ಬಳ್ಳಾರಿ: ಜಿಲ್ಲೆಯ ಕಂಪ್ಲಿ ತಾಲೂಕಿನಲ್ಲಿ ಶಾಲೆ ಆರಂಭವಾಗಿ ಇವತ್ತಿಗೆ 12 ದಿನಗಳೇ ಕಳೆದರೂ ವಿದ್ಯಾರ್ಥಿಗಳು ಮಾತ್ರ ಶಾಲೆಗಳತ್ತ ಸುಳಿಯದೇ ಇರೋದು ಶಿಕ್ಷಕರಿಗೆ ಬೇಸರ ಉಂಟು ಮಾಡಿದೆ.
ಹೀಗಾಗಿ, ವಿದ್ಯಾರ್ಥಿಗಳನ್ನ ಶಾಲೆಗಳಿಗೆ ಕರೆತರುವ ನಿಟ್ಟಿನಲ್ಲಿ ಶಿಕ್ಷಕರೇ ಬೀದಿಗಿಳಿದಿದ್ದಾರೆ. ಅವರನ್ನ ಶಾಲೆಗಳಿಗೆ ಮರಳುವಂತೆ ಮಾಡುವ ಗುರುಗಳೇ ಮುಂದಾಗಿದ್ದಾರೆ. ಕಂಪ್ಲಿ ಪಟ್ಟಣದ ಗ್ಯಾರೇಜ್, ಅಂಗಡಿ, ಹೊಲ- ಗದ್ದೆಗಳಲ್ಲಿ ಕೆಲಸ ಮಾಡ್ತಾ ಇರೋ ವಿದ್ಯಾರ್ಥಿಗಳನ್ನ ಹುಡುಕಿ ಶಿಕ್ಷಕರೇ ಶಾಲೆಗೆ ಕರೆತರುತ್ತಿದ್ದಾರೆ. ಇದಲ್ಲದೇ, ವಿದ್ಯಾರ್ಥಿಗಳ ಪೋಷಕರಿಗೆ ತಿಳಿವಳಿಕೆ ಹೇಳಿ ಮರಳಿ ಶಾಲೆಗೆ ಕಳಿಸಿಕೊಡುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಮಹಾಮಾರಿ ಈ ಕೊರೊನಾ ಭಯ ಹಾಗೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಪೋಷಕರು ತಮ್ಮ ಮಕ್ಕಳನ್ನ ಕೆಲಸಕ್ಕೆ ಕಳಿಸುತ್ತಿದ್ದಾರೆ. ಈ ಹಿನ್ನೆಲೆ ಕಂಪ್ಲಿ ಪಟ್ಟಣದ ಷಾ.ಮಿಯಾಚಂದ್ ಸರ್ಕಾರಿ ಪಿಯು ಕಾಲೇಜಿನ ಶಿಕ್ಷಕರು ಶಾಲಾ - ಕಾಲೇಜು ಆರಂಭವಾದ್ರೂ ಶಾಲೆಗೆ ಬರದೇ ಮನೆ ಹಾಗೂ ಸಾರ್ವಜನಿಕ ವಲಯದಲ್ಲಿ ಕೆಲಸದಲ್ಲಿ ತೊಡಗಿರುವ ಮಕ್ಕಳನ್ನ ಮರಳಿ ಶಾಲೆಗೆ ಕರೆತರಲು ಹರಸಾಹಸ ಪಡ್ತಿದ್ದಾರೆ.
ಇದನ್ನೂ ಓದಿ:ಭಾರತದ ಕೊರೊನಾ ಕದನ: ನಿನ್ನೆ ಅತಿ ಕಡಿಮೆ ಕೋವಿಡ್ ಕೇಸ್ ಪತ್ತೆ