ETV Bharat / state

ಕೊಲ್ಕತ್ತಾ ಮೂರ್ತಿ ತಯಾರಕರ ಕೈಚಳಕ...ಗಣಿನಗರಿಯಲ್ಲಿ ತಲೆ ಎತ್ತಲಿದೆ 'ಜಿಯೋ' ಆಕಾರದ ಗಣೇಶ! - ಗಣಿನಗರಿ ಬಳ್ಳಾರಿ

ಗಣಿನಗರಿ ಬಳ್ಳಾರಿಯಲ್ಲಿ 'ಜಿಯೋ' ಆಕರದ ಗಣೇಶಮೂರ್ತಿಗಳನ್ನು ವೆಸ್ಟ್ ಬೆಂಗಾಲ್ ರಾಜ್ಯದ ಕೊಲ್ಕತ್ತಾ ಮೂಲದ ಯುವಕರು ತಯಾರಿಸುತ್ತಿದ್ದಾರೆ. ಈ ಮೂರ್ತಿಗಳು ಗಣಿನಗರಿಯ ಸಾರ್ವಜನಿಕರ ವಿಶೇಷ ಗಮನ ಸೆಳೆದಿದೆ.

'ಜಿಯೊ' ಆಕಾರದ ಗಣೇಶ
author img

By

Published : Aug 23, 2019, 6:17 AM IST

ಬಳ್ಳಾರಿ: ಗಣೇಶ ಬಂದ.. ಕಾಯಿ-ಕಡುಬು ತಿಂದ.. ಎಂಬಂತೆ ಗಣಿನಗರಿ ಬಳ್ಳಾರಿಯಲ್ಲಿ 'ಜಿಯೋ' ಆಕರದ ಗಣೇಶಮೂರ್ತಿ ತಲೆಎತ್ತಲಿದೆ.

ಪಶ್ಚಿನ ಬಂಗಾಲ ರಾಜ್ಯದ ಕೊಲ್ಕತ್ತಾ ಮೂಲದ ಯುವಕರ ಕೈ ಚಳಕದಿಂದಲೇ ಈ 'ಜಿಯೋ' ಕಂಪನಿಯ ಸಿಂಬಾಲ್ ಆಕರದ ಮೂರ್ತಿಯು ಜನ್ಮತಾಳಿದೆ. ಅದು ಗಣಿನಗರಿಯ ಸಾರ್ವಜನಿಕರ ವಿಶೇಷ ಗಮನ ಸೆಳೆದಿದೆ.‌ ಬಳ್ಳಾರಿ ನಗರ ಹೊರವಲಯದ ಅಲ್ಲೀಪುರದ ರಾಮೇಶ್ವರಿ ನಗರದ ಮುಖ್ಯದ್ವಾರದ ಬಳಿಯ ಶೆಡ್​​ನಲ್ಲಿ ಆ 'ಜಿಯೋ' ಕಂಪನಿಯ ಸಿಂಬಾಲ್ ಆಕರದ ಗಣೇಶಮೂರ್ತಿಯನ್ನು ಪಕ್ಕಾ ಮಣ್ಣಿನಿಂದಲೇ ತಯಾರಿಸಲಾಗುತ್ತದೆ. ವೆಸ್ಟ್ ಬೆಂಗಾಲಿ ಮೂಲದ ಮಣ್ಣು ಹಾಗೂ ಬಳ್ಳಾರಿಯ ಮೂಲದ ಮಣ್ಣನ್ನು ಮಿಶ್ರಿತಗೊಳಿಸಿ ತಯಾರಿಸಲಾಗುತ್ತದೆ. ಸೂರ್ಯನ ಕಿರಣಗಳು ಆ ಮೂರ್ತಿಯ ಮೇಲೆ ಬೀಳುವ ಸಲುವಾಗಿಯೇ ಶೆಡ್​​ನ ಹೊರಾಂಗಣದಲ್ಲಿಡಲಾಗಿದೆ. ಅದು ನೋಡುಗರ ವಿಶೇಷ ಆಕರ್ಷಣೆಯಾಗಿದೆ.

ಗಣಿನಗರಿಯಲ್ಲಿ ತಲೆ ಎತ್ತಲಿದೆ 'ಜಿಯೊ' ಆಕಾರದ ಗಣೇಶ

ಸತತ ನಾಲ್ಕು ತಿಂಗಳಕಾಲ ಗಣೇಶ ಮೂರ್ತಿ ತಯಾರಿಕೆ ಶುರು:

ಸತತ ನಾಲ್ಕು ತಿಂಗಳಕಾಲ ವೆಸ್ಟ್ ಬೆಂಗಾಲ್ ರಾಜ್ಯದ ಕೊಲ್ಕತ್ತಾ ಮೂಲದ ಎಂಟುಮಂದಿ ಕಾರ್ಮಿಕರು ಈ ಗಣೇಶಮೂರ್ತಿಗಳ ತಯಾರಿಕೆಯಲ್ಲಿ ತೊಡಗಿಕೊಂಡಿದ್ದು, ಅಂದಾಜು ಎಂಭತ್ತಕ್ಕೂ ವಿಶೇಷ ಗಣೇಶ ಮೂರ್ತಿಗಳನ್ನು ತಯಾರಿಸಿದ್ದಾರೆ.

ಪಿಓಪಿ ಗಣೇಶಮೂರ್ತಿಗಳಿಗಿಲ್ಲ ಬೇಡಿಕೆ:

ಪರಿಸ್ನೇಹಿಯಾದ ಮಣ್ಣಿನ ಗಣೇಶಮೂರ್ತಿಗಳಿಗೆ ಇಲ್ಲಿ ಹೆಚ್ಚಾಗಿ ಬೇಡಿಕೆಯಿದೆ. ಪಿಓಪಿ ಗಣೇಶಮೂರ್ತಿಗಳಿಗೆ ಅಷ್ಟೊಂದು ಬೇಡಿಕೆಯಿಲ್ಲ ಎಂದು ಕೊಲ್ಕತ್ತಾ‌ ಮೂಲದ ಕಾರ್ಮಿಕ ದಿಬಾಸ್ ಪಾಲ್ ತಿಳಿಸಿದ್ದಾರೆ.

ಕುಂಬಾರ ಓಣಿಯಲ್ಲಿ ಮಹಿಳೆಯರದ್ದೇ ಸಿಂಹಪಾಲು:

ನಗರದ ಕುಂಬಾರ ಓಣಿಯಲ್ಲಿ ಈ ಗಣೇಶಮೂರ್ತಿಗಳ ತಯಾರಿಕೆಯಲ್ಲಿ ಮಹಿಳೆಯರೇ ಹೆಚ್ಚಾಗಿ ಪಾಲ್ಗೊಂಡಿರೋದು ಕಂಡುಬಂತು. ಸಣ್ಣಮೂರ್ತಿಯಿಂದ ಹಿಡಿದು ದೊಡ್ಡ ಮೂರ್ತಿಗಳವರೆಗೂ ಪದವೀಧರ ವಿದ್ಯಾರ್ಥಿನಿಯಾದ ಗಿರಿಜಾ ತಯಾರಿಸುತ್ತಾರೆ. ಆ ಮೂರ್ತಿಗಳಿಗೆ ಸ್ವತಃ ತಾವೇ ಬಣ್ಣಲೇಪನ ಮಾಡುತ್ತಾಳೆ. ಸತತ ಹತ್ತು ವರ್ಷಗಳಿಂದಲೇ ಈ ಕಾಯಕದಲ್ಲಿ ತೊಡಗಿ ಕೊಂಡಿರುವುದಾಗಿ ಗಿರಿಜಾ ತಿಳಿಸಿದ್ದಾರೆ.

ತೃಪ್ತಿದಾಯಕ ಜೀವನ:

ಅಂದಾಜು ಹನ್ನೆರಡು ಮಂದಿಗೆ ಕೈಕೆಲಸ ನೀಡುವ ಮುಖೇನ ಮಣ್ಣಿನ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿರುವೆ. ನನಗೆ ಸಾಕಷ್ಟು ಉದ್ಯೋಗಾವಕಾಶ ಒದಗಿ ಬಂದರೂ ಕೂಡ ಈ ಗಣೇಶ ಮೂರ್ತಿ ತಯಾರಿಕೆ ಸೇರಿದಂತೆ ಕುಂಬಾರಿಕೆ ವೃತ್ತಿಯಲ್ಲಿ ತೃಪ್ತಿದಾಯಕ ಅನಿಸಿದೆ.‌ ಹೀಗಾಗಿ, ನಾನು ಹೊರಗಡೆ ಕೆಲಸಕ್ಕೆ ಹೋಗಿಲ್ಲ. ಪದವೀಧರೆ ಆದ ನಾನು ಯಾವುದೇ ಕೆಲಸ ಅರಸಿ ಹೋಗದೇ ನಾನೇ ಮತ್ತೊಬ್ಬರಿಗೆ ಕೆಲಸ ನೀಡುವಂತಹ ಶಕ್ತಿಯನ್ನು ಹೊಂದಿರುವೆ ಎಂದು ಗಿರಿಜಾ ಈ ಟಿವಿ ಭಾರತ್ ಗೆ ತಿಳಿಸಿದ್ದಾರೆ.

Intro:ಕಲ್ಕತ್ತಾ‌ ಮೂಲದ ಮೂರ್ತಿ ತಯಾರಕರ ಕೈಚಳಕ...
ಗಣಿನಗರಿಯಲ್ಲಿ ತಲೆ ಎತ್ತಲಿದೆ 'ಜಿಯೊ' ಆಕರದ ಗಣೇಶ!
ಬಳ್ಳಾರಿ: ಗಣೇಶ ಬಂದ ಕಾಯಿ, ಕಡುಬು ತಿಂದ ಎಂಬಂತೆ. ಗಣಿನಗರಿ ಬಳ್ಳಾರಿಯಲ್ಲಿ 'ಜಿಯೊ' ಆಕರದ ಗಣೇಶಮೂರ್ತಿ ತಲೆಎತ್ತಲಿದೆ.
ವೆಸ್ಟ್ ಬೆಂಗಾಲ್ ರಾಜ್ಯದ ಕಲ್ಕತ್ತಾ ಮೂಲದ ಯುವಕರ ಕೈ ಚಳಕದಿಂದಲೇ ಈ 'ಜಿಯೊ' ಕಂಪನಿಯ ಸಿಂಬಾಲ್ ಆಕರದ ಮೂರ್ತಿಯು ಜನ್ಮತಾಳಿದೆ. ಅದು ಗಣಿನಗರಿಯ ಸಾರ್ವಜನಿ ಕರ ವಿಶೇಷ ಗಮನ ಸೆಳೆದಿದೆ.‌
ಬಳ್ಳಾರಿ ನಗರ ಹೊರವಲಯದ ಅಲ್ಲೀಪುರದ ರಾಮೇಶ್ವರಿ ನಗರದ ಮುಖ್ಯದ್ವಾರದ ಬಳಿಯ ಶೆಡ್ ನಲ್ಲಿ ಆ 'ಜಿಯೊ' ಕಂಪನಿಯ ಸಿಂಬಾಲ್ ಆಕರದ ಗಣೇಶಮೂರ್ತಿಯನ್ನು
ಪಕ್ಕಾ ಮಣ್ಣಿನಿಂದಲೇ ತಯಾರಿಸಲಾಗುತ್ತದೆ. ವೆಸ್ಟ್ ಬೆಂಗಾಲಿ ಮೂಲದ ಮಣ್ಣು ಹಾಗೂ ಬಳ್ಳಾರಿಯ ಮೂಲದ ಮಣ್ಣನ್ನು ಮಿಶ್ರಿತಗೊಳಿಸಿ ತಯಾರಿಸಲಾಗುತ್ತದೆ. ಸೂರ್ಯನ ಕಿರಣಗಳು ಆ ಮೂರ್ತಿಯ ಮೇಲೆ ಬೀಳುವ ಸಲುವಾಗಿಯೇ ಶೆಡ್ ನ ಹೊರಾಂಗಣದಲ್ಲಿಡಲಾಗಿದೆ. ಅದು ನೋಡುಗರ ವಿಶೇಷ ಆಕರ್ಷಣೆಯಾಗಿದೆ.
ಸತತ ನಾಲ್ಕು ತಿಂಗಳಕಾಲ ಗಣೇಶ ಮೂರ್ತಿ ತಯಾರಿಕೆ ಶುರು: ಸತತ ನಾಲ್ಕು ತಿಂಗಳಕಾಲ ವೆಸ್ಟ್ ಬೆಂಗಾಲ್ ರಾಜ್ಯದ ಕಲ್ಕತ್ತಾ ಮೂಲದ ಎಂಟುಮಂದಿ ಕಾರ್ಮಿಕರು ಈ ಗಣೇಶಮೂರ್ತಿಗಳ ತಯಾರಿಕೆಯಲ್ಲಿ ತೊಡಗಿಕೊಂಡಿದ್ದು, ಅಂದಾಜು ಎಂಭತ್ತಕ್ಕೂ ವಿಶೇಷ ಗಣೇಶ ಮೂರ್ತಿಗಳನ್ನು ತಯಾರಿಸಿದ್ದಾರೆ.
ಪಿಓಪಿ ಗಣೇಶಮೂರ್ತಿಗಳಿಗಿಲ್ಲ ಬೇಡಿಕೆ: ಪರಿಸ್ನೇಹಿಯಾದ ಮಣ್ಣಿನ ಗಣೇಶಮೂರ್ತಿಗಳಿಗೆ ಇಲ್ಲಿ ಹೆಚ್ಚಾಗಿ ಬೇಡಿಕೆಯಿದೆ. ಪಿಓಪಿ ಗಣೇಶಮೂರ್ತಿಗಳಿಗೆ ಅಷ್ಟೊಂದು ಬೇಡಿಕೆಯಿಲ್ಲ ಎಂದು ಕಲ್ಕತ್ತಾ‌ ಮೂಲದ ಕಾರ್ಮಿಕ ದಿಬಾಸ್ ಪಾಲ್ ತಿಳಿಸಿ ದ್ದಾರೆ.

Body:ಕುಂಬಾರ ಓಣಿಯಲ್ಲಿ ಮಹಿಳೆಯರದ್ದೇ ಸಿಂಹಪಾಲು: ನಗರದ ಕುಂಬಾರ ಓಣಿಯಲ್ಲಿ ಈ ಗಣೇಶಮೂರ್ತಿಗಳ ತಯಾರಿಕೆಯಲ್ಲಿ ಮಹಿಳೆಯರೇ ಹೆಚ್ಚಾಗಿ ಪಾಲ್ಗೊಂಡಿರೋದು ಕಂಡುಬಂತು.
ಸಣ್ಣಮೂರ್ತಿಯಿಂದ ಹಿಡಿದು ದೊಡ್ಡ ಮೂರ್ತಿಗಳವರೆಗೂ ಪದವೀಧರ ವಿದ್ಯಾರ್ಥಿನಿಯಾದ ಗಿರಿಜಾ ತಯಾರಿಸುತ್ತಾರೆ.
ಆ ಮೂರ್ತಿಗಳಿಗೆ ಸ್ವತಃ ತಾವೇ ಬಣ್ಣಲೇಪನ ಮಾಡುತ್ತಾಳೆ. ಸತತ ಹತ್ತು ವರ್ಷಗಳಿಂದಲೇ ಈ ಕಾಯಕದಲಿ ತೊಡಗಿ ಕೊಂಡಿರುವುದಾಗಿ ಗಿರಿಜಾ ತಿಳಿಸಿದ್ದಾರೆ.
ತೃಪ್ತಿದಾಯಕ ಜೀವನ: ಅಂದಾಜು ಹನ್ನೆರಡು ಮಂದಿಗೆ ಕೈ
ಕೆಲಸ ನೀಡುವ ಮುಖೇನ ಮಣ್ಣಿನ ಮೂರ್ತಿಗಳ ತಯಾರಿಕೆ ಯಲ್ಲಿ ತೊಡಗಿರುವೆ. ನನಗೆ ಸಾಕಷ್ಟು ಉದ್ಯೋಗಾವಕಾಶ ಒದಗಿ ಬಂದರೂ ಕೂಡ ಈ ಗಣೇಶ ಮೂರ್ತಿ ತಯಾರಿಕೆ ಸೇರಿದಂತೆ ಕುಂಬಾರಿಕೆ ವೃತ್ತಿಯಲ್ಲಿ ತೃಪ್ತಿದಾಯಕ ಅನಿಸಿದೆ.‌ ಹೀಗಾಗಿ, ನಾನು ಹೊರಗಡೆ ಕೆಲಸಕ್ಕೆ ಹೋಗಿಲ್ಲ. ಪದವೀಧರೆ ಆದ ನಾನು ಯಾವುದೇ ಕೆಲಸ ಅರಸಿ ಹೋಗದೇ ನಾನೇ ಮತ್ತೊಬ್ಬರಿಗೆ ಕೆಲಸ ನೀಡುವಂತಹ ಶಕ್ತಿಯನ್ನು ಹೊಂದಿರುವೆ ಎಂದು ಗಿರಿಜಾ ಈ ಟಿವಿ ಭಾರತ್ ಗೆ ತಿಳಿಸಿದ್ದಾರೆ.
ಕುಂಬಾರಿಕೆ ವೃತ್ತಿ ಬಹಳ ಕಷ್ಟದಾಯಕ ಆಗಿದೆ.‌ ಈ ಹಿಂದೆ ಮಣ್ಣಿನ ಸಾಮಾಗ್ರಿಗಳಿಗೆ ಬಹುಬೇಡಿಕೆಯಿತ್ತಾದರೂ ಅದು ಮಾಯವಾಗಿದೆ. ಕೇವಲ ಹಬ್ಬ, ಹರಿದಿನಗಳಲ್ಲಿ ಮಾತ್ರ ಈ ಕುಂಬಾರಿಕೆ ವೃತ್ತಿಗೆ ಎಲ್ಲಿಲ್ಲದ ಬೇಡಿಕೆ ಬರುತ್ತೆ. ಆ ಮೇಲೆ ಅದು ನಾಪತ್ತೆಯಾಗುತ್ತದೆ. ಇದೊಂದುಥರ ಭದ್ರತೆಯಿಲ್ಲದ‌ ಕುಲ ಕಸುಬಾಗಿದೆ. ಆಳ್ವಿಕೆ ಸರ್ಕಾರಗಳು ಕುಂಬಾರ ಸಮುದಾಯ ದವರ ಶ್ರೇಯೋಭಿವೃದ್ಧಿಗೆ ಪೂರಕ ಯೋಜನೆಯನ್ನು ರೂಪಿಸಬೇಕೆಂದು ನಿರ್ಮಲಾ ಈ ಟಿವಿ ಭಾರತ್ ಗೆ ತಿಳಿಸಿದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:ಪವರ್ ಡೈರೆಕ್ಟರ್ ನಲ್ಲಿ ಈ ವಿಡಿಯೊ ಕಳಿಸಿರುವೆ. ಗಮನಿಸಿರಿ.
KN_BLY_1_GANESH_FESTIVAL_SPECIAL_VISUALS_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.