ETV Bharat / state

ಆರಕ್ಷಕರ ಬಗ್ಗೆ ಕಾಳಜಿಯಿದ್ದ ಇಂದಿರಾ ಪೊಲೀಸರಿಂದಲೇ ಹತರಾಗಿದ್ದು ದುಃಖಕರ: ಡಿ.ವಿ. ಗುರುಪ್ರಸಾದ್​ - undefined

ಪೊಲೀಸರ ಬಗ್ಗೆ ವಿಪರೀತ ಕಾಳಜಿ ಹೊಂದಿದ್ದ ಇಂದಿರಾ ಗಾಂಧಿ ಪೊಲೀಸರಿಂದಲೇ ಹತ್ಯೆಯಾಗಿದ್ದು ವಿಷಾದನೀಯ ಎಂದು ನಿವೃತ್ತ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಡಾ.ಡಿ.ವಿ. ಗುರುಪ್ರಸಾದ್ ಹೇಳಿದರು.

ಬಳ್ಳಾರಿಯ ಕೊಟ್ಟೂರು ಸ್ವಾಮಿ ಶಿಕ್ಷಣ ಕಾಲೇಜಿನಲ್ಲಿ 'ಗೂಢಚರ್ಯೆಯ ಆ ದಿನಗಳು' ಪುಸ್ತಕದ ಕುರಿತು ನಡೆದ ಸಂವಾದ ಕಾರ್ಯಕ್ರಮ ನಡೆಯಿತು.
author img

By

Published : Jun 30, 2019, 9:56 AM IST

ಬಳ್ಳಾರಿ: ಪೊಲೀಸರ ಬಗ್ಗೆ ವಿಪರೀತ ಕಾಳಜಿ ಹೊಂದಿದ್ದ ಇಂದಿರಾ ಗಾಂಧಿ ಪೊಲೀಸರಿಂದಲೇ ಹತ್ಯೆಯಾಗಿದ್ದು ವಿಷಾದನೀಯ ಎಂದು ನಿವೃತ್ತ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಡಾ.ಡಿ.ವಿ. ಗುರುಪ್ರಸಾದ್ ಹೇಳಿದರು.

ನಗರದ ಕೊಟ್ಟೂರು ಸ್ವಾಮಿ ಶಿಕ್ಷಣ ಕಾಲೇಜಿನಲ್ಲಿ 'ಗೂಢಚರ್ಯೆಯ ಆ ದಿನಗಳು' ಪುಸ್ತಕದ ಕುರಿತು ನಡೆದ ಸಂವಾದದಲ್ಲಿ ಅವರು ಮಾತನಾಡಿದರು.

ತುರ್ತುಪರಿಸ್ಥಿತಿ ನಂತರ ಅಧಿಕಾರ ಕಳೆದುಕೊಂಡಿದ್ದ ಇಂದಿರಾಗಾಂಧಿ ಅವರು ಹಂಪಿಯಲ್ಲಿ 3 ತಿಂಗಳ ಕಾಲ ತಂಗಿದ್ದ ಕಂಚಿಕಾಮಕೋಟಿ ಶ್ರೀಗಳನ್ನು ಭೇಟಿಯಾಗಲು ಆಗಮಿಸಿದ್ದರು. ಶ್ರೀಗಳ ಆಶೀರ್ವಾದ ಪಡೆದು ಹಸನ್ಮುಖಿಯಾಗಿ ಹೊರಬಂದ ಇಂದಿರಾ ಗಾಂಧಿ ಅವರು ವಿಧಾನಪರಿಷತ್ ಸದಸ್ಯ ನಾರಾಯಣ ಸ್ವಾಮಿ ಅವರ ಹೊಸಪೇಟೆಯಲ್ಲಿರುವ ಮನೆಗೆ ಊಟಕ್ಕೆ ತೆರಳಿದ್ದರು.

ಆಗ ಹೊಸಪೇಟೆಯ ಎಸಿಪಿಯಾಗಿದ್ದ ನಾನು ಮತ್ತು ನಮ್ಮ ಎಸ್ಪಿಯವರು ನಾರಾಯಣಸ್ವಾಮಿ ಅವರ ಮನೆ ಹೊರಗಡೆ ಕಾಯುತ್ತಿದ್ದೆವು. ಇದನ್ನು ಗಮನಿಸಿದ ಇಂದಿರಾಗಾಂಧಿ ಅವರು ನಾರಾಯಣಸ್ವಾಮಿ ಅವರನ್ನು ಕೇಳಿ ಆ ಪೊಲೀಸ್ ಅಧಿಕಾರಿಗಳಿಗೇ ಊಟಕ್ಕೆ ಕರೆಯುವುದಿಲ್ಲವೇ, ಅವರು ಬರದಿದ್ದರೇ ನನಗೂ ಊಟ ಬೇಡ ಎಂದು ಹೇಳಿದ್ದನ್ನು ನೆನಪಿಸಿಕೊಂಡರು.

ರಾಜ್ಯದ ಸುರಕ್ಷತೆ ಮತ್ತು ಭದ್ರತೆಯೇ ಗುಪ್ತಚರ ದಳದ ಪ್ರಮುಖ ಕೆಲಸ. ಕಾನೂನು ಸುವ್ಯವಸ್ಥೆ ಸರಿಯಾಗಿ ಇರದಿದ್ದರೆ, ಯಾವುದೇ ಸರ್ಕಾರವು ಇರದು. ಸಣ್ಣ ಸಮಸ್ಯೆ ಉದ್ಭವಿಸಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುತ್ತದೆ ಎಂಬ ಮಾಹಿತಿ ದೊರೆತರೂ ಮುನ್ನೆಚ್ಚರಿಕೆ ವಹಿಸುತ್ತೇವೆ ಎಂದರು.

10 ಸಾವಿರ ರೈತರು ಒಂದೆಡೆ ಸೇರಿ ವಿಧಾನಸಭೆಗೆ ಮುತ್ತಿಗೆ ಹಾಕುತ್ತಾರೆ ಎಂದಿಟ್ಟುಕೊಳ್ಳಿ, ಇದರ ಹಿಂದೆ ಯಾರಾದರೂ ಇದ್ದೇ ಇರುತ್ತಾರೆ. ಸ್ವಂತ ದುಡ್ಡಲ್ಲಿ ಅಷ್ಟೊಂದು ರೈತರು ಬರಲು ಸಾಧ್ಯವೇ ಇಲ್ಲವೆಂಬುದನ್ನು ಅರಿತು ಅದರ ಪೂರ್ವಾಪರ ಮಾಹಿತಿಯ ಮುನ್ನಚ್ಚೆರಿಕೆ ಕೊಡುವ ಕೆಲಸ ಗುಪ್ತಚರದಳದ್ದು ಎಂಬುದನ್ನು ಉದಾರಣೆಗಳ ಮೂಲಕ ಅವರು ವಿವರಿಸಿದರು.

ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಟಿ.ಕೊಟ್ರಪ್ಪ, ಕೊಟ್ಟೂರು ಸ್ವಾಮಿ ಶಿಕ್ಷಣ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಅರವಿ ಬಸವನಗೌಡ, ಎಸ್ಪಿ ಲಕ್ಷ್ಮಣ ನಿಂಬರಗಿ, ಅರಿವು ಸಂಸ್ಥೆಯ ಎಸ್.ಪನ್ನರಾಜ, ಡಾ.ಅರವಿಂದ ಪಾಟೀಲ, ಕಾಲೇಜಿನ ಪ್ರಾಚಾರ್ಯಎಸ್.ಎ.ಹಿರೇಮಠ, ಪಿ.ಆರ್.ವೆಂಕಟೇಶ, ಯೋಗ ನಾಗರಾಜ, ಎಚ್.ಎಂ.ಕೊಟ್ರಯ್ಯ, ಎಲ್.ಟಿ.ಶೇಖರ, ಮಹೇಂದ್ರ ಕುಮಾರ ಇದ್ದರು.

Intro:ರಾಜ್ಯದ ಸುರಕ್ಷತೆ ಮತ್ತು ಭದ್ರತೆಯೇ ಗುಪ್ತಚರ ದಳದ ಬಹುಮುಖ್ಯ ಕಾರ್ಯ!
ಬಳ್ಳಾರಿ: ರಾಜ್ಯದ ಸುರಕ್ಷತೆ ಮತ್ತು ಭದ್ರತೆಯೇ ಗುಪ್ತಚರ
ದಳದ ಪ್ರಮುಖ ಕೆಲಸ, ಕಾನೂನು ಸುವ್ಯವಸ್ಥೆ ಸರಿಯಾಗಿ ಇರದಿದ್ದರೇ ಯಾವುದೇ ಸರ್ಕಾರವು ಇರದು; ಸಣ್ಣ ಸಮಸ್ಯೆ ಉದ್ಭವಿಸಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುತ್ತದೆ ಅಂತ ಮಾಹಿತಿ ದೊರೆತರು ಮುನ್ನಚ್ಚೆರಿಕೆ ವಹಿಸುತ್ತೇವೆ...
ಹೀಗೆಂದು ಹೇಳಿದ್ದು ಕರ್ನಾಟಕ ಗುಪ್ತಚರ ದಳದಲ್ಲಿ 4 ವರ್ಷಗಳ ಕಾಲ ಮೂವರು ಮುಖ್ಯಮಂತ್ರಿಗಳೊಂದಿಗೆ ಸೇವೆ ಸಲ್ಲಿಸಿದ್ದ ನಿವೃತ್ತ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಡಾ.ಡಿ.ವಿ. ಗುರುಪ್ರಸಾದ.
ನಗರದ ಕೊಟ್ಟೂರುಸ್ವಾಮಿ ಶಿಕ್ಷಣ ಕಾಲೇಜಿನಲ್ಲಿಂದು‌ 'ಗೂಢಚರ್ಯೆಯ ಆ ದಿನಗಳು' ಪುಸ್ತಕದ ಕುರಿತು ನಡೆದ ಸಂವಾದದಲ್ಲಿ ಅವರು ಮಾತನಾಡಿದರು.
10 ಸಾವಿರ ರೈತರು ವಿಧಾನಸಭೆಗೆ ಮುತ್ತಿಗೆ ಒಂದೆಡೆ ಸೇರಿ ಮುತ್ತಿಗೆ ಹಾಕುತ್ತಾರೆ ಎಂದಿಟ್ಟುಕೊಳ್ಳಿ; ಇದರ ಹಿಂದೆ ಯಾರಾದರೂ ಇದ್ದೇ ಇರುತ್ತಾರೆ; ಸ್ವಂತ ದುಡ್ಡಲ್ಲಿ ಅಷ್ಟೊಂದು ರೈತರು ಬರಲು ಸಾಧ್ಯವೇ ಇಲ್ಲವೆಂಬುದನ್ನು ಅರಿತು ಅದರ ಪೂರ್ವಾಪರ ಮಾಹಿತಿಯ ಮುನ್ನಚ್ಚೆರಿಕೆ ಕೊಡುವ ಕೆಲಸ ಗುಪ್ತಚರದಳದ್ದು ಎಂಬುದನ್ನು ಉದಾರಣೆಗಳ ಮೂಲಕ ವಿವರಿಸಿದ ಡಾ.ಡಿ.ವಿ.ಗುರುಪ್ರಸಾದ ಅವರು, ಸರ್ಕಾರ ಇರುತ್ತದೋ ಇರಲ್ಲವೋ ಎಂಬ ಅನಿಶ್ಚತತೆ ಇದ್ದಾಗ ಅಧಿಕಾರಿಗಳು ಕೆಲಸ ಮಾಡುವುದಿಲ್ಲ; ಇದರಿಂದ ಸರ್ಕಾರದ ಅಭಿವೃದ್ಧಿ ಕುಂಠಿತವಾಗುತ್ತದೆ ಎಂದರು.
ಗುಪ್ತಚರದಳದಲ್ಲಿ ಅನೇಕ ಶಾಖೆಗಳಿದ್ದು, ಅದರಲ್ಲಿ ರಾಜಕೀಯ ಶಾಖೆಯೂ ಒಂದಾಗಿದೆ. ಪ್ರತಿ ಶಾಖೆಯೂ ಅದರದರ ಮಾಹಿತಿ ಸಂಗ್ರಹಿಸಿ ಒದಗಿಸುವ ಕೆಲಸ ಮಾಡುತ್ತಿರುತ್ತದೆ. ಗೂಡಚರ್ಯೆ ಎಂಬುದು ಸರ್ಕಾರದ ಒಂದು ಪ್ರಮುಖ ಅಂಗವಾಗಿದ್ದು, ಸಣ್ಣ ದೊಂದು ಕೆಲಸ ಮಾಡಬೇಕಿದ್ದರೂ ಇದರ ಸಲಹೆ ಅರಿತೇ ಮುನ್ನಡೆಯುತ್ತದೆ ಎಂದರು.
ಗೂಢಚರ್ಯೆ ಕಾನೂನುಬದ್ಧವೇ..? ಮತ್ತು ಗುಪ್ತಚರ ದಳದಲ್ಲಿದ್ದಾಗ ನೀಡಿದ ವೈಯಕ್ತಿಕ ಮಾಹಿತಿ ಈ ರೀತಿ ಬಹಿರಂಗಪಡಿಸುವುದಕ್ಕೆ ಮುಜುಗುರವಾಗುವುದಿಲ್ಲವೇ ಎಂಬ ಹಿರಿಯ ಐಪಿಎಸ್ ಅಧಿಕಾರಿ ಗೋಪಾಲ್ ಹೊಸುರ್ ಪ್ರಶ್ನೆಗೆ ನಗುಮೊಗದಿಂದಲೇ ಡಾ.ಡಿ.ವಿ.ಗುರುಪ್ರಸಾದ ಉತ್ತರಿಸಿದರು.
ಮುಖ್ಯಮಂತ್ರಿಗಳಾಗಿದ್ದ ಎಸ್.ಎಂ.ಕೃಷ್ಣ, ಧರ್ಮಸಿಂಗ್ ಮತ್ತು ಹೆಚ್.ಡಿ.ಕುಮಾರಸ್ವಾಮಿ ಅವರ ಅವಧಿಯಲ್ಲಿ ಈ ಇಲಾಖೆಯ ಮುಖ್ಯಸ್ಥನಾಗಿ ಕೆಲಸ ಮಾಡಿದ್ದೇನೆ. ಅವರೊಂದಿಗಿನ ಪ್ರಮುಖ ಅಂಶಗಳನ್ನು ಹಂಚಿಕೊಂಡಿದ್ದೇನಷ್ಟೇ; ಇದರ ಉದ್ದೇಶವಿಷ್ಟೇ ಗುಪ್ತಚರದಳದ ಕಾರ್ಯವೈಖರಿ ತಿಳಿಸುವುದು. ಇಲ್ಲಿ ಯಾವುದೇ ರೀತಿಯ ಆಫಿಶಿಯಲ್ ಸಿಕ್ರೆಟ್ ಆ್ಯಕ್ಟ್ ಉಲ್ಲಂಘಿಸಿಲ್ಲ ಎಂದರು.
ಲೋಕಸಭೆ ಜತೆಗೆ ವಿಧಾನಸಭೆ ಚುನಾವಣೆಗೆ ಹೋಗಬೇಡ ಅಂದಿದ್ದೇ..: ಎಸ್.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಅತ್ಯಧಿಕ ಬಹುಮತವಿತ್ತು. ಸಿಎಂ ಆಗಿದ್ದ ಎಸ್‍ಎಂಕೆ ಅವರು ಲೋಕಸಭೆಯೊಂದಿಗೆ ವಿಧಾನಸಭೆ ಚುನಾವಣೆಯಂತ ದುಸ್ಸಾಹಸಕ್ಕೆ ಕೈಹಾಕಬೇಡಿ ಅಂತ ಹೇಳಿದ್ದೆ. ಆದರೇ ಅವರು ಯಾವುದೋ ಒಂದು ಒತ್ತಡಕ್ಕೆ ಒಳಗಾಗಿ ಲೋಕಸಭೆ ಜತೆಗೆ ವಿಧಾನಸಭೆಗೂ ಚುನಾವಣೆ ಎದುರಿಸಿದ್ರು ಅತ್ಯಧಿಕ ಬಹುಮತವಿದ್ದ ಕಾಂಗ್ರೆಸ್ ಸರ್ಕಾರಕ್ಕೆ ಆಗ ಬಂದಿದ್ದು ಕೇವಲ
64 ಸೀಟುಗಳು ಎಂದರು.
ಆಗ ಕಾಂಗ್ರೆಸ್ ಜೆಡಿಎಸ್ ಜತೆಗೂಡಿ ಸಮ್ಮಿಶ್ರ ಸರಕಾರದ ರೂಪದಲ್ಲಿ ಅಧಿಕಾರ ನಡೆಸಿತು. ಸಿಎಂ ಆಗಿದ್ದ ಧರ್ಮಸಿಂಗ್ ಅವರು ಜಾತಿಯಿಂದ ಅಷ್ಟೊಂದು ಪ್ರಬಲವಾಗಿರಲಿಲ್ಲ.
ಬಹಳಷ್ಟು ನೋವುಗಳನ್ನು ಅನುಭವಿಸಿದರು. ಸರಕಾರವು ಬಹಳಷ್ಟು ಸುದ್ದಿಯಾಗುತ್ತಿತ್ತು. ಈಗಿರುವ ಸರ್ಕಾರವು ಅದೇ
ರೀತಿ ಸುದ್ದಿಯಾಗುತ್ತಿದೆ ಎಂದರು.
ಪೊಲೀಸರ ಬಗ್ಗೆ ವಿಪರಿತ ಕಾಳಜಿ ಹೊಂದಿದ್ದ ಇಂದಿರಾ ಪೊಲೀಸರಿಂದಲೇ ಹತ್ಯೆಯಾಗಿದ್ದು ವಿಷಾಧ. ಪೊಲೀಸರ ಬಗ್ಗೆ ಪ್ರಧಾನಿಯಾಗಿದ್ದ ಇಂದಿರಾಗಾಂಧಿಯವರು ಯಾವ ರೀತಿ ಕಾಳಜಿವಹಿಸುತ್ತಿದ್ದರು ಎಂಬುದನ್ನು ತಮ್ಮ ಮಾತುಗಳಲ್ಲಿ ಬಿಡಿಸಿಟ್ಟ ಗುರುಪ್ರಸಾದ, ತುರ್ತುಪರಿಸ್ಥಿತಿ ನಂತರ ಅಧಿಕಾರ ಕಳೆದುಕೊಂಡಿದ್ದ ಇಂದಿರಾಗಾಂಧಿ ಅವರು ಹಂಪಿಯಲ್ಲಿ 3 ತಿಂಗಳ ಕಾಲ ತಂಗಿದ್ದ ಕಂಚಿಕಾಮಕೋಟಿ ಶ್ರೀಗಳನ್ನು ಭೇಟಿಯಾಗಲು ಆಗಮಿಸುತ್ತಾರೆ. ಅವರದೇ ಪಕ್ಷ ರಾಜ್ಯದಲ್ಲಿ ಅಧಿಕಾರದಲ್ಲಿದ್ದರೂ ಆಗಿನ ಸಿಎಂ ದೇವರಾಜು ಅರಸು ಅವರು ಇಂದಿರಾ ಅವರನ್ನು ಸ್ವಾಗತಿಸಲು ಬರದೇ ಸಾರಿಗೆ ಮಂತ್ರಿಗಳು ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಮಂತ್ರಿಗಳಾಗಿದ್ದ ಸತ್ಯಜೋತಾ ಅವರು ಸ್ವಾಗತಿಸಲು ಕಳುಹಿಸಿದ್ದರು. ಆ ವೇಳೆ ತುಂಬಾ ಸ್ಟ್ರಾಂಗ್ ಆಗಿದ್ದ ಇಂದಿರಾ ಅವರು ಶ್ರೀಗಳನ್ನು ಭೇಟಿಯಾಗುವುದಕ್ಕೆ ಬಂದಾಗ ಶ್ರೀಗಳು ಮೌನವೃತ್ತದಲ್ಲಿದ್ದಾಗ ಮೌನವೃತದಲ್ಲಿಯೇ ಸಂವಹನ ನಡೆಸಿ ಶ್ರೀಗಳ ಆಶೀರ್ವಾದ ಪಡೆದು ಹಸನ್ಮುಖಿಯಾಗಿ ಹೊರಬಂದ ಇಂದಿರಾ ಗಾಂಧಿ ಅವರು ವಿಧಾನಪರಿಷತ್ ಸದಸ್ಯ ನಾರಾಯಣ ಸ್ವಾಮಿ ಅವರ ಹೊಸಪೇಟೆಯಲ್ಲಿರುವ ಮನೆಗೆ ಊಟಕ್ಕೆ ತೆರಳುತ್ತಾರೆ.
Body:ಆಗ ಹೊಸಪೇಟೆಯ ಎಸಿಪಿಯಾಗಿದ್ದ ನಾನು ಮತ್ತು ನಮ್ಮ ಎಸ್ಪಿಯವರು ನಾರಾಯಣಸ್ವಾಮಿ ಅವರ ಮನೆ ಹೊರಗಡೆ ಕಾಯುತ್ತಿರುತ್ತೇವೆ. ಇದನ್ನು ಗಮನಿಸಿದ ಇಂದಿರಾಗಾಂಧಿ ಅವರು ನಾರಾಯಣಸ್ವಾಮಿ ಅವರಿಗೆ ಕೇಳಿ ‘ಆ ಪೊಲೀಸ್ ಅಧಿಕಾರಿಗಳಿಗೇ ಊಟಕ್ಕೆ ಕರೆಯುವುದಿಲ್ಲವೇ; ಅವರು ಬರದಿದ್ದರೇ ನನಗೂ ಊಟ ಬೇಡ’ ಎನ್ನುತ್ತಾಳೆ. ಸ್ವತ: ನಮ್ಮನ್ನು ಕರೆಯಿಸಿ ಅವರ ಎದುರುಗಡೆಯ ಟೇಬಲ್‍ನಲ್ಲಿಯೇ ಕುಳಿತು ಊಟ ಮಾಡಿಸುತ್ತಾಳೆ.
ಅದೇ ರೀತಿ ತಮ್ಮ ದೆಹಲಿಯ ಮನೆಯಲ್ಲಿಯೂ ಪೊಲೀಸರ ಬಗ್ಗೆ ತೀವ್ರ ಕಾಳಜಿ ಹೊಂದಿದ್ದ, ಪ್ರತಿ ಮಂಗಳವಾರ ಉಪವಾಸ ಮಾಡುತ್ತಿದ್ದ ಧೈರ್ಯವಂತೆ ಇಂದಿರಾಗಾಂಧಿ ಅವರು ಕೊನೆಗೆ ಪೊಲೀಸರಿಂದಲೇ ಹತ್ಯೆಗೀಡಾಗಿರುವುದು ಅತ್ಯಂತ ದುರಂತದ ಸಂಗತಿ ಎಂದರು.
ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಟಿ.ಕೊಟ್ರಪ್ಪ, ಕೊಟ್ಟೂರುಸ್ವಾಮಿ ಶಿಕ್ಷಣ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಅರವಿ ಬಸವನಗೌಡ, ಎಸ್ಪಿ ಲಕ್ಷ್ಮಣ ನಿಂಬರಗಿ, ಅರಿವು ಸಂಸ್ಥೆಯ ಎಸ್.ಪನ್ನರಾಜ, ಡಾ.ಅರವಿಂದ ಪಾಟೀಲ, ಕಾಲೇಜಿನ ಪ್ರಾಚಾರ್ಯ ಎಸ್.ಎ.ಹಿರೇಮಠ, ಪಿ.ಆರ್.ವೆಂಕಟೇಶ, ಯೋಗ ನಾಗರಾಜ, ಎಚ್.ಎಂ.ಕೊಟ್ರಯ್ಯ, ಎಲ್.ಟಿ.ಶೇಖರ, ಮಹೇಂದ್ರ ಕುಮಾರ ಇದ್ದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_04_GODA_CHARYE_BOOK_RELESED_7203310

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.