ಬಳ್ಳಾರಿ: ಕುರುಗೋಡು ತಾಲೂಕಿನ ಹೆಚ್. ವೀರಾಪುರ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ ಪ್ರಶಾಂತ್ (30) ಎಂಬುವವರು ಹೃದಾಘಾತದಿಂದ ಇಂದು ಬೆಳಗಿನ ಜಾವ ಮೃತಪಟ್ಟಿದ್ದಾರೆ.
![teacher died due to heart attack on road](https://etvbharatimages.akamaized.net/etvbharat/prod-images/6206251_thugaavt.jpg)
ಸಿರಿಗೇರಿ ಗ್ರಾಮದಲ್ಲಿ ವಾಸವಿದ್ದ ಪ್ರಶಾಂತ್ ಬೀದರ್ ಜಿಲ್ಲೆಯವರು. ಇಂದು ಬೆಳಗ್ಗೆ ವಾಯು ವಿಹಾರಕ್ಕೆಂದು ತೆರಳಿದ ಸಂದರ್ಭದಲ್ಲಿ ತೀವ್ರ ಹೃದಾಘಾತವಾಗಿದ್ದು, ಸ್ಥಳದಲ್ಲೆ ಸಾವಿಗೀಡಾಗಿದ್ದಾರೆ.
ಮೃತ ಪ್ರಶಾಂತ್ ಅವರ ಪತ್ನಿ ತುಂಬು ಗರ್ಭಿಣಿ, ಶಿಕ್ಷಕನ ಸಾವಿನಿಂದಾಗಿ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.