ETV Bharat / state

ಬಳ್ಳಾರಿ; ಅವೈಜ್ಞಾನಿಕ ರಾಜಕಾಲುವೆಗಳಿಂದ ಸ್ಲಂ ಬೋರ್ಡ್-ಆಶ್ರಯ ಮನೆಗಳಿಗೆ ಟ್ರಬಲ್! - Water rushing to homes in Ballary

ರಾಜಕಾಲುವೆಗಳನ್ನು ಸರಿಯಾಗಿ ನಿರ್ಮಿಸದ ಪರಿಣಾಮ ಮಳೆ ಬಂದಾಗ ಹರಿಯುವ ನೀರೆಲ್ಲಾ‌ ಮನೆಗಳಿಗೆ ನುಗ್ಗುತ್ತದೆ.‌ ಹೀಗಾಗಿ, ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಕೊಳಗೇರಿ ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

slum-peoples-facing-problems-in-ballary
ಸ್ಲಂ-ಬೋರ್ಡ್-ಆಶ್ರಯ ಮನೆಗಳಿಗೆ ಟ್ರಬಲ್
author img

By

Published : Nov 6, 2020, 10:44 PM IST

ಬಳ್ಳಾರಿ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ರಾಜಕಾಲುವೆಗಳನ್ನು‌ ಅವೈಜ್ಞಾನಿಕವಾಗಿ ನಿರ್ಮಿಸಿರುವ ಕಾರಣ ಬಹುತೇಕ ಆಶ್ರಯ ಮನೆಗಳು ಮತ್ತು ಕೊಳಗೇರಿ ನಿವಾಸಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ. ಹೀಗಾಗಿ, ಅಲ್ಲಿನ ನಿವಾಸಿಗಳು ಪಾಲಿಕೆ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.

ಪಾಲಿಕೆಯ ಬಹುತೇಕ ವಾರ್ಡ್​​​ಗಳಲ್ಲಿ ಸ್ಲಂ ಬೋರ್ಡ್ ಹಾಗೂ ಮಹಾನಗರ ಪಾಲಿಕೆಯಿಂದ ಆಶ್ರಯ ಮನೆಗಳನ್ನು ನಿರ್ಮಿಸಿಕೊಡಲಾಗಿದೆ. ಆದರೆ, ಅವುಗಳ ನಿರ್ವಹಣೆಯೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದಲ್ಲದೆ, ರಾಜಕಾಲುವೆಗಳನ್ನು ಸರಿಯಾಗಿ ನಿರ್ಮಿಸದ ಪರಿಣಾಮ ಮಳೆ ಬಂದಾಗ ಹರಿಯುವ ನೀರೆಲ್ಲಾ‌ ಮನೆಗಳಿಗೆ ನುಗ್ಗುತ್ತದೆ.‌ ಆದ್ದರಿಂದ ಆ ಮನೆಗಳಲ್ಲಿ ವಾಸಿಸುವ ಬಡ-ಕೂಲಿಕಾರ್ಮಿಕರ ಪಾಡು ಹೇಳತೀರದ್ದಾಗಿದೆ.

ಸ್ಲಂ-ಬೋರ್ಡ್-ಆಶ್ರಯ ಮನೆಗಳಿಗೆ ಟ್ರಬಲ್

ಮನೆಗಳ ನಿರ್ವಹಣೆಗೆ ಸಮರ್ಪಕ ಅನುದಾನ ಬಿಡುಗಡೆ ಮಾಡುತ್ತಿದ್ದರೂ ಇದ್ದದ್ದರಲ್ಲೇ ಪರವಾಗಿಲ್ಲ ಎಂಬಂತಿವೆ. ಆದರೆ, ಈ ಕೊಳಗೇರಿ ಮಂಡಳಿ ನಿರ್ಮಿಸಿರುವ ಮನೆಗಳು ತೀರಾ ಅಧ್ವಾನಗೊಂಡಿವೆ. ಕೆಲವೊಂದು ಮನೆಗಳ ಮೇಲ್ಛಾವಣಿಗಳು ಕಿತ್ತುಹೋಗಿದ್ದು, ಮಳೆ ಬಂದರೆ ಸೋರುತ್ತವೆ.

ಈ ಸಂಬಂಧ ಈಟಿವಿ ಭಾರತದೊಂದಿಗೆ ಮಾತನಾಡಿದ ಮಹಾನಗರ ಪಾಲಿಕೆ ಮಾಜಿ ಸದಸ್ಯೆ ಪರ್ವೀನ್ ಬಾನು, ಸ್ಲಂ-ಬೋರ್ಡಿನಿಂದ ನಿರ್ಮಿಸಿಕೊಡಲಾಗಿದ್ದ 300ಕ್ಕೂ ಅಧಿಕ‌ ಮನೆಗಳ ಮೇಲ್ಛಾವಣಿ ಕುಸಿದಿವೆ. ಒಳಚರಂಡಿ ನೀರು ಮನೆಗಳಿಗೆ ನುಗ್ಗುತ್ತಿದ್ದು, ಪಾಲಿಕೆ ಹಾಗೂ ಜಿಲ್ಲಾಡಳಿತ ಕೂಡಲೇ ಎಚ್ಚೆತ್ತುಕೊಳ್ಳಬೇಕಿದೆ ಎಂದು ಒತ್ತಾಯಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.