ಬಳ್ಳಾರಿ: ಕರ್ನಾಟಕ-ಆಂಧ್ರ ಪ್ರದೇಶದ ಗಡಿ ಸರ್ವೇಗೆ 1896ರ ನಕ್ಷೆ ಮೂಲವಲ್ಲ. ಅದು ಕೇವಲ ಮಾದರಿ ನಕಾಶೆ ಎಂದು ಗಣಿ ಅಕ್ರಮದ ಹೋರಾಟಗಾರ ಟಪಾಲ್ ಗಣೇಶ ಅಭಿಪ್ರಾಯಪಟ್ಟಿದ್ದಾರೆ.
ಬಳ್ಳಾರಿಯ ಪತ್ರಿಕಾ ಭವನದಲ್ಲಿಂದು ಆಯೋಜಿಸಿದ್ದ ಸುದ್ದಿಗೋಷ್ಠಿಗೂ ಮುನ್ನವೇ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಸರ್ವೇ ಆಫ್ ಇಂಡಿಯಾದ ಡೈರೆಕ್ಟರ್ಗಳು ಕರ್ನಾಟಕ-ಆಂಧ್ರ ಪ್ರದೇಶದ ಗಡಿ ಸರ್ವೇ ಹಾಗೂ ಗಡಿ ಗುರುತನ್ನು 1896ರ ನಕ್ಷೆಯ ಪ್ರಕಾರ ಮಾಡಿ ಮುಗಿಸಿದ್ದಾರೆ. ಅದನ್ನು ಉಭಯ ರಾಜ್ಯಗಳ ಸರ್ವೇ ಹಾಗೂ ಕಂದಾಯ ಅಧಿಕಾರಿಗಳು ಒಪ್ಪುತ್ತಿಲ್ಲ. ಆ ನಕಾಶೆ ಮೂಲದ್ದಲ್ಲ ಎಂದು ಪ್ರಶ್ನಿಸಿ ನಾನು ಈಗಾಗಲೇ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದೇನೆ. ಹೀಗಾಗಿ ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು, ಸರ್ವೇ ಆಫ್ ಇಂಡಿಯಾಗೆ ಮೂರು ಬಾರಿ ಪತ್ರ ಬರೆದರೂ ಕೂಡ ಯಾವುದೇ ಪ್ರತಿಕ್ರಿಯೆ ಡೈರೆಕ್ಟರ್ಗಳು ನೀಡಿಲ್ಲ ಎಂದು ತಿಳಿಸಿದ್ದಾರೆ.
ಕರ್ನಾಟಕ-ಆಂಧ್ರ ಪ್ರದೇಶ ಗಡಿ ಭಾಗದಲ್ಲಿ ಕಂದಾಯ ಮತ್ತು ಗ್ರಾಮಗಳ ಸರಹದ್ದಿನ ಪ್ರಕಾರವೇ ಗಣಿಗಾರಿಕೆ ಮಾಡಲು ಅನುಮತಿ ನೀಡಲಾಗಿದೆ. ಅದು ಕೂಡ ಈ 1887ರ ಟ್ರಾವರ್ಸ್ ಡೇಟಾ ಪ್ರಕಾರ. ಹೀಗಾಗಿ 1887ರ ನಕ್ಷೆಯ ಪ್ರಕಾರವೇ ಗಡಿ ಗುರುತು ಗುರುತಿಸುವ ಕಾರ್ಯ ಆಗಬೇಕಿದೆ. ಹಾಗೂ ಗಡಿ ಸರ್ವೇಗೆ ಮುಂದಾಗಬೇಕೆಂದು ಟಪಾಲ್ ಗಣೇಶ್ ಆಗ್ರಹಿಸಿದ್ದಾರೆ.