ಹೊಸಪೇಟೆ: ದೇವದಾಸಿ ಮಹಿಳೆಯರಿಂದ ಸಮಾಜ ನೆಮ್ಮದಿಯಿಂದ ಇದೆ. ಒಂದು ವೇಳೆ ದೇವದಾಸಿ ಮಹಿಳೆಯರು ಇಲ್ಲದಿದ್ದರೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದ್ದವು ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಹೇಳಿದರು.
ನಗರದ ಬಲಿಜ ಭವನದಲ್ಲಿ ಸಖಿ ಸಂಸ್ಥೆ ಹಾಗೂ ತಳ ಸಮುದಾಯಗಳ ಅಧ್ಯಯನ ಕೇಂದ್ರ, ರಾಷ್ಟ್ರೀಯ ಕಾನೂನು ಶಾಲೆ, ಭಾರತ ವಿಶ್ವ ವಿದ್ಯಾಲಯ ಬೆಂಗಳೂರು ಮತ್ತು ವಿಮುಕ್ತ ದೇವದಾಸಿ ಮಹಿಳೆಯರು ಮತ್ತು ಮಕ್ಕಳ ವೇದಿಕೆ ಇವರ ಸಂಯುಕ್ತಾಶ್ರದಲ್ಲಿ ಎರಡನೇ ದಿನದ ದೇವದಾಸಿ ಮಹಿಳೆಯರ ಮತ್ತು ಮಕ್ಕಳ ಪ್ರಥಮ ರಾಜ್ಯ ಮಟ್ಟದ ಸ್ವಾಭಿಮಾನ ಸಮಾವೇಶದ ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಮಾತನಾಡಿದರು.
ದೇವದಾಸಿ ಮಹಿಳೆಯರು ಸಮಾಜದಲ್ಲಿ ಇರಲಿಲ್ಲ ಎಂದಿದ್ದರೆ ಅತ್ಯಾಚಾರಗಳು ನಡೆಯುತ್ತಿದ್ದವು. ಅವರ ಮಕ್ಕಳು ಸ್ವಾಭಿಮಾನದಿಂದ ದೇವದಾಸಿ ಮಕ್ಕಳು ಎಂದು ಹೇಳಿಕೊಳ್ಳಬೇಕು. ಅವರಲ್ಲಿ ತಮ್ಮ ತಾಯಿಯ ಹೆಸರನ್ನು ಹೇಳುವುದಕ್ಕೆ ಹಿಂಜೆರಿಯಬಾರದು. ನಮ್ಮ ಹೆತ್ತ ಹೊತ್ತು ಬೆಳೆಸಿರುತ್ತಾಳೆ. ಅಂತಹ ಮಾತೆಯ ಹೆಸರನ್ನು ಧೈರ್ಯದಿಂದ ಹೇಳಿಕೊಳ್ಳಬೇಕು ಎಂದು ಆತ್ಮವಿಶ್ವಾಸ ತುಂಬಿದರು.
ದೇವದಾಸಿ ಮಹಿಳೆಯರು ಸಮಾಜದಲ್ಲಿರುವುದರಿಂದ 100 ಕುಟುಂಬದ ಮಹಿಳೆಯರು ನೆಮ್ಮದಿಯಿಂದ ಸಂಸಾರವನ್ನು ಮಾಡುತ್ತಿದ್ದಾರೆ. ಆ ಮಹಿಳೆಯರು ಮನೆಯಲ್ಲಿ ಸಂತೋಷದಿಂದ ಇದ್ದಾರೆ ಎಂದರೆ ಅದಕ್ಕೆ ದೇವದಾಸಿ ಮಹಿಳೆಯರೆ ಕಾರಣ. ಮಕ್ಕಳು ನಿಮ್ಮ ತಾಯಂದಿರ ಸಹಕಾರದಿಂದ ಇವತ್ತು ಸುಖ ಜೀವನ ನಡೆಸುತ್ತಿದ್ದಿರಿ. ನೀವು ನಿಮ್ಮ ತಂದೆ ಹೆಸರಿಲ್ಲ ಎಂದು ಹಿಂಜರಿಕೆ ಮುಜುಗರ ಪಡುವುದು ಸರಿಯಲ್ಲ. ದೇವದಾಸಿ ಮಹಿಳೆಯರ ಮಕ್ಕಳಿಗೆ ಜನಪದ ಕಲೆಯಲ್ಲಿ ಆಸಕ್ತಿಯನ್ನು ಹೊಂದಿರುವ ಮಕ್ಕಳಿದ್ದರೆ ಕಳಿಹಿಸಿ. ಅವರಿಗೆ ನಾನು ಸಹಕಾರ ನೀಡುತ್ತೇನೆ ಎಂದು ಅಭಯ ನೀಡಿದ್ರು.