ETV Bharat / state

ಮರಿಯಮ್ಮನಹಳ್ಳಿಯಲ್ಲಿ ಬಿರುಗಾಳಿಗೆ ಹಾರಿ ಹೋದ ಮನೆಯ ಮೇಲ್ಛಾವಣಿ

ಏಕಾಏಕಿಯಾಗಿ ಬಿರುಗಾಳಿ ಬೀಸಿದ್ದರಿಂದ ಮರಿಯಮ್ಮನಹಳ್ಳಿಯ 7ನೇ ವಾರ್ಡ್​ನಲ್ಲಿರುವ ಆಶ್ರಯ ಮನೆಯ ಮೇಲ್ಛಾವಣಿ ಸಂಪೂರ್ಣವಾಗಿ ಬಿರುಗಾಳಿಗೆ ಹಾರಿಹೋಗಿದೆ.

house collapses
ಮನೆಯ ಮೇಲ್ಛಾವಣಿ ಕುಸಿತ
author img

By

Published : Apr 19, 2020, 9:33 AM IST

Updated : Apr 19, 2020, 10:21 AM IST

ಹೊಸಪೇಟೆ: ತಾಲೂಕಿನ ವಿವಿಧ ಕಡೆಗಳಲ್ಲಿ ನಿನ್ನೆ ಸಂಜೆ ಭಾರಿ ಗಾಳಿ ಬೀಸಿದ್ದರಿಂದ ಮರಿಯಮ್ಮನಹಳ್ಳಿಯಲ್ಲಿ ಆಶ್ರಯ ಮನೆಯೊಂದರ ಮೇಲ್ಛಾವಣಿ ಸೀಟ್ ಹಾರಿ ಹೋಗಿದ್ದು, ಮನೆಯಲ್ಲಿರುವ ಅಡುಗೆ ಸಾಮಗ್ರಿಗಳೆಲ್ಲಾ ಹಾಳಾಗಿವೆ.

ತಾಲೂಕಿನ ಮರಿಯಮ್ಮನಹಳ್ಳಿಯ 7ನೇ ವಾರ್ಡ್​ನಲ್ಲಿರುವ ಮ್ಯಾದರಹಳ್ಳಿ ರಾಮಣ್ಣ ಎಂಬುವರ ಆಶ್ರಯ ಮನೆಯ ಮೇಲ್ಛಾವಣಿ ಸಂಪೂರ್ಣವಾಗಿ ಬಿರುಗಾಳಿಗೆ ಕಿತ್ತೋಗಿದೆ. ಬಿರುಗಾಳಿ ಬೀಸಿದಾಗ ಮನೆಯಲ್ಲಿ ಮಕ್ಕಳು ಮತ್ತು ಗರ್ಭಿಣಿ ಮನೆಯಲ್ಲಿದ್ದರು.

ಏಕಾಏಕಿಯಾಗಿ ಬಿರುಗಾಳಿ ಬೀಸಿದ್ದರಿಂದ ಅಡುಗೆ ಮನೆಯ ಸೀಟ್‌ಗಳು ಸಂಪೂರ್ಣವಾಗಿ ಗಾಳಿಯ ರಭಸಕ್ಕೆ ಮುರಿದು ತುಂಡಾಗಿ ಮನೆಯೊಳೆಗೆ ಬಿದ್ದಿವೆ. ಮನೆಯಲ್ಲಿದ್ದ ಗರ್ಭಿಣಿಯು ತನ್ನ ಮಕ್ಕಳನ್ನು ಕರೆದುಕೊಂಡು ಹೊರ ಬಂದಿರುವುದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ.

Last Updated : Apr 19, 2020, 10:21 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.