ETV Bharat / state

ಬಳ್ಳಾರಿ: ಒಂದೂವರೆ ದಶಕದ ನಂತರ ಬೀದಿನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಚಾಲನೆ - ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್

ಬಳ್ಳಾರಿ ಮಹಾನಗರದಲ್ಲಿ 30 ಸಾವಿರಕ್ಕೂ ಅಧಿಕ ಬೀದಿನಾಯಿಗಳಿವೆ ಎಂದು ಅಂದಾಜಿಸಲಾಗಿದೆ. 2007ನೇ ಇಸವಿಯಲ್ಲಿ ಈ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿದ್ದು ಬಿಟ್ಟರೆ, ಈವರೆಗೂ ನಡೆದಿಲ್ಲ. ಅದಕ್ಕೆ ಮಹಾನಗರ ಪಾಲಿಕೆ ಇಚ್ಛಾಶಕ್ತಿ ಕೊರತೆಯೇ ಕಾರಣ ಎನ್ನಲಾಗುತ್ತಿದೆ.

street-dogs-vasectomy-surgery-in-ballary
ಬೀದಿ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ
author img

By

Published : Jul 28, 2021, 4:46 PM IST

ಬಳ್ಳಾರಿ: ಒಂದಲ್ಲ,ಎರಡಲ್ಲ ಒಂದೂವರೆ ದಶಕದ ನಂತರ ಬೀದಿನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಮುಕ್ತಿ ಸಿಕ್ಕಂತಾಗಿದೆ. ನಗರದಲ್ಲಿ ಅಂದಾಜು 25- 30 ಸಾವಿರಕ್ಕೂ ಅಧಿಕ ಬೀದಿ ನಾಯಿಗಳಿವೆ ಎಂದು ಅಂದಾಜಿಸಲಾಗಿದೆ.

ಈ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಲಾಗದೆ ಬಳ್ಳಾರಿ ಮಹಾನಗರ ಪಾಲಿಕೆ ಕಳೆದ 14- 15 ವರ್ಷಗಳ ಕಾಲ ಕೈಚೆಲ್ಲಿ ಕುಳಿತಿತ್ತು. ಆದರೀಗ, ಬೀದಿನಾಯಿಗಳ ಉಪಟಳವನ್ನು ಸೂಕ್ಷ್ಮವಾಗಿ ಗಮನಿಸಿದ ಪಾಲಿಕೆಯು ಸಂತಾನಹರಣ ಶಸ್ತ್ರಚಿಕಿತ್ಸೆಗೆ ಸದ್ದಿಲ್ಲದೇ ಚಾಲನೆ‌ ನೀಡಿದೆ.

ಈ ಬೀದಿ ನಾಯಿಗಳ‌ ಸಂತಾನಹರಣ ಶಸ್ತ್ರಚಿಕಿತ್ಸೆ ಕೊಡಿಸುವ ಟೆಂಡರ್ ಪ್ರಕ್ರಿಯೆಯಲ್ಲಿ ಭಾರೀ ಹಣದ ಬೇಡಿಕೆ ಇಟ್ಟಿರೋದರಿಂದ ಇಷ್ಟು ದಿನಗಳ ಕಾಲ ಶಸ್ತ್ರಚಿಕಿತ್ಸೆ ಕಾರ್ಯ‌ ನೆನೆಗುದಿಗೆ ಬಿದ್ದಿತ್ತು. ಇದು ಹಾಲಿ‌ ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್ ಅವರ ಗಮನಕ್ಕೆ ಬಂದಿದೆ. ಹೀಗಾಗಿ ಸ್ಥಳೀಯ ಎನ್​ಜಿಓ ಸಂಸ್ಥೆಯನ್ನ ಈ ಟೆಂಡರ್ ಪ್ರಕ್ರಿಯೆಗೆ ಆಹ್ವಾನಿಸಿ ಅದರ ಮುಖೇನ ಈ‌ ಸಂತಾನಹರಣ ಶಸ್ತ್ರಚಿಕಿತ್ಸೆಯ ಜೊತೆಜೊತೆಗೆ ರೇಬಿಸ್ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.

ಬಳ್ಳಾರಿ ಮಹಾನಗರದಲ್ಲಿ ಬರೋಬ್ಬರಿ 30 ಸಾವಿರಕ್ಕೂ ಅಧಿಕ ಬೀದಿನಾಯಿಗಳಿವೆ ಅಂತ ಅಂದಾಜಿಸಲಾಗಿದೆ. 2007ನೇ ಇಸವಿಯಲ್ಲಿ ಈ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿದ್ದು ಬಿಟ್ಟರೆ, ಈವರೆಗೂ ಶಸ್ತ್ರಚಿಕಿತ್ಸೆಯೇ ನಡೆದಿಲ್ಲ. ಅದಕ್ಕೆ ಮಹಾನಗರ ಪಾಲಿಕೆ ಇಚ್ಛಾಶಕ್ತಿ ಕೊರತೆಯೇ ಕಾರಣ ಎನ್ನಲಾಗುತ್ತಿದೆ. ಬೀದಿ ನಾಯಿಗಳಿಗೆ ಸಕಾಲದಲ್ಲಿ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡದಿರೋದರಿಂದಲೇ ಅವುಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ.

2007ರಲ್ಲಿ ಎನ್​​ಜಿಒ ಸಂಸ್ಥೆಯೊಂದು ಈ ಸಂತಾನ ಹರಣ ಶಸ್ತ್ರಚಿಕಿತ್ಸೆಗೆ ಕೈಹಾಕಿದ್ದು ಬಿಟ್ಟರೆ, ಬೇರೆ ಯಾವ ಎನ್​​ಜಿಒ ಸಂಸ್ಥೆಗಳು ಮಹಾನಗರ ಪಾಲಿಕೆಯ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿಲ್ಲ. ಇದನ್ನೇ ನೆಪವಾಗಿಟ್ಟುಕೊಂಡು ಮಹಾನಗರ ಪಾಲಿಕೆ ಬೀದಿ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಮುಂದಾಗಿಲ್ಲ. ಆದರೀಗ Humane world for Animal ಮತ್ತು cawa ಅನ್ನೋ ಎನ್​ಜಿಒ ಗಳು ಈ ಕಾರ್ಯಕ್ಕೆ ಮುಂದಾಗಿವೆ.

ಆದ್ರೆ, ಬಳ್ಳಾರಿ ನಗರದಲ್ಲಿ 25- 30 ಸಾವಿರ ಬೀದಿ ನಾಯಿಗಳಿವೆ. ಮಹಾನಗರ ಪಾಲಿಕೆ ಈಗ ಕೇವಲ 2400 ಬೀದಿನಾಯಿಗಳಿಗೆ ಮಾತ್ರ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಲು ಸೂಚಿಸಿದೆ. ಇದರಿಂದ ಪ್ರಯೋಜನ ಆಗೋದಿಲ್ಲ.‌ ಮಹಾನಗರದಲ್ಲಿರುವ ಎಲ್ಲ ಬೀದಿ ನಾಯಿಗಳಿಗೂ ಚಿಕಿತ್ಸೆ ಮಾಡಬೇಕು ಅಂತಾರೆ ಶ್ವಾನ ಪ್ರೇಮಿ ನಿಖಿತಾ ಅಯ್ಯರ್.

ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್ ಅವರು ಮಾತನಾಡಿ, ಬೀದಿನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಹಾಗೂ ರೇಬಿಸ್‌ ಲಸಿಕಾ ಅಭಿಯಾನ ಚಾಲನೆ ಸಿಕ್ಕಿದೆ.‌ ಪರಿಣಾಮ ನಾಯಿಗಳ ಸಂತತಿ ಕಡಿಮೆ ಆಗಲಿದೆ. ಅಲ್ಲದೇ, ಇವುಗಳಿಂದ ಸಾರ್ವಜನಿಕರಿಗೆ ಆಗುವ ಅನಗತ್ಯ ತೊಂದರೆ ಕಡಿಮೆಗೊಳಿಸದಂತಾಗುತ್ತೆ ಎಂದಿದ್ದಾರೆ.

ಇದನ್ನೂ ಓದಿ: ಹೊರಗಿನಿಂದ ಬಂದವರೆಂದು ಏನೂ ಇಲ್ಲ, ಎಲ್ಲರೂ ನಮ್ಮವರೇ.. ಸಿ ಟಿ ರವಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.