ETV Bharat / state

ಪರೀಕ್ಷಾ ನೇಮಕಾತಿ ಸಂಬಂಧ ಸುಳ್ಳುಸುದ್ದಿ: ವರದಿಗಾರ ಸೇರಿ ನಾಲ್ವರು ಅರೆಸ್ಟ್

ವಿಜಯನಗರ ಶ್ರೀ‌ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಬೋಧಕೇತರ ಸಿಬ್ಬಂದಿ ನೇಮಕಾತಿ ಪರೀಕ್ಷೆಯ ಪ್ರವೇಶಾತಿ ಪತ್ರದಲ್ಲಿ ಗಣ್ಯ ವ್ಯಕ್ತಿಗಳ ಭಾವಚಿತ್ರ ಬಳಸಿದ ಪ್ರಕರಣದ ಪ್ರಮುಖ ಆರೋಪಿಗಳನ್ನು ಬಂಧಿಸಿ, ವಿಚರಣೆಗೊಳಪಡಿಸಲಾಗಿದೆ.

ಬಳ್ಳಾರಿಯಲ್ಲಿ ನಕಲಿ ಸುದ್ದಿ ನೀಡಿದ ಮೂವರು ಆರೋಪಿಗಳು ಅರೆಸ್ಟ್​
author img

By

Published : Jun 6, 2019, 3:48 PM IST

Updated : Jun 6, 2019, 7:47 PM IST

ಬಳ್ಳಾರಿ: ವಿಜಯನಗರ ಶ್ರೀ‌ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಬೋಧಕೇತರ ಸಿಬ್ಬಂದಿ ನೇಮಕಾತಿ ಪರೀಕ್ಷೆಯ ಪ್ರವೇಶಾತಿ ಪತ್ರದಲ್ಲಿ ಗಣ್ಯ ವ್ಯಕ್ತಿಗಳ ಭಾವಚಿತ್ರ ಬಳಸಿದ ಪ್ರಕರಣದ ಪ್ರಮುಖ ಆರೋಪಿಯನ್ನು ಬಳ್ಳಾರಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಬಳ್ಳಾರಿಯಲ್ಲಿ ನಕಲಿ ಸುದ್ದಿ ನೀಡಿದ ನಾಲ್ವರು ಆರೋಪಿಗಳು ಅರೆಸ್ಟ್​

ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಸಿ.ಎಂ.ಮಂಜುನಾಥ್ ಬಂಧಿತ ಆರೋಪಿ.

ಇತ್ತೀಚೆಗೆ ಬೋಧಕೇತರ ಸಿಬ್ಬಂದಿ ನೇಮಕಾತಿಗೆ ನಡೆದ ಪರೀಕ್ಷೆಯ ಪ್ರವೇಶ ಪತ್ರದಲ್ಲಿ ಪ್ರಮುಖ ಗಣ್ಯ ವ್ಯಕ್ತಿಗಳ ಭಾವಚಿತ್ರಗಳನ್ನು ಅಂಟಿಸಿ ಪರೀಕ್ಷೆಗೆ ಹಾಜರಾಗಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ಸಿ.ಎಂ.ಮಂಜುನಾಥ್ ಹಬ್ಬಿಸಿದ್ದ. ನಂತರ ಈ ಫೊಟೋಗಳನ್ನ ಖಾಸಗಿ ವಾಹಿನಿಯ ವರದಿಗಾರನಿಗೆ ನೀಡಿದ್ದ. ಖಾಸಗಿ ವಾಹಿನಿಯಲ್ಲಿ ಬಿತ್ತರವಾದ ಹಿನ್ನೆಲೆ, ವಿಜಯನಗರ ಶ್ರೀ‌ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.‌ ಕುಲಪತಿ ನೀಡಿದ ದೂರು ಆಧರಿಸಿ ಖಾಸಗಿ ವಾಹಿನಿಯ ವರದಿಗಾರ ಸೇರಿದಂತೆ ಒಟ್ಟು ನಾಲ್ವರನ್ನು ಬಂಧಿಸಿದ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ ಮಂಜುನಾಥ್​ನನ್ನು ಇಲ್ಲಿನ ವಿಮ್ಸ್ ಆಸ್ಪತ್ರೆಯ ಆರೋಗ್ಯ ತಪಾಸಣೆಗೆ ಕರೆದೊಯ್ಯಲಾಗಿದೆ. 2ನೇ ಆರೋಪಿ ಖಾಸಗಿ ವಾಹಿನಿಯ ವರದಿಗಾರ ವೀರೇಶ ದಾನಿ ಮತ್ತು 3ನೇ ಆರೋಪಿ ಚಿದಾನಂದ ಹಾಗೂ 4ನೇ ಆರೋಪಿ ವೀರೇಶ್​ ಎಂಬವರನ್ನು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದ್ದು, ಈ ನಾಲ್ವರು ಆರೋಪಿಗಳಿಗೆ ಜಾಮೀನು ರಹಿತ ಬಂಧನದ ನೋಟಿಸ್ ಜಾರಿಯಾಗಿದೆ. ಸಂಜೆಯೊಳಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಸಾಧ್ಯತೆಯಿದೆ ಎಂದು‌ ಮೂಲಗಳು ತಿಳಿಸಿವೆ.

Intro:ಬಳ್ಳಾರಿಯಲ್ಲಿ ನಕಲಿ ಸುದ್ದಿ ನೀಡಿದ ಏಒನ್ ಆರೋಪಿ ಬಂಧನ!
ಬಳ್ಳಾರಿ: ನಗರ ಹೊರವಲಯದ ವಿಜಯನಗರ ಶ್ರೀ‌ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಬೋಧಕೇತರ
ಸಿಬ್ಬಂದಿ ನೇಮಕಾತಿ ಪರೀಕ್ಷೆಯ ಪ್ರವೇಶಾತಿ ಪತ್ರದಲ್ಲಿ
ಗಣ್ಯವ್ಯಕ್ತಿಗಳ ಭಾವಚಿತ್ರ ಬಳಸಿದ ಪ್ರಕರಣದ ಪ್ರಮುಖ ಆರೋಪಿಯನ್ನು ಬಳ್ಳಾರಿ ಗ್ರಾಮೀಣ ಠಾಣೆಯ ಪೊಲೀಸರು ಇಂದು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಪ್ರಮುಖ ಆರೋಪಿಯಾದ ಸಿ.ಎಂ.ಮಂಜುನಾಥ್ ಅವರನ್ನು ಗ್ರಾಮೀಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಘಟನೆಯ ವಿವರ: ಇತ್ತೀಚೆಗೆ ಬೋಧಕೇತರ ಸಿಬ್ಬಂದಿಗೆ
ನಡೆದ ಪರೀಕ್ಷೆಯ ಪ್ರವೇಶ ಪತ್ರದಲ್ಲಿ ಪ್ರಮುಖ ಗಣ್ಯ ವ್ಯಕ್ತಿ
ಗಳ ಭಾವಚಿತ್ರಗಳನ್ನು ಅಂಟಿಸಿ, ಆ ಪರೀಕ್ಷೆಗೆ ಹಾಜರಾಗಿದ್ದಾರೆ ಎಂಬ ಸುಳ್ಳು ಸುದ್ದಿ ಹಬ್ಬಿಸಿ ಈ ಫೋಟೋವನ್ನು ಖಾಸಗಿ ವಾಹಿನಿಯೊಂದರಲ್ಲಿ ಬಿತ್ತರವಾದ ಮಾಹಿತಿಯನ್ನಾಧರಿಸಿ ಆ ವಾಹಿನಿಯ ವರದಿಗಾರ ಸುದ್ದಿಯನ್ನು ಬಿತ್ತರಿಸಿದ್ದರು.
ಅದರ ವಿರುದ್ಧವೇ ಕುಲಪತಿಯವರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.‌

Body:ಕುಲಪತಿಯವರು‌ ನೀಡಿದ ದೂರಿನ್ನಾಧರಿಸಿ ಖಾಸಗಿ ವಾಹಿನಿಯ ವರದಿಗಾರ ಸೇರಿದಂತೆ ಮೂವರನ್ನು ಬಂಧಿಸಿದ ಪೊಲೀಸರು ಬೆಳಿಗ್ಗೆಯಿಂದಲೇ ವಿಚಾರಣೆ ಕೈಗೊಂಡಿದ್ದಾರೆ.
ಆರೋಗ್ಯ ತಪಾಸಣೆಗೆ ಕರೆದೊಯ್ದ ಪೊಲೀಸರು: ಈ ಪ್ರಕರಣದ ಪ್ರಮುಖ ಆರೋಪಿಯಾದ ಮಂಜುನಾಥ ಅವರನ್ನು ಇಲ್ಲಿನ ವಿಮ್ಸ್ ಆಸ್ಪತ್ರೆಯಲ್ಲಿ ಆರೋಪಿಯ ಆರೋಗ್ಯ ತಪಾಸಣೆಗೆ ಕರೆದೊಯ್ದರು.‌
ಎರಡನೇ ಆರೋಪಿಯಾದ ಖಾಸಗಿ ವಾಹಿನಿಯ ವರದಿಗಾರ ವೀರೇಶದಾನಿ ಮತ್ತು ಮೂರನೇ ಆರೋಪಿಯಾದ ಚಿದಾನಂದ ಅವರನ್ನು ಗ್ರಾಮೀಣ ಪೊಲೀಸ್ ಠಾಣೆಯಲ್ಲೇ ವಿಚಾರಣೆ ನಡೆಸುತ್ತಿದ್ದಾರೆ. ಈ ಮೂವರು ಆರೋಪಿಗಳಿಗೆ ಜಾಮೀನು ರಹಿತ ಬಂಧನದ ನೋಟಿಸ್ ಜಾರಿಯಾಗಿದೆ. ಸಂಜೆಯೊಳಗೆ ಅವರನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಸಾಧ್ಯತೆಯಿದೆ ಎಂದು‌ ಮೂಲಗಳು ತಿಳಿಸಿವೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_01_06_FAKE_NEWS_ACCUSED_ARREST_VISUALS_7203310

KN_BLY_01a_06_FAKE_NEWS_ACCUSED_ARREST_VISUALS_7203310

Last Updated : Jun 6, 2019, 7:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.