ಬಳ್ಳಾರಿ : ಮನಂ ಖ್ಯಾತಿಯ ಬಳ್ಳಾರಿ ವಲಯದ ಐಜಿಪಿ ಎಂ ನಂಜುಂಡಸ್ವಾಮಿಯವರ ಘೋಷ ವಾಕ್ಯವನ್ನು ಯುವಕನೊಬ್ಬ ತನ್ನ ಕೈಮೇಲೆ ಹಚ್ಚೆ ಹಾಕಿಸಿಕೊಂಡು ಅಭಿಮಾನ ಮೆರೆದಿದ್ದಾನೆ.
ಮನಂ ಅವರ ಜನಪ್ರಿಯವಾದ 'ನಾವೆಲ್ಲಾ ಭಾರತೀಯರು, ನಮ್ಮೆಲ್ಲರ ಧರ್ಮ ಭಾರತೀಯ ಧರ್ಮ, ನಮ್ಮ ಧರ್ಮ ಗ್ರಂಥ ಭಾರತದ ಸಂವಿಧಾನ' ಎಂಬ ಘೋಷ ವಾಕ್ಯವನ್ನು ಜನಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿರುವ ಬೈಲೂರು ಮಲ್ಲಿಕಾರ್ಜುನ ಎಂಬ ಯುವಕ ಹಚ್ಚೆ ಹಾಕಿಸಿಕೊಂಡಿದ್ದಾನೆ.
ತನ್ನ ಜೀವನದ ಕ್ಷಣದವರೆಗೂ ಎಂ.ನಂಜುಂಡಸ್ವಾಮಿ ಹಾಗೂ ಅವರ 'ನಾವೆಲ್ಲರೂ ಭಾರತೀಯರು' ಘೋಷ ವಾಕ್ಯ ಕೈಯಲ್ಲಿ ಇರಬೇಕು ಎಂದು ಹಚ್ಚೆ ಹಾಕಿಸಿಕೊಂಡಿರುವುದಾಗಿ ಮಲ್ಲಿಕಾರ್ಜುನ ತಿಳಿಸಿದ್ದಾರೆ. ಹಾಗೂ ಆರು ತಿಂಗಳ ಹಿಂದೆ ಖರೀದಿಸಿದ್ದ ತಮ್ಮ ಹೊಸ ಕಾರಿನ ಮೇಲೆ ಕೂಡ ಇದೇ ಘೋಷವಾಕ್ಯ ಬರೆಸಿಕೊಂಡಿದ್ದರು.