ಬಳ್ಳಾರಿ: ಜಿಲ್ಲೆಯಲ್ಲಿ ಅನಧಿಕೃತ ಚಾಲನಾ ಶಾಲೆಗಳೇ (ಡ್ರೈವಿಂಗ್ ಸ್ಕೂಲ್) ಇಲ್ಲ. ಅಂದಾಜು 21ಕ್ಕೂ ಅಧಿಕ ಚಾಲನಾ ಶಾಲೆಗಳಿದ್ದು, ಅವೆಲ್ಲವೂ ಅಧಿಕೃತ ಎಂದು ಆರ್ಟಿಒ ಅಧಿಕಾರಿ ಶೇಖರ ಹೇಳಿದರು.
ಚಾಲನಾ ಶಾಲೆಗಳಿಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಕಾಲಕಾಲಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವ ಮೂಲಕ ಚುರುಕು ಮುಟ್ಟಿಸುವ ಕಾರ್ಯ ಆಗಾಗ್ಗೆ ನಡೆಯುತ್ತೆ. ನಿಯಮಗಳ ಪಾಲನೆ ಸರಿಯಾಗಿ ಆಗುತ್ತಿದೆಯೇ ಎಂಬುದರ ಕುರಿತು ತಪಾಸಣೆ ಮಾಡಲಾಗುತ್ತದೆ ಎಂದು ಈಟಿವಿ ಭಾರತಕ್ಕೆ ಮಾಹಿತಿ ನೀಡಿದರು.