ETV Bharat / state

'ಬೆಂಗಳೂರಿಗೆ ಬಂದು ಕ್ರಾಂತಿ ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ' - Jayamritunjaya Swamiji

ಪಾದಯಾತ್ರೆ ಪ್ರಾರಂಭವಾಗಿ 9 ದಿನಗಳಾಗಿವೆ. ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಭರವಸೆ ಮೂಡಿಸುವ ಲಕ್ಷಣಗಳು ಕಾಣುತ್ತಿಲ್ಲ ಎಂದು ಶ್ರೀಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

sri-jayamritunjaya-swamiji
ಜಯಮೃತ್ಯುಂಜಯ ಸ್ವಾಮೀಜಿ
author img

By

Published : Jan 22, 2021, 4:08 PM IST

ಹೊಸಪೇಟೆ: ಇಷ್ಟು ದಿನ ಶಾಂತಿ, ಸಹನೆಯಿಂದ ಮನವಿ ಸಲ್ಲಿಸಲಾಗಿದೆ. ಇನ್ನಾದರೂ ಸರ್ಕಾರ ಮೀಸಲಾತಿ ನೀಡಬೇಕು. ಇಲ್ಲದಿದ್ದರೆ ಬೆಂಗಳೂರಿಗೆ ಬಂದು ಕ್ರಾಂತಿ ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠಾಧ್ಯಕ್ಷ ಶ್ರೀಬಸವ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಸಿದ್ದಾರೆ.

ಶ್ರೀಬಸವ ಜಯಮೃತ್ಯುಂಜಯ ಸ್ವಾಮೀಜಿ

ತಾಲೂಕಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ತಿಂಗಳಲ್ಲಿ‌ ಮೀಸಲಾತಿ ನೀಡಲಾಗುವುದು ಎಂದು ಸಮಾಜಕ್ಕೆ ಮಾತು ನೀಡಲಾಗಿತ್ತು. ಅದನ್ನೇ ನಂಬಿರುವ ಸಮುದಾಯ ಮೀಸಲಾತಿಗಾಗಿ ಕಾಯುತ್ತಿದೆ. ಈಗ ವರದಿ ಕೇಳುತ್ತಿದೆ. ವರದಿ ತರಿಸಿಕೊಳ್ಳುವುದು ಸರ್ಕಾರದ ಜವಾಬ್ದಾರಿ ಎಂದರು.

ಓದಿ: ನಾಲ್ವರು ಅಸಮಾಧಾನಿತ ಸಚಿವರಿಗೆ ಖಾತೆಗಳ ಮರು ಹಂಚಿಕೆ: ರಾಜ್ಯಪಾಲರ ಅಂಕಿತ

ಕ್ಯಾಬಿನೆಟ್​ಗೆ ಪರಮಾಧಿಕಾರವಿದೆ. ಮೀಸಲಾತಿಯನ್ನು ನೀಡಬಹುದು. ಹಾಗಾಗಿ ‌ಮುಖ್ಯಮಂತ್ರಿಗಳು ವರದಿ ಪಡೆದುಕೊಂಡು, ಪಂಚಮಸಾಲಿ‌ ಸಮುದಾಯಕ್ಕೆ 2ಎ ಮೀಸಲಾತಿಯನ್ನು ಘೋಷಿಸಬೇಕು. ಪಾದಯಾತ್ರೆ ಪ್ರಾರಂಭವಾಗಿ 9 ದಿನಗಳಾಗಿವೆ. ಆದರೆ ಯಾವುದೇ ಪ್ರಕ್ರಿಯೆ ಬಂದಿಲ್ಲ. ಭರವಸೆ ಮೂಡಿಸುವ ಲಕ್ಷಣಗಳು ಕಾಣುತ್ತಿಲ್ಲ. ಅನೇಕ ನಾಯಕರು ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಪ್ರಯತ್ನಕ್ಕೆ ರಾಜ್ಯ ಸರ್ಕಾರ ಪೂರಕವಾಗಿ ಸ್ಪಂದಿಸುತ್ತಿಲ್ಲ. ಆದರೂ‌ ನಾವು ಗಟ್ಟಿ ನಿರ್ಧಾರವನ್ನು ತೆಗೆದುಕೊಂಡು ಹೆಜ್ಜೆ ಇಡುತ್ತಿದ್ದೇವೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.