ETV Bharat / state

'ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಸಾಲ ಸೌಲಭ್ಯ ಪಡೆಯುವವರಿಗೆ ಶಿಕ್ಷೆ ವಿಧಿಸಿ' - bellary district news

ಎಂ. ಸಿ. ಲೋಕಪ್ಪ ಎಂಬುವವರು ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಲಕ್ಷಗಟ್ಟಲೇ ಸಾಲ ಸೌಲಭ್ಯ ಪಡೆಯುತ್ತಿರುವುದಾಗಿ ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನೆ ಸದಸ್ಯ ಸೋಮಪ್ಪ ಚಲವಾದಿ, ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.

somappa-chalavadi-request-take-action-on-mc-lokappa
ದಲಿತ ಸಂಘರ್ಷ ಸಮಿತಿ
author img

By

Published : Jul 4, 2020, 9:33 PM IST

ಬಳ್ಳಾರಿ : ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಅಲೆಮಾರಿ ಅಭಿವೃದ್ಧಿ ಕೋಶದಿಂದ ಲಕ್ಷಗಟ್ಟಲೇ ಸಾಲ ಸೌಲಭ್ಯ ಪಡೆಯುತ್ತಿರುವ ಎಂ.ಸಿ. ಲೋಕಪ್ಪ ಅವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನೆ ಸದಸ್ಯ ಸೋಮಪ್ಪ ಚಲವಾದಿ ದೂರಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿ, ಎಂ.ಸಿ. ಲೋಕಪ್ಪ ತಂದೆ ಆರ್.ಎಂ. ಚಂದ್ರಪ್ಪ ಅವರಿಗೆ ಅಲೆಮಾರಿ ಅಭಿವೃದ್ಧಿ ಕೋಶದಿಂದ ಮಂಜೂರಾಗುವ ಸಾಲ ಸೌಲಭ್ಯವನ್ನು ರದ್ದುಗೊಳಿಸಿ ನಿಜವಾದ ಪರಿಶಿಷ್ಟ ಜಾತಿ (ಎಸ್.ಸಿ)ಯವರಿಗೆ ನ್ಯಾಯ ಕಲ್ಪಿಸಿಕೊಡಬೇಕು. ಸುಳ್ಳು ಜಾತಿ ಪ್ರಮಾಣ ನೀಡಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಸಾಲ ಸೌಲಭ್ಯ ಪಡೆಯುವವರಿಗೆ ಶಿಕ್ಷೆ ನೀಡಿ

ಎಂ.ಸಿ. ಲೋಕಪ್ಪ ಅವರು ಚಿನ್ನದಾಸ ಎಂಬ ಜಾತಿಗೆ ಸೇರಿರುವುದಿಲ್ಲ. ಇವರು ಹಿಂದುಳಿದ ವರ್ಗಗಳ ಪ್ರವರ್ಗ-1 ದೊಂಬಿದಾಸ ಜನಾಂಗಕ್ಕೆ ಸೇರಿದವರಾಗಿದ್ದು, ಸರ್ಕಾರಕ್ಕೆ ಮೋಸ ಮಾಡಿ, ಸುಳ್ಳು ಜಾತಿ ಪ್ರಮಾಣ ಪತ್ರವನ್ನು ಪಡೆದುಕೊಂಡಿದ್ದಾರೆ ಎಂದು ಸೋಮಪ್ಪ ಚಲವಾದಿ ಆರೋಪಿಸಿದರು.

ಲೋಕಪ್ಪ ಅವರು ದಾವಣಗೆರೆ ಜಿಲ್ಲೆಯ ಜಗಳೂರಿನಿಂದ ಮತ್ತು ಬಳ್ಳಾರಿ ತಾಲೂಕಿನ ತಹಶಿಲ್ದಾರರಿಂದ ಜಾತಿ ಪ್ರಮಾಣ ಪತ್ರ ಮತ್ತು ಇನ್ನಿತರ ದಾಖಲೆಗಳನ್ನು ಪಡೆದುಕೊಂಡು ಸರ್ಕಾರಕ್ಕೆ ವಂಚನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.