ETV Bharat / state

ಖಡ್ಗ ತಗೊಂಡ್‌ ನಾಲಿಗೆ ಸೀಳಿ ಹಾಕ್ಬಿಡ್ತೀನಿ.. ಜಮೀರ್‌ಗೆ ಸೋಮಶೇಖರ್ ರೆಡ್ಡಿ ಬೆದರಿಕೆ!! - ಸೋಮಶೇಖರ್​ ರೆಡ್ಡಿ ಲೇಟೆಸ್ಟ್ ನ್ಯೂಸ್

ಈ ಸಹೋದರರನ್ನ ಎದುರಾಕಿಕೊಂಡರೆ ಏನಾಗುತ್ತೆ ಅಂತಾ ಮುಂದಿನ ದಿನಗಳಲ್ಲಿ ತೋರಿಸಿಕೊಡುವೆ ಎಂದು ಶಾಸಕ ಸೋಮಶೇಖರ ರೆಡ್ಡಿ ಜಮೀರ್​ ಅಹಮ್ಮದ್​ಗೆ ಎಚ್ಚರಿಕೆ ನೀಡಿದ್ದಾರೆ.

somashekar reddy challenges zameer ahmedಜಮೀರ್​ಗೆ ಸೋಮಶೇಖರ ರೆಡ್ಡಿ ಸವಾಲು
ಸೋಮಶೇಖರ ರೆಡ್ಡಿ
author img

By

Published : Jan 13, 2020, 6:48 PM IST

ಬಳ್ಳಾರಿ: ಚಾಮರಾಜಪೇಟೆ ಶಾಸಕ ಜಮೀರ್ ಅಹಮ್ಮದ್ ಖಾನ್ ಅವರಿಗೆ ಹುಚ್ಚು ನಾಯಿ‌ ಕಡಿದಿರಬೇಕು. ಅದಕ್ಕೆ ಇಲ್ಲಿಗೆ ಬಂದು ಹುಚ್ಚು ಬಿಡಿಸಿಕೊಂಡು ಹೋಗಿದ್ದಾನೆ ಅಂತಾ ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಏಕ ವಚನದಲ್ಲಿ ಶಾಸಕ ಜಮೀರ್‌ ಅಹ್ಮದ್‌ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಬಳ್ಳಾರಿಯ ಹವಂಬಾವಿ ಪ್ರದೇಶ ವ್ಯಾಪ್ತಿಯಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಅವನಿಗೆ ಹುಚ್ಚು ನಾಯಿ ಕಡಿದಿರಬೇಕು. ಅದಕ್ಕೆ ಇಲ್ಲಿಗೆ ಬಂದು‌ ಹುಚ್ಚು ಬಿಡಿಸಿಕೊಂಡು ಹೋಗಿದ್ದಾನೆ. ಅವನಿಗೆ ಗೊತ್ತಿಲ್ಲ, ಈ ಸಹೋದರರನ್ನ ಎದುರಾಕಿಕೊಂಡರೆ ಏನಾಗುತ್ತೆ ಅಂತಾ.. ಅದನ್ನ ಮುಂದಿನ ದಿನಗಳಲ್ಲಿ ತೋರಿಸಿಕೊಡುವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಖಡ್ಗ ತಗೊಂಡ್‌ ನಾಲಿಗೆ ಸೀಳಿ ಹಾಕ್ಬಿಡ್ತೀನಿ.. ಶಾಸಕ ಜಮೀರ್‌ಗೆ ಸೋಮಶೇಖರ್ ರೆಡ್ಡಿ ಬೆದರಿಕೆ!!

ನಮ್ಮ ದೇಶದ ಆಸ್ತಿ-ಪಾಸ್ತಿಗಳು ಎಷ್ಟು ನಾಶವಾಗಿವೆ ಎನ್ನುವುದು ಅವನಿಗೆ ಗೊತ್ತು. ನಾನೇನಾದ್ರೂ ಜಮೀರ್ ಬಗ್ಗೆ ಅಥವಾ ಮುಸ್ಲಿಂ ಧರ್ಮೀಯರ ಬಗ್ಗೆ ಮಾತನಾಡಿದ್ದೇನಾ? ಹಾಗೇನಾದ್ರೂ ಮಾತಾಡಿದ್ರೆ ನೀನು ಇಲ್ಲಿಗೆ ಬಂದು ಪ್ರತಿಭಟನೆ ನಡೆಸುವುದರಲ್ಲಿ‌‌ ಅರ್ಥ ಇರುತ್ತೆ ಎಂದು ವಾಗ್ದಾಳಿ‌ ನಡೆಸಿದ್ರು.

ಮಾಜಿ ಪ್ರಧಾನಿ ಹೆಚ್​ಡಿಡಿ ಹಾಗೂ ಮಾಜಿ ಸಿಎಂ ಹೆಚ್​ಡಿಕೆ ಕುಟುಂಬಸ್ಥರು ನಿನ್ನನ್ನ ಮಗನಂತೆ ನೋಡಿಕೊಂಡಿದ್ದರು. ಅವರನ್ನೇ ನೀನು ತ್ಯಜಿಸಿ ಬಂದಿದ್ದೀಯ.‌ ಯಾರು ಬಿಸ್ಕೇಟ್​ ಹಾಕ್ತಾರೆ ಅವರತ್ತ ತೆರಳುತ್ತೀಯ ನೀನು.. ಅಂತಹ ವ್ಯಕ್ತಿತ್ವ ಹೊಂದಿರುವ ನೀನು‌ ನನ್ನ ಬಗ್ಗೆ ಹಗುರವಾಗಿ ಮಾತನಾಡುತ್ತೀಯಾ ಎಂದು ಕಿಡಿಕಾರಿದ್ದಾರೆ.

ಹತ್ತು ದಿನಗಳ ಕಾಲ ಗಡುವು ನೀಡಿರುವ ಜಮೀರ್​ಗೆ, ಈ ದೇಶ ನಿಮ್ಮಪ್ಪನ ಆಸ್ತಿನಾ? ಕಾಂಗ್ರೆಸ್ ಪಕ್ಷವನ್ನ ಗುತ್ತಿಗೆ ಪಡೆದಿದ್ದೀಯಾ? ಕಾಂಗ್ರೆಸ್​ನ ಸಿಎಲ್​ಪಿ ನಾಯಕ ಸಿದ್ದರಾಮಯ್ಯ ಒಳ್ಳೆಯ ನಾಯಕರು, ಅವರೊಂದಿಗೆ ನಾನು ಮಾತನಾಡುವೆ ಎಂದಿದ್ದಾರೆ. ಖಡ್ಗ ಖಡ್ಗ ಅಂತಾ ಹೇಳ್ತೀಯಾ, ಖಡ್ಗ್‌ ತಗೊಂಡ್‌ ನಿನ್‌ ನಾಲಿಗೆ ಸೀಳಿ ಹಾಕ್ತೀನಿ ಅಂತಾ ಕೊನೆಗೆ ಬೆದರಿಕೆ ಹಾಕಿದ್ದಾರೆ ಜಿ. ಸೋಮಶೇಖರ್‌ ರೆಡ್ಡಿ.

Intro:ಶಾಸಕ ಜಮೀರ್ ಗೆ ಹುಚ್‌ ನಾಯಿ ಕಡಿದೀರ್ ಬೇಕು: ಶಾಸಕ ಸೋಮಶೇಖರರೆಡ್ಡಿ ವಾಗ್ದಾಳಿ
ಬಳ್ಳಾರಿ: ಚಾಮರಾಜಪೇಟೆ ಶಾಸಕ ಜಮೀರ್ ಅಹಮ್ಮದ್ ಖಾನ್ ಅವರಿಗೆ ಹುಚ್ ನಾಯಿ‌ ಕಡಿದೀರ್ ಬೇಕು. ಆಗಾಗಿ, ಇಲ್ಲಿಗೆ ಬಂದು ಹುಚ್ ಬಿಡಿಸಿಕೊಂಡು ಹೋಗಿದ್ದಾನೆಂದು ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರರೆಡ್ಡಿಯವ್ರು ವಾಗ್ದಾಳಿ ನಡೆಸಿದ್ದಾರೆ.
ಬಳ್ಳಾರಿಯ ಹವಂಬಾವಿ ಪ್ರದೇಶ ವ್ಯಾಪ್ತಿಯಲ್ಲಿರೊ ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಅವರು ಮಾತಾಡಿ, ಬೆಂಗಳೂರಿನಲ್ಲಿ ಅವನಿಗೆ ಹುಚ್ ನಾಯಿ ಕಡೀದಿರ್ ಬೇಕು. ಅದ್ಕೆ ಇಲ್ಲಿಗೆ ಬಂದು‌ ಹುಚ್ ಬಿಡಿಸಿಕೊಂಡು ಹೋಗಿದ್ದಾನೆ.
ಅವನಿಗೆ ಗೊತ್ತಿಲ್ಲ. ಈ ಸಹೋದರರನ್ನ ತಡಿವಿಕೊಂಡ್ರೆ ಏನಾಗುತ್ತೆ ಅಂತ. ಅದನ್ನ ಮುಂದಿನ ದಿನಮಾನಗಳಲ್ಲಿ ತೋರಿಸಿಕೊಡುವೆ ಎಂದು ಎಚ್ಚರಿಕೆ ನೀಡಿದ್ದಾರೆ ಶಾಸಕ
ರೆಡ್ಡಿ.
ನಮ್ಮ ದೇಶದ ಆಸ್ತಿ- ಪಾಸ್ತಿಗಳು ಎಷ್ಟು ನಾಶವಾಗಿವೆ ಎಂಬೋದು ಅವನಿಗೆ ಗೊತ್ತು. ನಾನೇನಾದ್ರೂ ನಿನ್ನ ಬಗ್ಗೆಯಾಗಲಿ ಅಥವಾ ಮುಸ್ಲಿಂಧರ್ಮೀಯರ ಬಗ್ಗೆ ಮಾತನಾಡಿರುವೆಯಾ. ಹಾಗೇನಾದ್ರೂ ಮಾತಾಡಿದ್ರೆ
ನೀನು ಇಲ್ಲಿಗೆ ಬಂದು ಪ್ರತಿಭಟನೆ ನಡೆಸೋದರಲ್ಲಿ‌‌
ಒಂದರ್ಥ ಇರುತ್ತೆ ಎಂದು ವಾಗ್ದಾಳಿ‌ ನಡೆಸಿದ್ರು.

Body:ಮಾಜಿ ಪ್ರಧಾನಿ ಹೆಚ್.ಡಿಡಿ ಹಾಗೂ ಮಾಜಿ ಸಿಎಂ ಹೆಚ್
ಡಿಕೆ ಕುಟುಂಬಸ್ಥರು ನಿನ್ನನ್ನ ಮಗನಂತೆ ನೋಡಿಕೊಂಡಿದ್ದರು. ಅವರನ್ನೇ ನೀನು ತ್ಯಜಿಸಿ ಬಂದಿಯಾ.‌ ಯಾರು ಬಿಸ್ಕಟ್ ಹಾಕ್ತಾರೆ ಅವರತ್ತ ತೆರಳುತ್ತೀಯಾ‌ ನೀನು. ಅಂತಹ ವ್ಯಕ್ತಿತ್ವ ಹೊಂದಿರುವ ನೀನು‌ ನನ್ನ ಬಗ್ಗೆ ಹಗುರವಾಗಿ ಮಾತನಾಡು ತ್ತೀಯಾ ಎಂದು ಛೇಡಿಸಿದ್ದಾರೆ.
ಹತ್ತು ದಿನಗಳಕಾಲದ ಗಡುವು ನೀಡಿದ ಜಮ್ಮೀರ್ ಗೆ ಈ ದೇಶ ನಿಮ್ಮಪ್ಪನ ಆಸ್ತಿನಾ. ಕಾಂಗ್ರೆಸ್ ಪಕ್ಷವನ್ನ ಗುತ್ತಿಗೆ ಪಡೆದ್ದೀಯಾ.‌ ಕಾಂಗ್ರೆಸ್ ನ ಸಿಎಲ್ ಪಿ ನಾಯಕ ಸಿದ್ಧರಾಮಯ್ಯ ಒಳ್ಳೆಯ ನಾಯಕರು. ಅವರೊಂದಿಗೆ ನಾನು ಮಾತನಾಡುವೆ. ಜಮ್ಮೀರ್ ನಿನಗೇನಾದ್ರೂ ತಾಕತ್ತಿದ್ದರೆ ಒಬ್ಬನೇ ಬಾ. ನಾ ಕೂಡ ಒಬ್ಬನೇ ಬರುವೆ. ಬಳ್ಳಾರಿಯ ಮುನ್ಸಿಪಲ್ ಮೈದಾನದಲ್ಲಿ ಕುಸ್ತಿ ಆಡೋಣ ಎಂದು ಸವಾಲೆಸಿದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_4_MLA_REDY_BYTE_VSL_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.