ETV Bharat / state

ಅಟಲ್‌ ಬಿಹಾರಿ ವಾಜಪೇಯಿ ಮೃಗಾಲಯಕ್ಕೆ ಶ್ರೀರಾಮುಲು, ಜನಾರ್ದನ್​ ರೆಡ್ಡಿ ಭೇಟಿ

author img

By

Published : Aug 29, 2022, 7:28 AM IST

ಅಟಲ್‍ಬಿಹಾರಿ ವಾಜಪೇಯಿ ಜೂಲಾಜಿಕಲ್ ಪಾರ್ಕ್‍ಗೆ ಸಚಿವ ಬಿ. ಶ್ರೀರಾಮುಲು, ಮಾಜಿ ಸಚಿವ ಜನಾರ್ದನ್​ ರೆಡ್ಡಿ ಹಾಗೂ ಮಾಜಿ ಸಂಸದೆ ಜೆ. ಶಾಂತಾ ಭೇಟಿ ನೀಡಿ ಉದ್ಯಾನ ವೀಕ್ಷಿಸಿದರು.

sriramulu
ವಾಜಪೇಯಿ ಮೃಗಾಲಯಕ್ಕೆ ಶ್ರೀರಾಮುಲು ಭೇಟಿ

ವಿಜಯನಗರ: ಕಮಲಾಪುರ ಸಮೀಪದ ಅಟಲ್‍ಬಿಹಾರಿ ವಾಜಪೇಯಿ ಜೂಲಾಜಿಕಲ್ ಪಾರ್ಕ್‍ಗೆ ನಿನ್ನೆ ಸಂಜೆ ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಅಭಿವೃದ್ಧಿ ಇಲಾಖೆ ಸಚಿವ ಬಿ. ಶ್ರೀರಾಮುಲು ಭೇಟಿ ನೀಡಿ ಉದ್ಯಾನ ವೀಕ್ಷಿಸಿದರು. ಈ ವೇಳೆ, ಮಾಜಿ ಸಚಿವ ಜನಾರ್ದನ್​ ರೆಡ್ಡಿ ಹಾಗೂ ಮಾಜಿ ಸಂಸದೆ ಜೆ. ಶಾಂತಾ ಜೊತೆಗಿದ್ದರು.

ಉದ್ಯಾನಕ್ಕೆ ಭೇಟಿ ನೀಡಿದ ಸಚಿವ ಬಿ ಶ್ರೀರಾಮುಲು ಕೆಫೆ ನಿರ್ಮಾಣ ಕಾಮಗಾರಿ ವೀಕ್ಷಿಸಿ ಉದ್ಯಾನದ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎನ್. ಕಿರಣ್ ಕುಮಾರ್ ಅವರಿಂದ ಮಾಹಿತಿ ಪಡೆದರು. ಇದೇ ವೇಳೆ ಹುಲಿ, ಸಿಂಹ ಸಫಾರಿ ವೀಕ್ಷಿಸಿದರು. ಪ್ರಿಯದರ್ಶಿನಿ ಜಿಂಕೆ ಉದ್ಯಾನ, ಮೃಗಾಲಯಕ್ಕೆ ಭೇಟಿ ನೀಡಿ, ಪ್ರಾಣಿ, ಪಕ್ಷಿಗಳನ್ನು ಕಣ್ತುಂಬಿಕೊಂಡರು.

sriramulu
ವಾಜಪೇಯಿ ಮೃಗಾಲಯಕ್ಕೆ ಶ್ರೀರಾಮುಲು ಭೇಟಿ

ಇದನ್ನೂ ಓದಿ: ಬಳ್ಳಾರಿಯ ಕಿರುಮೃಗಾಲಯದಿಂದ ಪ್ರಾಣಿಗಳ ಸ್ಥಳಾಂತರಕ್ಕೆ ಸ್ಥಳೀಯರಿಂದ ವಿರೋಧ

ಉದ್ಯಾನದ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಮೃಗಾಲಯ ಏಳಿಗೆಗೆ ಬೇಕಾದ ಅಗತ್ಯ ನೆರವು ಕಲ್ಪಿಸಲಾಗುವುದು ಎಂದು ಶ್ರೀರಾಮುಲು ಹೇಳಿದರು. ಬಳಿಕ ಕೊಪ್ಪಳ ತಾಲೂಕಿನ ಗಂಗಾವತಿ ಸಮೀಪದ ಪಂಪಾವನಕ್ಕೆ ತೆರಳಿದರು.

sriramulu
ವಾಜಪೇಯಿ ಮೃಗಾಲಯಕ್ಕೆ ಶ್ರೀರಾಮುಲು ಭೇಟಿ

ಇದನ್ನೂ ಓದಿ: ಮೃಗಾಲಯದಲ್ಲಿ ಸಂದರ್ಶಕರಿಗೆ ಮಗು ತೋರಿಸಿದ ಗೊರಿಲ್ಲಾ.. ವಿಡಿಯೋ ವೈರಲ್

ಈ ಕುರಿತು ಟ್ವೀಟ್​ ಮಾಡಿರುವ ಶ್ರೀರಾಮುಲು, 'ನನಗೆ ಮೊದಲಿನಿಂದಲೂ ಪ್ರಾಣಿ, ಪಕ್ಷಿಗಳನ್ನು ಕಂಡರೆ ತುಂಬಾ ಅಚ್ಚುಮೆಚ್ಚು. ಬಿಡುವಿನ ವೇಳೆಯಲ್ಲಿ ಮೃಗಾಲಯಕ್ಕೆ ಭೇಟಿ ಕೊಟ್ಟು ಅವುಗಳನ್ನು ನೋಡುವುದೆಂದರೆ ಎಲ್ಲಿಲ್ಲದ ಖುಷಿ. ಪ್ರಕೃತಿಯಲ್ಲಿ ದೇವರನ್ನು ಕಾಣಬೇಕು, ಪ್ರಾಣಿ, ಪಕ್ಷಿಗಳಿಗೆ ದಯೆ ತೋರಬೇಕು ಎಂದು ನಮ್ಮ ಪೂರ್ವಜರು ಹೇಳಿರುವುದರಲ್ಲಿ ಸಾಕಷ್ಟು ಅರ್ಥವಿದೆ' ಎಂದಿದ್ದಾರೆ.

ಇದನ್ನೂ ಓದಿ: ಸಿದ್ಧರಾಮಯ್ಯ ಮುಂದಿನ ದಿನಗಳಲ್ಲಿ ಬಿದ್ದರಾಮಯ್ಯ ಆಗ್ತಾರೆ: ಶ್ರೀರಾಮುಲು ವ್ಯಂಗ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.