ETV Bharat / state

ಆನಂದ್‌ ಸಿಂಗ್-ರಾಮುಲು ಐಷಾರಾಮಿ ಮನೆ ನಿರ್ಮಾಣಕ್ಕೆ ಹಿರೇಮಠ ಗರಂ

author img

By

Published : Dec 6, 2020, 2:48 PM IST

Updated : Dec 6, 2020, 4:10 PM IST

ರಾಜ್ಯ ಬಿಜೆಪಿ ಸರ್ಕಾರದಲ್ಲಿ ಅರಣ್ಯ ಸಚಿವ ಆನಂದ್‌ ಸಿಂಗ್ ಹಾಗೂ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಭಾರಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖಂಡ ಎಸ್.ಆರ್.ಹಿರೇಮಠ ಆರೋಪಿಸಿದ್ದಾರೆ.

sriramulu
ಎಸ್.ಆರ್.ಹಿರೇಮಠ ಗರಂ

ಬಳ್ಳಾರಿ: ಅರಣ್ಯ ಸಚಿವ ಆನಂದ್‌ ಸಿಂಗ್ ಹಾಗೂ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಐಷಾರಾಮಿ ಮನೆಗಳನ್ನು ನಿರ್ಮಿಸಿಕೊ‌ಂಡಿರೋದಕ್ಕೆ ಸಮಾಜ ಪರಿವರ್ತನಾ ಸಮುದಾಯದ ಹಿರಿಯ ಮುಖಂಡ ಎಸ್.ಆರ್.ಹಿರೇಮಠ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆನಂದ್‌ ಸಿಂಗ್ ಹಾಗೂ ಸಚಿವ ಬಿ.ಶ್ರೀರಾಮುಲು ಐಷಾರಾಮಿ ಮನೆಗಳನ್ನು ನಿರ್ಮಿಸಿಕೊ‌ಂಡಿರೋದಕ್ಕೆ ಎಸ್.ಆರ್.ಹಿರೇಮಠ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಳ್ಳಾರಿಯ ಪತ್ರಿಕಾ ಭವನದಲ್ಲಿಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಇವರೇನು ಬೆವರು ಸುರಿಸಿ ದುಡಿದು ಇಂಥ ಐಷಾರಾಮಿ ಮನೆಗಳನ್ನು ಕಟ್ಟಿದ್ದಾರೋ?, ಅಥವಾ ಪಿತ್ರಾರ್ಜಿತ ಆಸ್ತಿಯಿಂದ ಕೋಟ್ಯಂತರ ರೂ.ಗಳ ಬೆಲೆಬಾಳುವ ಮನೆಗಳನ್ನು ಹೊಂದಿದ್ದಾರೆಯೇ ಎಂಬುದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು ಎಂದು ತಾಕೀತು ಮಾಡಿದ್ದಾರೆ.

ರಾಜ್ಯ ಬಿಜೆಪಿ ಸರ್ಕಾರದಲ್ಲಿ ಈ ಇಬ್ಬರು ಸಚಿವರು ಭಾರಿ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿರೋದು ಈಗ ಜಗಜ್ಜಾಹೀರಾಗಿದೆ. ಈ ಕೂಡಲೇ ಇಬ್ಬರನ್ನೂ ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂದು ಹಿರೇಮಠ ಆಗ್ರಹಿಸಿದ್ದಾರೆ.

ಓದಿ: ಬಿಜೆಪಿ ಮುಖ್ಯ ಕಚೇರಿಗೆ ಭೇಟಿ ನೀಡಿದ ಅರುಣ್ ಸಿಂಗ್‌ಗೆ ಅದ್ದೂರಿ ಸ್ವಾಗತ

ಬಳ್ಳಾರಿಯಲ್ಲಿ ಎನ್​​ಎಂಡಿಸಿ ಕಂಪನಿಯಿಂದ ಗಣಿಗಾರಿಕೆ ಪುನರಾರಂಭವಾಗಿದೆ. ಹೊಸ ಒಪ್ಪಂದದಿಂದ ರಾಜ್ಯದ ಬೊಕ್ಕಸಕ್ಕೆ ನಷ್ಟವಾಗಲಿದೆ‌. ಶೇ.80ರಷ್ಟು ಪ್ರೀಮಿಯಂ ಹಣ ಖೋತಾ ಆಗಿದೆ. ರಾಜ್ಯದ ಬೊಕ್ಕಸಕ್ಕೆ ನಷ್ಟ ಮಾಡಿಕೊಂಡು ಪರವಾನಿಗಿ ಕೊಡೋ ಅಗತ್ಯ ಏನಿತ್ತು? ಎಂದು ಎಸ್.ಆರ್.ಹಿರೇಮಠ ಸರ್ಕಾರವನ್ನು ಪ್ರಶ್ನಿಸಿದರು.

'ಭಾರತ ಬಂದ್​​ಗೆ ಸಂಪೂರ್ಣ ಬೆಂಬಲ'

ಡಿಸೆಂಬರ್ 8 ರಂದು ನಡೆಯಲಿರುವ ಭಾರತ ಬಂದ್​ಗೆ ಸಮಾಜ ಪರಿವರ್ತನಾ ಸಮುದಾಯದ ಸಂಪೂರ್ಣ ಬೆಂಬಲ ಇದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕಾಯ್ದೆ ವಿರುದ್ಧ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನು ನಾನು ಬೆಂಬಲಿಸುತ್ತೇನೆ. ಕೇಂದ್ರ ಸರ್ಕಾರದ ನಡೆಯನ್ನು ಇಡೀ ದೇಶವೇ ನೋಡುತ್ತಿದೆ. ದೆಹಲಿಯಲ್ಲಿ ಕೇಂದ್ರ ಸರ್ಕಾರಕ್ಕೆ ನಮ್ಮ ರೈತರು ಸಮರ್ಥ ಉತ್ತರ ಕೊಟ್ಟಿದ್ದಾರೆ. ಈ ಹೋರಾಟ ಐತಿಹಾಸಿಕವಾಗಿದೆ ಎಂದು ಅವರು ಹೇಳಿದರು.

ರೈತರ ಹೋರಾಟವನ್ನು ಅವಮಾನಿಸುವುದು ಸರಿಯಲ್ಲ. ಕೇಂದ್ರ ಸರ್ಕಾರ ರೈತ ಮತ್ತು ಕಾರ್ಮಿಕ ವಿರೋಧಿಯಾಗಿದೆ. ಅವತ್ತು ಇಂದಿರಾ ಗಾಂಧಿಯವರಿಗೆ ಕಲಿಸಿದ ಪಾಠವನ್ನೇ ಜನ ನಿಮಗೂ ಪಾಠ ಕಲಿಸುತ್ತಾರೆ. ಈ ದೇಶದ ನಿಜವಾದ ಮಾಲೀಕರು ಈಗ ಎಚ್ಚೆತ್ತಿದ್ದಾರೆ. ರೈತರು ಜಾಗೃತಿಯ ಗಂಟೆ ಬಾರಿಸಿದ್ದಾರೆ. ಈಗಲಾದರೂ ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳಲಿ ಎಂದು ಅವರು ಕಿಡಿ ಕಾರಿದರು.

Last Updated : Dec 6, 2020, 4:10 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.