ಹೊಸಪೇಟೆ: ವಿಶ್ವ ವಿಖ್ಯಾತ ಹಂಪಿಯಲ್ಲಿ ಇದೀಗ ಮೂಲಭೂತ ಸೌಲಭ್ಯಗಳಿಲ್ಲದೆ ಪ್ರವಾಸಿಗರು ತೊಂದರೆ ಅನುಭವಿಸುವಂತಾಗಿದೆ.
ಹಂಪಿಯಲ್ಲಿ ಪ್ರವಾಸಿಗರ ವಾಹನಗಳ ನಿಲುಗಡೆ ಸ್ಥಳದಲ್ಲಿ ವಿದ್ಯುತ್ ಹಾಗೂ ಕುಡಿಯು ನೀರಿಲ್ಲದೆ ಪರದಾಡುವಂತಾಗಿದೆ. ಪ್ರವಾಸಿಗರು ರಾತ್ರಿ ಸಮಯದಲ್ಲಿ ತಮ್ಮ ವಾಹನದಿಂದ ಒಂದು ಕಿ.ಮೀ ದೂರ ನಡೆದುಕೊಂಡು ಬರುವಂತಾಗಿದ್ದು, ರಸ್ತೆಯ ಪಕ್ಕದಲ್ಲಿರುವ ವಿದ್ಯುತ್ ಕಂಬಗಳಲ್ಲಿ ವಿದ್ಯುತ್ ದೀಪಗಳು ಉರಿಯದೇ ಕತ್ತಲ ಕೊಂಪೆಯಾಗಿದೆ. ಪಕ್ಕದಲ್ಲಿ ತುಂಗ ಭದ್ರಾ ನದಿ ಹರಿಯುತ್ತಿದ್ದರೂ ಸಹ ಕುಡಿಯಲು ನೀರಿಲ್ಲ ಎನ್ನುವಂತಾಗಿದೆ.
ಅಷ್ಟೇ ಅಲ್ಲದೇ, ಪ್ರವಾಸಿಗರಿಗೆ ಉಳಿದುಕೊಳ್ಳಲು ವಸತಿ ಗೃಹಗಳಿಲ್ಲ, ಕುಡಿಯಲು ನೀರಿಲ್ಲ , ಮಹಿಳೆಯರಿಗೆ ಮತ್ತು ಮಕ್ಕಳಿಗೆ ಶೌಚಾಲಯಗಳಿಲ್ಲ. ಸ್ವಚ್ಛ ಭಾರತ ಯೋಜನೆ ಜಾರಿಯಾದರೂ ಇಲ್ಲಿ ಮಾತ್ರ ಮಹಿಳೆಯರು ಪರದಾಡುವಂತಾಗಿದೆ ಎಂದು ಪ್ರವಾಸಿಗರು ಈಟಿವಿ ಭಾರತದೊಂದಿಗೆ ಹಂಚಿಕೊಂಡರು.