ಬಳ್ಳಾರಿ: ಕಮ್ಯೂನಿಸ್ಟರು ಎಂದರೇ ದೇಶ ಮತ್ತು ಸಮಾಜಕ್ಕೆ ಯಾರು ಕಮ್ಮಿ ನಿಷ್ಠೆ ತೋರುತ್ತಾರೋ ಅವರು ಎಂದು ಸಂಸದೀಯ ವ್ಯವಹಾರ ಹಾಗೂ ಗಣಿ ಮತ್ತು ಕಲ್ಲಿದ್ದಲು ಖಾತೆ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ ಹೇಳಿದ್ದಾರೆ.
ನಗರದ ಗಾಂಧಿ ಭವನದಲ್ಲಿ ಶ್ರೀ ದತ್ತೋಪಂತ ಠೇಂಗಡಿಜೀ ಅವರ ಜನ್ಮ ಶತಮಾನೋತ್ಸವ ಸಮಾರಂಭ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಸಂಸದೀಯ ವ್ಯವಹಾರ ಹಾಗೂ ಗಣಿ ಮತ್ತು ಕಲ್ಲಿದ್ದಲು ಖಾತೆ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ದೇಶದ ಮತ್ತು ಕಾರ್ಮಿಕರ ಹಿತಾಸಕ್ತಿಗಾಗಿ ದತ್ತೋಪಂತ ಠೇಂಗಡಿಜೀವರು ಕೆಲಸ ಮಾಡುತ್ತಿದ್ದರು. ದಲಿತರನ್ನ ಕಮ್ಯೂನಿಸ್ಟರು ತಮ್ಮ ಕಪಿಮುಷ್ಠಿಯಲ್ಲಿ ಹಿಡಿದಿಟ್ಟುಕೊಳ್ಳುವ ಕೆಲಸವನ್ನು ಮಾಡುತ್ತಿದ್ದರು. ದೇಶದಲ್ಲಿ ಕೇರಳ ಮತ್ತು ಪಶ್ವಿಮ ಬಂಗಾಳ ಎಡಪಂಥಗಳ ರಾಜ್ಯಗಳಾಗಿದ್ದವು, ಆ ರಾಜ್ಯಗಳು ಸ್ವದೇಶಿ ವಿಚಾರಗಳನ್ನು ಒಪ್ಪುವಂತಹ ಕೆಲಸವನ್ನು ಶ್ರೀ ದತ್ತೋಪಂತ ಠೇಂಗಡಿಜೀ ಮಾಡಿದ್ದರು ಎಂದರು.
ಜವಹರಲಾಲ್ ವಿಶ್ವವಿದ್ಯಾಲಯದಲ್ಲಿ ಕ್ರೇಜಿವಾಲ್ಗೆ ಜ್ಞಾನೋದಯವಾಗಿ ದೇಶವನ್ನು ತುಕಡೆ ತುಕಡೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಮೂಲಭೂತವಾಗಿ ಅವರಿಗೆ ಪ್ರೇರಣೆ ಸಿಕ್ಕಿದ್ದೇ ಆದ್ರೇ ಅದು ಎಡಪಂಥಿಯರು ಮತ್ತು ಕಮ್ಯೂನಿಸ್ಟ್ರಿಂದ. ಅದು ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ ಹೆಚ್ಚಾಗಿದೆ ಎಂದು ಹೇಳಿದರು.