ETV Bharat / state

ಅಕ್ರಮ ಮರಳು ಅಡ್ಡೆ ಮೇಲೆ ಸಿರುಗುಪ್ಪ ತಹಶೀಲ್ದಾರ್‌ ದಾಳಿ.. 2 ಟ್ರ್ಯಾಕ್ಟರ್‌ ಸೀಜ್‌, ಐವರ ಅರೆಸ್ಟ್‌.. - illegal sand transport

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಕರ್ಚಿಗನೂರು ಗ್ರಾಮ ಸಮೀಪದ ಹಗರಿ ನದಿಯಲ್ಲಿ ಅಕ್ರಮ ಮರಳು ಸಾಗಣೆ ಅಡ್ಡ ನಡೆಯುತ್ತಿದ್ದು, ವಿಷಯ ತಿಳಿದ ಕೂಡಲೇ ಮರಳು ಅಕ್ರಮ ಸಾಗಣೆ ಅಡ್ಡೆ ಮೇಲೆ ಸಿರುಗುಪ್ಪ ತಹಶೀಲ್ದಾರ್ ನೇತೃತ್ವದಲ್ಲಿ ಮಿಂಚಿನ ದಾಳಿ ನಡೆಸಿ, ಎರಡು ಟ್ರ್ಯಾಕ್ಟರ್ ವಶಪಡಿಸಿಕೊಂಡು ಐವರನ್ನು ಬಂಧಿಸಿದ್ದಾರೆ.

ಅಕ್ರಮ ಮರಳು ಸಾಗಣೆ ಅಡ್ಡ ಮೇಲೆ ಸಿರುಗುಪ್ಪ ತಹಸೀಲ್ದಾರ್ ಮಿಂಚಿನ ದಾಳಿ
author img

By

Published : Aug 28, 2019, 11:00 AM IST

ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನ ಕರ್ಚಿಗನೂರು ಗ್ರಾಮ ಸಮೀಪದ ಹಗರಿ ನದಿಯಲ್ಲಿ ನಡೆಯುತ್ತಿದ್ದ ಮರಳು ಅಕ್ರಮ ಸಾಗಣೆ ಅಡ್ಡೆ ಮೇಲೆ ಸಿರುಗುಪ್ಪ ತಹಶೀಲ್ದಾರ್ ನೇತೃತ್ವದಲ್ಲಿ ಮಿಂಚಿನ ದಾಳಿ ನಡೆಸಿ 2 ಟ್ರ್ಯಾಕ್ಟರ್ ಸೀಜ್‌ ಮಾಡಿದ್ದಲ್ಲದೇ ಐವರನ್ನು ಬಂಧಿಸಿದ್ದಾರೆ.

ಮರಳು ಅಕ್ರಮ ಸಾಗಣೆ ವಿಷಯ ತಿಳಿದ ಬಳಿಕ, ಮಂಗಳವಾರ ತಡರಾತ್ರಿ ತಹಶೀಲ್ದಾರ್ ದಯಾನಂದ ಪಾಟೀಲ ಹಾಗೂ 15 ಮಂದಿಯ ತಂಡ ದಾಳಿ ನಡೆಸಿತು. ಕರ್ಚಿಗನೂರು, ಸಿರುಗುಪ್ಪ ಮೂಲದ ಐವರನ್ನು ಸಿರುಗುಪ್ಪ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಏಕಕಾಲಕ್ಕೆ ದಾಳಿ ನಡೆಸಿ ಮರಳು ಸಾಗಣೆಯಲ್ಲಿ ತೊಡಗಿದ್ದ ಎರಡು ಟ್ರ್ಯಾಕ್ಟರ್‌, ಕೃತ್ಯದಲ್ಲಿ ಬಳಸಲಾಗಿದ್ದ ಎರಡು ದ್ವಿಚಕ್ರ ವಾಹನ, ನಾಲ್ಕು ಮೊಬೈಲ್ ಫೋನ್​ಗಳನ್ನು ವಶಪಡಿಸಿಕೊಂಡಿದ್ದಾರೆ. ಇದರ ಜತೆಗೆ ಐವರು ಆರೋಪಿಗಳನ್ನು ಸ್ಥಳದಲ್ಲಿಯೇ ವಿಚಾರಣೆ ನಡೆಸಿದ್ದಾರೆ.

ಸದ್ಯ ಸಿರುಗುಪ್ಪ ಠಾಣೆಯ ಪೊಲೀಸರು ಅಸ್ಪಷ್ಠ ನೋಂದಣಿ ಸಂಖ್ಯೆವುಳ್ಳ ಟ್ರ್ಯಾಕ್ಟರ್​ಗಳನ್ನು ಜಪ್ತಿಗೊಳಿಸಿದ್ದಾರೆ. ಜೊತೆಗೆ, ಠಾಣಾಧಿಕಾರಿಗೆ ಮುಂದಿನ ತನಿಖೆ ಕೈಗೊಳ್ಳುವಂತೆ ಸೂಚಿಸಿದ್ದಾರೆ.

Intro:ಅಕ್ರಮ ಮರಳು ಸಾಗಣೆ ಅಡ್ಡೆ ಮೇಲೆ ಸಿರುಗುಪ್ಪ ತಹಸೀಲ್ದಾರ್ ಮಿಂಚಿನ ದಾಳಿ: ಎರಡು ಟ್ರ್ಯಾಕ್ಟರ್ ಸೇರಿ ಐವರ ಬಂಧನ
ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನ ಕರ್ಚಿಗನೂರು ಗ್ರಾಮ ಸಮೀಪದ ಹಗರಿನದಿಯಲ್ಲಿ ನಡೆಯುತ್ತಿದೆ ಎನ್ನಲಾದ ಮರಳು ಅಕ್ರಮ ಸಾಗಣೆ ಅಡ್ಡೆ ಮೇಲೆ ಸಿರುಗುಪ್ಪ ತಹಸೀಲ್ದಾರ್ ನೇತೃತ್ವ ದಲ್ಲಿ ಮಿಂಚಿನ ದಾಳಿ ಕಾರ್ಯಾಚರಣೆ ನಡೆಸಿ ಎರಡು ಟ್ರ್ಯಾಕ್ಟರ್ ಹಾಗೂ ಐವರನ್ನು ಬಂಧಿಸಿದ್ದಾರೆ.
ಮಂಗಳವಾರ ತಡರಾತ್ರಿ ತಹಸೀಲ್ದಾರ್ ದಯಾನಂದ ಪಾಟೀಲ ಹಾಗೂ ಹದಿನೈದು ಮಂದಿಯ ತಂಡವು ಮಿಂಚಿನ ದಾಳಿ ಕಾರ್ಯಾ ಚರಣೆ ನಡೆಸಿ, ಕರ್ಚಿಗನೂರು, ಸಿರುಗುಪ್ಪ ಮೂಲದ ಐವರನ್ನು ವಶಕ್ಕೆ ಪಡೆದುಕೊಂಡು ಸಿರುಗುಪ್ಪ ಪೊಲೀಸ್ ಠಾಣೆಗೆ ಒಪ್ಪಿಸಿ ದ್ದಾರೆ.
ಕರ್ಚಿಗನೂರು ಗ್ರಾಮದ ಹಗರಿ ನದಿಯಲ್ಲಿ ಅಕ್ರಮ ಮರಳು ಸಾಗಣೆ ಎಗ್ಗಿಲ್ಲದೇ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ತಂಡದೊಂದಿಗೆ ತೆರಳಿದ ತಹಸೀಲ್ದಾರ್ ದಯಾನಂದ ಪಾಟೀಲರು, ಏಕಕಾಲಕ್ಕೆ ದಾಳಿ ನಡೆಸಿ ಮರಳು ಸಾಗಣೆಯಲ್ಲಿ ತೊಡಗಿದ್ದ ಎರಡು ಟ್ರ್ಯಾಕ್ಟರ್ ವಾಹನ, ಕೃತ್ಯದಲ್ಲಿ ಬಳಸಲಾಗಿದ್ದ ಎರಡು ದ್ವಿಚಕ್ರ ವಾಹನ, ನಾಲ್ಕು ಮೊಬೈಲ್ ಫೋನ್ ಗಳು ಹಾಗೂ ಐವರನ್ನು ಸ್ಥಳದಲ್ಲಿಯೇ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
Body:ತಾಲೂಕು ದಂಡಾಧಿಕಾರಿಯಾದ ತಹಸೀಲ್ದಾರರು ತಂಡವೊಂದನ್ನು ರಚಿಸಿಕೊಂಡು ದ್ವಿಚಕ್ರ ವಾಹನಗಳಲ್ಲಿ ಮಾರುವೇಷದೊಂದಿಗೆ ತೆರಳಿ ದಾಳಿ ಕಾರ್ಯಾಚರಣೆ ನಡೆಸಿ, ಅಕ್ರಮ ಮರಳು ಸಾಗಣೆ ಯಲ್ಲಿ ತೊಡಗಿದ್ದ ಚಾಲಕರ ಸಮೇತ ಎರಡು ಮರಳು ತುಂಬಿದ ಮಹೀಂದ್ರಾ, ಪವರ್ ಟ್ರ್ಯಾಕ್ ಟ್ರ್ಯಾಕ್ಟರ್ ಗಳನ್ನು ಹಿಡಿದು ಕೃತ್ಯದಲ್ಲಿ ತೊಡಗಿದ್ದವರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಸಿರುಗುಪ್ಪ ಠಾಣೆಯ ಪೊಲೀಸರು ಅಸ್ಪಷ್ಠ ನೊಂದಣಿ ಸಂಖ್ಯೆವುಳ್ಳ ಟ್ರ್ಯಾಕ್ಟರ್ ಗಳನ್ನು ಜಪ್ತಿಗೊಳಿಸಿದ್ದಾರೆ. ಠಾಣಾಧಿಕಾರಿಗೆ ಮುಂದಿನ ತನಿಖೆ ಕೈಗೊಳ್ಳುವಂತೆ ಸೂಚಿಸಿದ್ದಾರೆ ತಹಸೀಲ್ದಾರ ಪಾಟೀಲ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_1_SIRUGUPPA_ILLEGAL_MUD_TRAPPED_7203310

KN_BLY_1a_SIRUGUPPA_ILLEGAL_MUD_TRAPPED_7203310

KN_BLY_1b_SIRUGUPPA_ILLEGAL_MUD_TRAPPED_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.