯೆಗಳನ್ನು ಆಲಿಸಲು ಮುಂದಾಗಿತ್ತು.

ಕುಲಪತಿ ಪ್ರೊ.ಸಿದ್ದು ಪಿ.ಅಲಗೂರ

ಕಲ್ಯಾಣ ಕರ್ನಾಟಕ ಭಾಗದ ಅವಳಿ ಜಿಲ್ಲೆಗಳಾದ ಕೊಪ್ಪಳ ಮತ್ತು ಬಳ್ಳಾರಿ ವ್ಯಾಪ್ತಿಗೆ ಒಳಪಡುವ ಕಾಲೇಜುಗಳಿಗೆ ಪ್ರವೇಶಾತಿ ಸೇರಿದಂತೆ ಇನ್ನಿತರೆ ಸಮಸ್ಯೆಗಳು ಎದುರಾದ ಹಿನ್ನೆಲೆ ಈ ಸಹಾಯವಾಣಿ ನೆರವಾಗಿದೆ. ಕುಲಪತಿ ಪ್ರೊ.ಸಿದ್ಧು ಪಿ.ಅಲಗೂರ ಅವರ ನೇತೃತ್ವದ ಈ ಸಹಾಯವಾಣಿ ಕೇಂದ್ರವನ್ನು ಶುರು ಮಾಡಲಾಗಿದೆ.

ಆಗಸ್ಟ್‌ 15ರ ಸ್ವಾತಂತ್ರ್ಯ ದಿನಾಚರಣೆ ದಿನದಂದು ಟೋಲ್ ಫ್ರೀ ಸಂಖ್ಯೆ - 8800995774 ಸಹಾಯವಾಣಿ ಕೇಂದ್ರವನ್ನು ಸ್ಥಾಪಿಸಿದ್ದು, ಕೇವಲ ಒಂದೇ ದಿನದಲ್ಲಿ ಬರೋಬ್ಬರಿ 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕರೆ ಮಾಡಿ, ತಮ್ಮ ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಳ್ಳಲು ಮುಂದಾಗಿದ್ದಾರೆ.

ಅಂಕಪಟ್ಟಿ ದೋಷ, ವಿತರಣೆಯಲ್ಲಿ ವಿಳಂಬ ನೀತಿ, ಶೈಕ್ಷಣಿಕ ವೇಳಾಪಟ್ಟಿಯಲ್ಲಿನ ವ್ಯತ್ಯಾಸ, ಸುತ್ತೋಲೆಗಳ ಮಾಹಿತಿ ಇಲ್ಲದಿರೋದು ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಇತ್ಯರ್ಥಪಡಿಸಿಕೊಳ್ಳಲು ಇದು ಅವಕಾಶ ಮಾಡಿಕೊಟ್ಟಿದೆ ಎಂಬುದು ವಿದ್ಯಾರ್ಥಿಗಳ ಮಾತಾಗಿದೆ.

ಸಹಾಯವಾಣಿ ಕೇಂದ್ರದ ಕಾರ್ಯವ್ಯಾಪ್ತಿ: ಪದವಿ, ಸ್ನಾತಕೋತ್ತರ ಹಾಗೂ ಪರೀಕ್ಷಾ ವಿಭಾಗ, ಸಿಡಿಸಿ ಮತ್ತು ಹಣಕಾಸು ವಿಭಾಗಕ್ಕೆ ಸಂಬಂಧಿಸಿದಂತೆ ಈ ಸಹಾಯವಾಣಿ ಕಾರ್ಯ ನಿರ್ವಹಿಸಲಿದೆ.

ವಿಎಸ್​ಕೆ ವಿವಿಗೆ ಸ್ವಾಗತ ಎಂದ ಬಳಿಕ ಯಾವ ವಿಭಾಗದ ಸಮಸ್ಯೆ ಇದೆ ಎಂಬ ಆಯ್ಕೆ ಬರುತ್ತದೆ. ಅದರಲ್ಲಿ ಆ ಸಂಖ್ಯೆಯ ಬಟನ್ ಆಯ್ಕೆ ಮಾಡಿಕೊಳ್ಳಬೇಕು. ಸಂಬಂಧಿಸಿದ ವಿಭಾಗಕ್ಕೆ ಕರೆ ತಲುಪುತ್ತದೆ. ಮೊದಲು ಸಹಾಯವಾಣಿ ಕರೆಯು ಸಂಬಂಧಪಟ್ಟ ಕ್ಲರ್ಕ್​ಗೆ ಸ್ವೀಕರಿಸುತ್ತಾರೆ. ಅವರ ಬಳಿ ಮಾಹಿತಿ ಲಭ್ಯವಾಗದಿದ್ದರೇ, ಸಹಾಯಕ ರಿಜಿಸ್ಟರ್ ಬಳಿಗೆ ಕರೆ ಸಂಪರ್ಕ ಹೊಂದುತ್ತದೆ ಎಂದು ಕುಲಪತಿ ಡಾ.ಪಿ.ಸಿದ್ದು.ಅಲಗೂರು ಮಾಹಿತಿ ನೀಡಿದರು.

ಅಲ್ಲಿಯೂ ಮಾಹಿತಿ ಲಭ್ಯವಾಗದಿದ್ದರೇ ಡೆಪ್ಯೂಟಿ ರಿಜಿಸ್ಟರ್​ಗೆ ಸಂಪರ್ಕಿಸಬಹುರು. ಇದು ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ಮಾಹಿತಿ ಒದಗಿಸುವಂತಹ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಈ ಸಹಾಯವಾಣಿ ಕೇಂದ್ರ ತುಂಬಾ ಸಹಕಾರಿಯಾಗಲಿದೆ. ಈ ಕೋವಿಡ್ ಸಂದರ್ಭದಲ್ಲಿ ದೂರದ ಊರುಗಳಿಂದ ವಿವಿಗೆ ಅಥವಾ ಸಂಬಂಧಿಸಿದ ಕಾಲೇಜುಗಳಿಗೆ ಹೋಗಲಾಗದೇ ಸಹಾಯವಾಣಿ ಕೇಂದ್ರಕ್ಕೆ ಕರೆ ಮಾಡಲು ಹೆಚ್ಚು ಅನುಕೂಲವಾಗಿದೆ. ಇಡೀ ರಾಜ್ಯದಲ್ಲಿಯೇ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮೊದಲ ಬಾರಿಗೆ ಸಹಾಯವಾಣಿ ಕೇಂದ್ರವನ್ನು ಆರಂಭಿಸಿದ ಕೀರ್ತಿ ಹಾಗೂ ಹೆಗ್ಗಳಿಕೆಗೆ ವಿಎಸ್​ ಕೆ ವಿವಿ ಪಾತ್ರವಾಗಿದೆ ಎಂದು ಕುಲಪತಿ ಪ್ರೊ.ಪಿ.ಸಿದ್ದು ಅಲಗೂರ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.