ಹೊಸಪೇಟೆ : ನ್ಯಾಯಮೂರ್ತಿ ಹೆಚ್ ಎನ್ ನಾಗಮೋಹನದಾಸ್ ಆಯೋಗದ ವರದಿಯನ್ನು ಅಧಿವೇಶನದಲ್ಲಿ ಮಂಡಿಸಿ ಚರ್ಚೆಗೆ ಒಳಪಡಿಸಬೇಕೆಂದು ದಲಿತ ಹಕ್ಕುಗಳ ಹೋರಾಟ ಸಮಿತಿ ಹಾಗೂ ಕರ್ನಾಟಕ ಸಮಿತಿ ಕಾರ್ಯಕರ್ತರು ಅರಣ್ಯ ಸಚಿವ ಆನಂದ ಸಿಂಗ್ ಅವರಿಗೆ ಮನವಿ ಸಲ್ಲಿಸಿದರು.
ಈ ಹಿಂದೆ ಸರ್ಕಾರ ಎಸ್ಸಿ,ಎಸ್ಟಿ ಜನಾಂಗದ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಪರಿಸ್ಥಿತಿ ಅರಿಯಲು ಹಾಗೂ ಪರಿಹಾರಕ್ಕಾಗಿ ಆಯೋಗ ರಚಿಸಿ ವರದಿ ನೀಡಲು ಸೂಚಿಸಿತ್ತು. ಆದರೆ, ಸರ್ಕಾರಗಳು ವರದಿ ಅನುಷ್ಠಾನ ಮಾಡಿಲ್ಲ. ಹಾಗಾಗಿ, ವರದಿಗಳ ಅಂಶಗಳನ್ನು ಚರ್ಚೆಗೆ ಒಳಪಡಿಸಿ ಜಾರಿಗೆ ತರಬೇಕೆಂದು ಆಗ್ರಹಿಸಿದರು.
ಎಸ್ಸಿ,ಎಸ್ಟಿ ಜನಸಂಖ್ಯೆ ರಾಜ್ಯದಲ್ಲಿ ಶೇ.8ರಷ್ಟಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಎಸ್ಟಿ 7.5ರಷ್ಟು ಜಾರಿಗೆ ಮಾಡಲಾಗುವುದು ಎಂದು ಭರವಸೆ ನೀಡಿತ್ತು. ಅಲ್ಲದೇ ಎಸ್ಸಿ ಜನಸಂಖ್ಯೆ ಅನುಗುಣವಾಗಿ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಮುಖಂಡರಾದ ಮರಡಿ ಜಂಬಯ್ಯನಾಯಕ, ಆರ್.ಭಾಸ್ಕರರೆಡ್ಡಿ, ಬಿಸಾಟಿ ಮಹೇಶ್ ಇನ್ನಿತರರಿದ್ದರು.