ಹೊಸಪೇಟೆ: ವಿಜಯ ನಗರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವೆಂಕಟರಾವ್ ಘೋರ್ಪಡೆ ಗೆಲ್ಲಲೇ ಬೇಕು ಎಂಬ ಆಸೆಯಿಂದ ಕಾರ್ಯಕರ್ತರೇ ಸ್ವಇಚ್ಛೆಯಿಂದ ಮನೆ ಮನೆಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ ಎಂದು ಪಕ್ಷದ ಕಾರ್ಯಕರ್ತ ರಾಮಾಂಜನೇಯ ಅಭಿಪ್ರಾಯಪಟ್ಟರು.
ನಗರದಲ್ಲಿ ಇಂದು ಬೆಳಗ್ಗೆಯಿಂದ ಕಾಂಗ್ರೆಸ್ ಕಾರ್ಯಕರ್ತರು ವೆಂಕಟರಾವ್ ಘೋರ್ಪಡೆ ಅವರ ಪರವಾಗಿ ಭರ್ಜರಿ ಮತ ಪ್ರಚಾರ ಮಾಡುತ್ತಿದ್ದಾರೆ. ಅವರು ಘೋರ್ಪಡೆ ಮೇಲಿನ ಅಭಿಮಾನದಿಂದ ಮತಪ್ರಚಾರದಲ್ಲಿ ತೊಡಗಿದ್ದು, ಅಭ್ಯರ್ಥಿ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ ಎಂದು ಪಕ್ಷದ ಕಾರ್ಯಕರ್ತ ರಾಮಾಂಜನೇಯ ತಿಳಿಸಿದರು.
ಈ ವರೆಗೂ ಮೂರು ಬಾರಿ ಗೆದ್ದು ಬಂದಿರುವ ಆನಂದ ಸಿಂಗ್ ಕ್ಷೇತ್ರದ ಜನತೆಗೆ ಯಾವುದೇ ಕೆಲಸವನ್ನೂ ಮಾಡಿಲ್ಲ. ಅವರಿಗೆ ಜನರ ಬಗ್ಗೆ ಕಾಳಜಿ ಇಲ್ಲ. ಇಂತಹ ವ್ಯಕ್ತಿಯನ್ನು ಆಯ್ಕೆ ಮಾಡುವುದು ಸರಿ ಅಲ್ಲ ಎಂದು ಕಾರ್ಯಕರ್ತ ರಾಮಾಂಜನೇಯ ಅಕ್ರೋಶವನ್ನು ವ್ಯಕ್ತ ಪಡಿಸಿದರು.