ಬಳ್ಳಾರಿ: ನಗರದ ಹೊರವಲಯದ ಬೈಪಾಸ್ ಬಳಿ ನಿನ್ನೆ ರಾತ್ರಿ ಶಿವನ ದರ್ಶನ ಪಡೆದು ಊರಿಗೆ ವಾಪಸ್ ಹೋಗುತ್ತಿದ್ದ ವೇಳೆ ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೂವರು ಮೃತಪಟ್ಟಿದ್ದಾರೆ.
ಮೃತರು ಬಳ್ಳಾರಿ ತಾಲೂಕಿನ ಎರಂಗಳಿ ಗ್ರಾಮದ ತಿರುಮಲ (25), ಪ್ರಕಾಶ (14), ಶರತ್ (25) ಎಂದು ಗುರುತಿಸಲಾಗಿದೆ. ವೆಂಕಟೇಶ, ಮಲ್ಲಿಕಾರ್ಜುನ, ಲಿಂಗೇಶ್ ಎಂಬ ಮೂವರು ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕಾಲುವೆಯಲ್ಲಿ ಕಾರು ಮುಳುಗಿ ಮೂವರು ಸಾವು