ಬಳ್ಳಾರಿ: ಎತ್ತುಗಳಿಗೆ ಸ್ನಾನ ಮಾಡಿಸಲು ಹೋದ ವಿದ್ಯಾರ್ಥಿ ನೀರು ಪಾಲಾದ ಘಟನೆ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಲಿಂಗನಾಯಕನಹಳ್ಳಿಯಲ್ಲಿ ನಡೆದಿದೆ.
ಲಿಂಗನಾಯಕನಹಳ್ಳಿ ಗ್ರಾಮದ ವಿದ್ಯಾರ್ಥಿ ಅಭಿಲಾಷ್ (16) ನೀರು ಪಾಲಾದ ಬಾಲಕ ಎಂದು ತಿಳಿದು ಬಂದಿದೆ.
ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಅಭಿಲಾಷ್ ಹತ್ತನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದ. ಈ ದಿನ ಬೆಳಗ್ಗೆ ಜೋಡೆತ್ತುಗಳನ್ನು ಸ್ನಾನ ಮಾಡಿಸಿದ ಬಳಿಕ ತಾನು ಸ್ನಾನ ಮಾಡಲು ಹೋದವನು ನೀರುಪಾಲಾಗಿದ್ದಾನೆ.
ಈ ವಿದ್ಯಾರ್ಥಿ ನೀರು ಪಾಲಾದ ಘಟನೆ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕಾಗಮಿಸಿದ ಗ್ರಾಮಸ್ಥರು ಆ ವಿದ್ಯಾರ್ಥಿಯ ಮೃತ ದೇಹದ ಹುಡುಕಾಟದಲ್ಲಿ ತೊಡಗಿಸಿಕೊಂಡಿದ್ದಾರೆ.