ETV Bharat / state

ಬ್ಯಾಂಡು ಬಜಾನಾ ಮೂಲಕ ವಿದ್ಯಾರ್ಥಿಗಳಿಗೆ ಭರ್ಜರಿ ಸ್ವಾಗತ ಕೋರಿದ ವಿದ್ಯಾಲಯ​ - ವಿದ್ಯಾರ್ಥಿಗಳಿಗೆ ವಾದ್ಯ-ಮೇಳದೊಂದಿಗೆ ಆತ್ಮೀಯವಾಗಿ ಸ್ವಾಗತ

ಈ ವಿಷಯ ತಿಳಿದ ಜಿಲ್ಲಾ ಪಂಚಾಯತ್‌ ಸಿಇಒ ಕೆ ಆರ್ ನಂದಿನಿ ಹಾಗೂ ಡಿಡಿಪಿಐ ಸಿ.ರಾಮಪ್ಪ ನೇತೃತ್ವದ ತಂಡವು ವಿದ್ಯಾಲಯಕ್ಕೆ ಭೇಟಿ ನೀಡಿ, ಶಾಲೆಯಲ್ಲಿ ಕೈಗೊಂಡಿರುವ ಅಗತ್ಯ ಮುಂಜಾಗ್ರತಾ ಕ್ರಮಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು..

Welcome  with Band Set
ವಾದ್ಯ-ಮೇಳದೊಂದಿಗೆ ವಿದ್ಯಾರ್ಥಿಗಳಿಗೆ ಸ್ವಾಗತ
author img

By

Published : Jan 1, 2021, 3:56 PM IST

ಬಳ್ಳಾರಿ : ಒಂಬತ್ತು ತಿಂಗಳುಗಳ ಬಳಿಕ ಶಾಲಾ-ಕಾಲೇಜುಗಳ ತರಗತಿಗಳು ಪ್ರಾರಂಭವಾದ ಹಿನ್ನೆಲೆ ನಗರದ ಸರ್ಕಾರಿ ಶಾಲೆಯೊಂದು ತನ್ನ ವಿದ್ಯಾರ್ಥಿಗಳಿಗೆ ವಾದ್ಯ ಮೇಳದೊಂದಿಗೆ ಆತ್ಮೀಯವಾಗಿ ಸ್ವಾಗತ ಕೋರಿತು.

ವಾದ್ಯ ಮೇಳದೊಂದಿಗೆ ವಿದ್ಯಾರ್ಥಿಗಳಿಗೆ ಸ್ವಾಗತ..

ಬಳ್ಳಾರಿ ನಗರದ ಕೌಲ್ ಬಜಾರ್ ಪ್ರದೇಶ ವ್ಯಾಪ್ತಿಯಲ್ಲಿರುವ ಆದರ್ಶ ವಿದ್ಯಾಲಯದಲ್ಲಿ ಬ್ಯಾಂಡು ಬಜಾನದ ಸದ್ದು ಜೋರಾಗಿತ್ತು. ಕಳೆದ ಹಲವಾರು ತಿಂಗಳಿನಿಂದ ಗೃಹ ವಾಸದಲ್ಲಿದ್ದ ವಿದ್ಯಾರ್ಥಿಗಳು, ಇದೀಗ ಶಾಲೆಯತ್ತ ಮುಖ ಮಾಡಿದ್ದು, ಶಾಲೆಯ ಮುಖ್ಯ ಶಿಕ್ಷಕ ಕೆ ಜಿ ಆಂಜನೇಯಲು, ತಮ್ಮ ವಿದ್ಯಾರ್ಥಿಗಳ ಆಗಮನಕ್ಕೆ ಸ್ವಾಗತ ಕೋರುವ ಸಲುವಾಗಿ ಬ್ಯಾಂಡ್ ಬಾರಿಸುವವರನ್ನು ನಿಯೋಜಿಸಿದ್ದರು.

ಬಳಿಕ, ಆ ವಿದ್ಯಾರ್ಥಿಗಳಿಗೆ ಹೂವು ನೀಡುವ ಮುಖೇನ ಶಿಕ್ಷಕ ವೃಂದವು ಹೊಸ ವರ್ಷದ ಶುಭಾಶಯ ಕೋರಿ, ಪ್ರತಿಯೊಬ್ಬರಿಗೂ ಸ್ಯಾನಿಟೈಸರ್ ನೀಡಿ ಹಾಗೂ ಥರ್ಮಲ್​​ ಸ್ಕ್ಯಾನಿಂಗ್​​ ನಡೆಸಿ ತರಗತಿಗಳಿಗೆ ಕಳುಹಿಸಿಕೊಟ್ಟರು.

ಈ ವಿಷಯ ತಿಳಿದ ಜಿಲ್ಲಾ ಪಂಚಾಯತ್‌ ಸಿಇಒ ಕೆ ಆರ್ ನಂದಿನಿ ಹಾಗೂ ಡಿಡಿಪಿಐ ಸಿ.ರಾಮಪ್ಪ ನೇತೃತ್ವದ ತಂಡವು ವಿದ್ಯಾಲಯಕ್ಕೆ ಭೇಟಿ ನೀಡಿ, ಶಾಲೆಯಲ್ಲಿ ಕೈಗೊಂಡಿರುವ ಅಗತ್ಯ ಮುಂಜಾಗ್ರತಾ ಕ್ರಮಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.