ETV Bharat / state

ಲೋಕ ಕಲ್ಯಾಣಕ್ಕಾಗಿ ಪಾದಯಾತ್ರೆ ಕೈಗೊಂಡ ಇಳಿ ವಯಸ್ಸಿನ ಜೀವ! - kannadanews

ಸಮಾಜದಲ್ಲಿ ಶಾಂತಿ ನೆಲೆಸಬೇಕೆಂಬ ಸಾಮಾಜಿಕ ಕಳಕಳಿಯಿಂದ ಬಳ್ಳಾರಿ ಮೂಲದ ವ್ಯಕ್ತಿಯೊಬ್ಬರು ಮಹಾರಾಷ್ಟ್ರ ರಾಜ್ಯದಲ್ಲಿನ ಪಂಡರಿನಾಥನ ದೇಗುಲಕ್ಕೆ ಕಾಲ್ನಡಿಗೆ ಯಾತ್ರೆ ಕೈಗೊಂಡಿದ್ದಾರೆ.

ಲೋಕ ಕಲ್ಯಾಣಕ್ಕಾಗಿ ಪಾದಯಾತ್ರೆ
author img

By

Published : Jul 8, 2019, 6:11 PM IST

ಬಳ್ಳಾರಿ: ಲೋಕ ಕಲ್ಯಾಣಾರ್ಥ ಹಾಗೂ ಸಮಾಜದಲ್ಲಿ ಶಾಂತಿ ನೆಲೆಸುವ ಸಲುವಾಗಿಯೇ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಮರಬ್ಬೀಹಾಳು ಗ್ರಾಮದ ವೃದ್ಧರೊಬ್ಬರು ಪಾದಯಾತ್ರೆ ಕೈಗೊಂಡಿದ್ದಾರೆ.

ಮೂಲತಃ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಮರಬ್ಬೀಹಾಳು ಗ್ರಾಮದ ನಿವಾಸಿಯಾದ ಡಿ.ಪ್ರಹ್ಲಾದ ಶೆಟ್ರು ಭಜನೆ ಪರಿಕರ ಹಿಡಿದುಕೊಂಡು ವಿಠಲನ ಸ್ಮರಿಸುತ್ತಾ ಕಾಲ್ನಡಿಗೆ ಜಾಥಾ ಆರಂಭಿಸಿದ್ದಾರೆ. ಕೂಡ್ಲಿಗಿಯಿಂದ ಪಂಡರಾಪುರದ ವಿಠ್ಠಲ ದೇಗುಲದವರೆಗೆ ಅಂದಾಜು 470 ಕಿ.ಮೀ. ಇದ್ದು, ಪ್ರತಿ ದಿನ 60 ಕಿಲೋ ಮೀಟರ್​​ನಂತೆ ಪಾದಯಾತ್ರೆ ನಡೆಸಲಿದ್ದಾರೆ. ಪಾದಯಾತ್ರೆಯುದ್ಧಕ್ಕೂ ಪಂಡರಿನಾಥನ ಸ್ಮರಣೆ ಹಾಗೂ ಭಜನೆ ಪದಗಳನ್ನು ಹಾಡುತ್ತಾ ಮುಂದೆ ಸಾಗುತ್ತಾ ನೋಡುಗರ ಗಮನ ಸೆಳೆದಿದ್ದಾರೆ.

ಲೋಕ ಕಲ್ಯಾಣಕ್ಕಾಗಿ ಪಾದಯಾತ್ರೆ

ಇಂದಿನಿಂದ ಸತತ ಎಂಟು ದಿನಗಳ ಕಾಲ ಈ ಇಳಿ ವಯಸ್ಸಿನ ಜೀವ ಪಾದಯಾತ್ರೆ ಮಾಡಲಿದ್ದು, ಹಗಲು ರಾತ್ರಿ ಎನ್ನದೇ, ಮಳೆ ಹಾಗೂ ಗಾಳಿ ಎನ್ನದೇ ಕಾಲ್ನಡಿಗೆಯಲ್ಲೇ ಮುಂದೆ ಸಾಗಲಿದ್ದಾರೆ. ಕಿರಾಣಿ ಅಂಗಡಿ ವ್ಯಾಪಾರಿಯಾಗಿದ್ದ ಈ ಪ್ರಹ್ಲಾದ ಶೆಟ್ರು 1987ರಿಂದ ಪ್ರತಿ ವರ್ಷವೂ ಪಾದಯಾತ್ರೆ ಮಾಡುತ್ತಿದ್ದು, ಕಳೆದ 30 ವರ್ಷಗಳಿಂದ ಸರಿಸುಮಾರು 50 ಬಾರಿ ಏಕಾಂಗಿಯಾಗಿ ಪಾದಯಾತ್ರೆ ಮಾಡಿದ್ದಾರೆ. ಮಹಾರಾಷ್ಟ್ರ ರಾಜ್ಯದಲ್ಲಿ ಪಂಡರಿನಾಥನ ದೇಗುಲವಿದ್ದು, ವಿಠ್ಠಲ ದೇವರ ಮಹಿಮೆ ಅಪಾರವಾದದು. ಈ ದೇಶದಲ್ಲಿ ಶಾಂತಿ ನೆಲೆಸಬೇಕು. ಯುವ ಜನರು ಆಧ್ಯಾತ್ಮದತ್ತ ವಾಲಬೇಕು. ವಾಟ್ಸಪ್, ಫೇಸ್​​ಬುಕ್ ಹಾಗೂ ದೃಶ್ಯ ಮಾಧ್ಯಮಗಳ ಬಳಕೆ ಕಡಿಮೆ ಆಗಬೇಕೆಂಬುದೇ ನನ್ನ ಮಹದಾಸೆಯಾಗಿದೆ ಎನ್ನುತ್ತಾರೆ ಪ್ರಹ್ಲಾದ ಶೆಟ್ರು.

Intro:ಲೋಕ ಕಲ್ಯಾಣಾರ್ಥವಾಗಿ ಪಂಢರಾಪುರಕ್ಕೆ ಕಾಲ್ನಡಿಗೆಯಲ್ಲೇ ತೆರಳಿದ ಈ ಇಳಿ ವಯಸ್ಸಿನ ಜೀವ…!
ಬಳ್ಳಾರಿ: ಲೋಕ ಕಲ್ಯಾಣಾರ್ಥ ಹಾಗೂ ಸಮಾಜದಲ್ಲಿ ಶಾಂತಿ ನೆಲೆಸುವ ಸಲುವಾಗಿಯೇ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಮರಬ್ಬೀ ಹಾಳು ಗ್ರಾಮದ ಈ ಇಳಿ ವಯಸ್ಸಿನ ಜೀವ ಕಾಲ್ನಡಿಗೆಯಲ್ಲೇ ಪಾದ ಯಾತ್ರೆ ಶುರು ಮಾಡಿದ್ದಾರೆ.
ಮೂಲತಃ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಮರಬ್ಬೀಹಾಳು ಗ್ರಾಮದ ನಿವಾಸಿಯಾದ ಡಿ.ಪ್ರಹ್ಲಾದ ಶೆಟ್ರು, ಗಾಂಧೀ ಟೋಪಿ ಹಾಗೂ ಕಾವಿ ಬಣ್ಣದ ನಿಲುವಂಗಿ, ಪ್ಯಾಂಟ್ ಧರಿಸಿಕೊಂಡು ಕೊರಳಲ್ಲಿ ಭಜನೆ ಪರಿಕರ ಹಿಡಿದುಕೊಂಡು ವಿಠಲನ ಸ್ಮರಿಸುತ್ತಾ ಕಾಲ್ನಡಿಗೆಯ ಜಾಥಾ ಆರಂಭಿಸಿದ್ದಾರೆ. ಕೂಡ್ಲಿಗಿಯಿಂದ ಪಂಢರಾಪುರದ ವಿಠಲ ದೇಗುಲದವರೆಗೆ ಅಂದಾಜು 470 ಕಿಲೋಮೀಟರ್ ಇದ್ದು, ಪ್ರತಿ ದಿನ 60 ಕಿಲೋಮೀಟರ್ ನಂತೆ ಪಾದಯಾತ್ರೆ ನಡೆಸಲಿದ್ದಾರೆ. ಪಾದಯಾತ್ರೆಯುದ್ಧಕ್ಕೂ ಪಂಢರಿನಾಥನ ಸ್ಮರಣೆ ಹಾಗೂ ಭಜನೆ ಪದಗಳನ್ನು ಹಾಡುತ್ತಾ ಮುಂದೆ ಸಾಗುತ್ತಿರುವುದು ನೋಡುಗರ ವಿಶೇಷ ಗಮನ ಸೆಳೆಯಿತು.
ಇಂದಿನಿಂದ ಸತತ ಎಂಟು ದಿನಗಳಕಾಲ ಈ ಇಳಿ ವಯಸ್ಸಿನ ಜೀವ ಪಾದಯಾತ್ರೆ ಮಾಡಲಿದ್ದು, ಹಗಲು ರಾತ್ರಿ ಎನ್ನದೇ, ಮಳೆ ಹಾಗೂ ಗಾಳಿ ಎನ್ನದೇ ಕಾಲ್ನಡಿಗೆಯಲ್ಲೇ ಮುಂದೆ ಸಾಗಲಿದ್ದಾರೆ. ಮಹಾರಾಷ್ಟ್ರ ರಾಜ್ಯದಲ್ಲಿ ಪಂಢರಿನಾಥನ ದೇಗುಲವಿದ್ದು, ಅಲ್ಲಿ ಯವರೆಗೂ ಪ್ರತಿವರ್ಷದಂತೆ ಈ ವರ್ಷವೂ ಕೂಡ ಪಾದಯಾತ್ರೆ ಶುರು ಮಾಡಿದ್ದಾರೆ.
Body:ಕಿರಾಣಿ ಅಂಗಡಿ ವ್ಯಾಪಾರಿಯಾಗಿದ್ದ ಈ ಪ್ರಹ್ಲಾದ ಶೆಟ್ರು ಸತತ 1987 ರಿಂದ ಪ್ರತಿವರ್ಷವೂ ಪಾದಯಾತ್ರೆ ಮಾಡುತ್ತಿದ್ದು, ಈ ವರ್ಷ ಕೂಡ ಪಾದಯಾತ್ರೆ ಶುರು ಮಾಡಿದ್ದಾರೆ. ಅವರ ಆಧ್ಯಾತ್ಮ ಸಾಧನೆ ಅಪಾರವಿದ್ದು ಎಲೆಮರೆಯ ಕಾಯಿಯಂತಿದ್ದಾರೆ. ಕಳೆದ
30 ವರ್ಷಗಳಿಂದ ಸರಿಸುಮಾರು 50 ಭಾರಿ ಏಕಾಂಗಿಯಾಗಿ ಪಾದ ಯಾತ್ರೆ ಮಾಡಿದ್ದಾರೆ.
ಪಂಢರಿನಾಥ ದೇಗುಲ ದರುಶನಕ್ಕೆ ಮಾತ್ರ ಪಾದಯಾತ್ರೆ ಮಾಡುತ್ತಿರುವೆ. ಉಳಿದ ದೇಗುಲಗಳ ದರುಶನವನ್ನು ಬಸ್
ಗಳಲ್ಲಿ ತೆರಳಿ ದರುಶನ ಭಾಗ್ಯ ಪಡೆಯುವೆ. ವಿಠಲ ದೇವರ ಮಹಿಮೆ ಅಪಾರವಾದದು. ಹೀಗಾಗಿ, ಸತತ ಮೂವತ್ತು ವರ್ಷಗಳಕಾಲ ಪಾದಯಾತ್ರೆಯಿಂದಲೇ ವಿಠಲನ ದರುಶನ ಪಡೆಯುತ್ತಿರುವೆ. ಈ ದೇಶದಲ್ಲಿ ಶಾಂತಿ ನೆಲೆಸಬೇಕು. ಯುವ ಜನರು ಆಧ್ಯಾತ್ಮದತ್ತ ವಾಲಬೇಕು. ವಾಟ್ಸಾಪ್, ಟ್ವೀಟರ್ ಹಾಗೂ ಫೇಸ್ ಬುಕ್ ಹಾಗೂ ದೃಶ್ಯ ಮಾಧ್ಯಮಗಳ ದುರ್ಬಳಕೆ ಕಡಿಮೆ ಆಗಬೇಕೆಂಬುದೇ ನನ್ನ ಮಹದಾಸೆಯಾಗಿದೆ ಎನ್ನುತ್ತಾರೆ ಪ್ರಹ್ಲಾದ ಶೆಟ್ರು.
ಕೂಡ್ಲಿಗಿ, ಮರಿಯಮ್ಮನಹಳ್ಳಿ, ಕುಷ್ಟಗಿ, ಇಳಕಲ್, ಹುನಗುಂದ, ವಿಜಯಪುರ, ಮಹಾರಾಷ್ಟ್ರ ಗಡಿಭಾಗದ ಮೂರ್ನಾಲ್ಕು ಹಳ್ಳಿಗಳ ಮೂಲಕ ಪಂಢರಾಪುರಕ್ಕೆ ತಲುಪುವೆ ಎಂದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_02_KUDULGI_DEVOTEES_PADA_YATRE_7203310

KN_BLY_02a_KUDULGI_DEVOTEES_PADA_YATRE_7203310

KN_BLY_02b_KUDULGI_DEVOTEES_PADA_YATRE_7203310

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.