ETV Bharat / state

ರೆಡ್ಡಿ ಸಹೋದರರಿಗೆ ಸಚಿವ ಸ್ಥಾನ ನೀಡಬೇಡಿ: ಸಿಎಂಗೆ ಟಪಾಲ್ ಗಣೇಶ್​ ಮನವಿ - Tapal Ganesh appeals to CM

ಕಾನ್ಸ್​ಸ್ಟೇಬಲ್ ಕುಟುಂಬದ ಹಿನ್ನೆಲೆಯಿಂದ ಬಂದಂತಹ ನೀವು ಇಷ್ಟೊಂದು ಅಗರ್ಭ ಶ್ರೀಮಂತರಾಗೋದಕ್ಕೆ ಕಾರಣ ಏನಂದ್ರೆ ನೀವು ನಡೆಸಿದ ಗಣಿ ಅಕ್ರಮ ಎಂದು ರೆಡ್ಡಿ ಸಹೋದರರ ವಿರುದ್ಧ ಗಣಿ ಅಕ್ರಮದ ಹೋರಾಟಗಾರ ಟಪಾಲ್ ಗಣೇಶ್ ಕಿಡಿಕಾರಿದ್ದಾರೆ.

dsd
ಸಿಎಂಗೆ ಟಪಾಲ್ ಗಣೇಶ್​ ಮನವಿ
author img

By

Published : Sep 18, 2020, 11:25 AM IST

Updated : Sep 18, 2020, 12:24 PM IST

ಬಳ್ಳಾರಿ: ರೆಡ್ಡಿ ಸಹೋದರರಿಗೆ ಯಾವುದೇ ಕಾರಣಕ್ಕೂ ಸಚಿವ ಸ್ಥಾನ ನೀಡಬೇಡಿ ಎಂದು ಗಣಿ ಅಕ್ರಮದ ಹೋರಾಟಗಾರ ಟಪಾಲ್ ಗಣೇಶ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಮನವಿ ಮಾಡಿದ್ದಾರೆ.

ಸಿಎಂಗೆ ಟಪಾಲ್ ಗಣೇಶ್​ ಮನವಿ

ಈ ಬಗ್ಗೆ ವಿಡಿಯೋ ಮಾಡಿರುವ ಗಣೇಶ್, ಶಾಸಕ ಸೋಮಶೇಖರ ರೆಡ್ಡಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ್ದಾರೆ. ಒಮ್ಮೆ ಆಂಜನೇಯಸ್ವಾಮಿ ನೀಡಿದ್ದ ಅನುಗ್ರಹವೇ ಸದ್ಬಳಕೆಯಾಗಲಿಲ್ಲ.‌ ಈಗ ಮತ್ತೊಮ್ಮೆ ಏತಕ್ಕೆ ಆ ಆಂಜನೇಯಸ್ವಾಮಿ ನಿಮಗೆ ಅನುಗ್ರಹಿಸುತ್ತಾನೆ. ಈಗಾಗಲೇ 2008ರಲ್ಲಿಯೇ ರೆಡ್ಡಿ ಸಹೋದರರ ಕುಟುಂಬಕ್ಕೆ ಆಂಜನೇಯಸ್ವಾಮಿಯ ಅನುಗ್ರಹವಿತ್ತು.‌ ಅದಕ್ಕಾಗಿಯೇ ನಿಮ್ಮ ಮನೆ ಬಾಗಿಲಿಗೆ ಅಧಿಕಾರ, ಹಣ ಹಾಗೂ ಅಂತಸ್ತು ಬಂತು.

ಮಾಡಬಾರದನ್ನೆಲ್ಲಾ ಮಾಡಿರುವ ನಿಮಗೆ ಏತಕ್ಕೆ ಆಂಜನೇಯಸ್ವಾಮಿ ಅನುಗ್ರಹ ನೀಡುತ್ತಾನೆ ನೀವೇ ಹೇಳಿ.‌ ಆಗ ಮಾಡಿದ್ದನ್ನೆಲ್ಲಾ ಈಗ ಸಚಿವ ಸ್ಥಾನ ಪಡೆದು ಎಲ್ಲವನ್ನೂ ಮುಚ್ಚಿಹಾಕಿ, ನಾವೆಲ್ಲರೂ ಶುದ್ಧ ಹಸ್ತರು ಅಂತ ತೋರಿಸಿಕೊಳ್ಳಲಿಕ್ಕೆ ನಿಮಗೆ ಸಚಿವ ಸ್ಥಾನ ನೀಡಬೇಕೇ ಎಂದು ಶಾಸಕ ಗಾಲಿ ಸೋಮಶೇಖರ ರೆಡ್ಡಿಗೆ ಟಪಾಲ್ ಗಣೇಶ್​ ಛೇಡಿಸಿದ್ದಾರೆ.

Last Updated : Sep 18, 2020, 12:24 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.