ಬಳ್ಳಾರಿ: ಸುಮಾರು 110 ಕೆ.ಜಿಯ ಜಮನಪುರಿ ಮತ್ತು ರಾಜಸ್ಥಾನ ಮಿಶ್ರಿತ ತಳಿಯ ಓತು (ಆಡು ಅಥವಾ ಕುರಿ)ವನ್ನು, ಅದರ ಮಾಲೀಕ 80 ಸಾವಿರ ರೂ.ಗಳಿಗೂ ಮಾರಾಟಕ್ಕೆ ನಿರಾಕರಿಸಿದ್ದಾನೆ.
ಗಣಿನಾಡು ಬಳ್ಳಾರಿಯ ಗ್ರಾಮಾಂತರ ಪ್ರದೇಶದ ರೇಡಿಯೋ ಪಾರ್ಕ್ನಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಕುರಿಗಳ ಮಾರಾಟ ಮಾಡಲಾಗುತ್ತಿದೆ. ಇಲ್ಲಿಗೆ ಮೌಸಿಮ್ ಖಾನ್ ಎಂಬವರು ತಮ್ಮ ಜಮನಪುರಿ ಮತ್ತು ರಾಜಸ್ಥಾನ ಮಿಶ್ರಿತ ತಳಿಯ ಎರಡು ವರ್ಷ ನಾಲ್ಕು ತಿಂಗಳ ಕುರಿಯನ್ನು ತಂದಿದ್ದರು. ಇದು 110 ಕೆಜಿ ಇದೆ. ಈ ಕುರಿಯನ್ನು ಗ್ರಾಹಕರು 80 ಸಾವಿರ ರೂಪಾಯಿಗೆ ಖರೀದಿಗೆ ಕೇಳಿದರೂ ಮಾಲೀಕ ಮಾತ್ರ ಕೊಟ್ಟಿಲ್ಲ. ಬದಲಾಗಿ ಅದನ್ನು ಬಕ್ರೀದ್ ಹಬ್ಬಕ್ಕೆ ದೇವರಿಗೆ ಬಿಡಲಾಗಿದೆ ಎಂದು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
40 ರಿಂದ 50 ಕುರಿಗಳನ್ನು ಈ ಬಾರಿ ಬಕ್ರೀದ್ ಹಬ್ಬದಲ್ಲಿ ಮಾರಾಟ ಮಾಡಿದ್ದೇನೆ. ಈ ಓತು ಜಮನಪುರಿ ಮತ್ತು ರಾಜಸ್ಥಾನ ಮಿಶ್ರಿತ ತಳಿಯಾಗಿದೆ. ಇದರ ಮರಿಗಳನ್ನು ಬೇಕಾದರೆ ಕೊಡುತ್ತೇನೆ. ಮರಿಗಳ ಬೆಲೆ 40 ಸಾವಿರ ರೂ. ಎಂದು ಮಾಲೀಕ ತಿಳಿಸಿದ್ದಾನೆ.