ಬಳ್ಳಾರಿ: ಮಿಲ್ಲರ್‌ಪೇಟ್‌ನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪರಿಷ್ಕೃತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮ ಸಂಯುಕ್ತಾಶ್ರಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ. ಇಂದ್ರಾಣಿ ಮಾತನಾಡಿ, ಟಿಬಿ ಕೊನೆಗಾಣಿಸಲು ಕಾಲ ಬಂದಿದೆ. ಜುಲೈ 27 ವರೆಗೆ ಕ್ಷಯರೋಗವನ್ನು ಸಕ್ರಿಯವಾಗಿ ಪತ್ತೆ ಹಚ್ಚಿ ಚಿಕಿತ್ಸೆ ನೀಡುವ ಆಂದೋಲನ ಆರಂಭಿಸಲಾಗಿದೆ. ರೋಗ ನಿಯಂತ್ರಣ ಸಂಬಂಧ ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು ಭೇಟಿ ನೀಡಿ ಕ್ಷಯರೋಗ ಪತ್ತೆ ಹಚ್ಚುತ್ತಾರೆ ಎಂದು ತಿಳಿಸಿದರು.
ಕಫ ಪರೀಕ್ಷೆಯಲ್ಲಿ ರೋಗದ ಅಂಶಗಳು ಕಂಡುಬರದೆೇ ಇದ್ದಲ್ಲಿ ಎಕ್ಸ್‌ರೇ ಮೂಲಕ ಪರೀಕ್ಷೆ ಮಾಡಲು ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಸಾರ್ವಜನಿಕ ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ ಮತ್ತು ವಿಮ್ಸ್ ನಲಗಲಿ ವ್ಯವಸ್ಥೆ ಮಾಡಲಾಗಿದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶಿವರಾಜ್ ಹೆಗಡೆ ಮಾತನಾಡಿ, ಜಿಲ್ಲೆಯ ಒಟ್ಟು 31,44,078 ಜನಸಂಖ್ಯೆಯಲ್ಲಿ 4,82,586 ಜನರನ್ನು ಪರೀಕ್ಷೆಗೊಳಪಡಿಸುವ ಗುರಿ ಹೊಂದಲಾಗಿದ್ದು, 538 ಮನೆ ಭೇಟಿ ತಂಡಗಳನ್ನು ರಚಿಸಲಾಗಿದೆ. 12 ಜನ ಸ್ವಯಂ ಸೇವಾ ಸಂಸ್ಥೆಯವರು ಸಹ ಭಾಗವಾಗಿದ್ದಾರೆ ಎಂದರು.