ಹೊಸಪೇಟೆ (ವಿಜಯನಗರ): ಎಂಎಸ್ಪಿಎಲ್ ಪ್ಲಾಂಟ್ನಲ್ಲಿ 85 ಸಾವಿರ ರೂಪಾಯಿ ಮೌಲ್ಯದ ಕಬ್ಬಿಣ ರಾಡುಗಳನ್ನು ಕಳ್ಳತನ ಮಾಡಿದ್ದ ಆರು ಜನ ಆರೋಪಿಗಳನ್ನು ಶುಕ್ರವಾರ ಸಂಜೆ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೊಸಪೇಟೆ ತಾಲೂಕಿನ ಹನುಮನಹಳ್ಳಿಯ ಅಂಜಿನಪ್ಪ, ಸಿದ್ದಲಿಂಗ, ಮಂಜುನಾಥ, ದುರುಗಪ್ಪ, ಕವಿರಾಜ ಅಡವಿ ಸ್ವಾಮಿ ಬಂಧಿತರಾಗಿದ್ದಾರೆ. ಶುಕ್ರವಾರ ಬೆಳಗ್ಗೆ 10 ಗಂಟೆಗೆ ಹನುಮಂತಪ್ಪ ಪೂಜಾರಿ ಅವರು 18 ಕಬ್ಬಿಣ ರಾಡುಗಳು ಕಳ್ಳತನವಾಗಿದೆ ಎಂದು ದೂರು ನೀಡಿದ್ದರು.
![six iron rod theft accused arrested in vijayagar](https://etvbharatimages.akamaized.net/etvbharat/prod-images/kn-hpt-02-mariyammanahalli-6-peoples-arrested-vslka10031_02072021213934_0207f_1625242174_443.jpg)
ಈ ಹಿನ್ನೆಲೆಯಲ್ಲಿ ಪಿಐಎಸ್ ಹನುಮಂತಪ್ಪ ತಳವಾರ ನೇತೃತ್ವದಲ್ಲಿ ದಂಡವನ್ನು ರಚಿಸಲಾಗಿತ್ತು. ಸಂಜೆ ವೇಳೆಗೆ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿತರಿಂದ 85 ಸಾವಿರ ರೂ. ಮೌಲ್ಯದ ಕಬ್ಬಿಣದ ರಾಡುಗಳು ಹಾಗೂ ನಾಲ್ಕು ಸ್ಪ್ಲೆಂಡರ್ ಬೈಕ್ ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ಇದನ್ನೊಮ್ಮೆ ನೋಡಿ! ಇವರು ಮನುಷ್ಯರಲ್ವೇ ಅಲ್ಲ ರಾಕ್ಷಸರು: ಮನೆ ಮಗಳ ರಕ್ತ ಹೀರುವ ವಿಷಜಂತುಗಳು!