ETV Bharat / state

ಮುಖ್ಯೋಪಾಧ್ಯಾಯನ ವರ್ತನೆ ಖಂಡಿಸಿ ಗ್ರಾಮಸ್ಥರಿಂದ ಮೌನ ಪ್ರತಿಭಟನೆ - ಮುಖ್ಯ ಗುರುಗಳ ವರ್ತನೆ ಖಂಡಿಸಿ ಮೌನ ಪ್ರತಿಭಟನೆ

ಮುಖ್ಯ ಗುರುಗಳ ವರ್ತನೆ ಖಂಡಿಸಿ ಎಸ್​ಡಿಎಂಸಿ ಅಧ್ಯಕ್ಷರು, ಉಪಾಧ್ಯಕ್ಷರು, ಊರಿನ ಯುವಕರು ಹಾಗೂ ಮುಖಂಡರು ಸೇರಿ ಮೌನ ಪ್ರತಿಭಟನೆ ನಡೆಸಿದರು.

ಮುಖ್ಯ ಗುರುಗಳ ವರ್ತನೆ ಖಂಡಿಸಿ ಮೌನ ಪ್ರತಿಭಟನೆ
author img

By

Published : Oct 4, 2019, 2:49 PM IST

ಬಳ್ಳಾರಿ: ಕಂಪ್ಲಿ ತಾಲೂಕಿನ ಇಟಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯನ ವರ್ತನೆ ಖಂಡಿಸಿ ಎಸ್​ಡಿಎಂಸಿ ಅಧ್ಯಕ್ಷರು, ಉಪಾಧ್ಯಕ್ಷರು, ಊರಿನ ಯುವಕರು ಹಾಗೂ ಮುಖಂಡರು ಸೇರಿ ಮೌನ ಪ್ರತಿಭಟನೆ ನಡೆಸಿದ್ರು.

ಈ ಮುಖ್ಯೋಪಾಧ್ಯಾಯ ಸರಿಯಾಗಿ ಶಾಲೆಗೆ ಬರುತ್ತಿಲ್ಲ ಎಂದು ಜನ ಪ್ರತಿಭಟನೆ ಮಾಡಿದ್ರು. ಮುಖ್ಯ ಗುರು ವಿ. ಫಕ್ಕಿರಪ್ಪ ವಿದ್ಯಾರ್ಥಿಗಳಿಗೆ ಸರಿಯಾಗಿ ಬಿಸಿಯೂಟ ನೀಡುವುದಿಲ್ಲ, ತಿಂಗಳಲ್ಲಿ 10 ರಿಂದ 12 ದಿನಗಳು ಮಕ್ಕಳಿಗೆ ಹಾಲು ವಿತರಿಸಿಲ್ಲ, ಸರ್ಕಾರದ ಕಡೆಯಿಂದ ಬರುವ ಸೈಕಲ್​ಗಳಿಗೆ ಹಣವನ್ನು ಪಡೆಯುತ್ತಾರೆ ಎಂದು ಆರೋಪಿಸಿದ್ರು. ಈ ಕೂಡಲೇ ಮುಖ್ಯೋಪಾಧ್ಯಾಯ ವಿ.ಫಕ್ಕೀರಪ್ಪ ಅವರನ್ನು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದ್ರು.

ಮುಖ್ಯ ಗುರುವಿನ ವರ್ತನೆ ಖಂಡಿಸಿ ಮೌನ ಪ್ರತಿಭಟನೆ

ಮತ್ತೋರ್ವ ಸಹಾಯಕ ಶಿಕ್ಷಕ ಎಸ್. ಪ್ರಭು ಮದ್ಯಪಾನ ಮತ್ತು ಗುಟ್ಕಾ ಬಾಯಲ್ಲಿಟ್ಟುಕೊಂಡೇ ಶಾಲೆಗೆ ಬರುತ್ತಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ಸಲ್ಲಿಸಿದರು.‌

Intro:ಮುಖ್ಯ ಗುರುಗಳ ವರ್ತನೆಯನ್ನು ಖಂಡಿಸಿ ಎಸ್.ಡಿ.ಎಂ.ಸಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಊರಿನ ಯುವಕರು ಮುಖಂಡರು ಸೇರಿ ಮೌನ ಪ್ರತಿಭಟನೆಯನ್ನು ಮಾಡಿದರು. Body:
ಬಳ್ಳಾರಿ ಜಿಲ್ಲೆ ಕಂಪ್ಲಿ ತಾಲೂಕಿನ ನಂಬರ್ - ೧ ಇಟಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮುಖ್ಯೋಪಾಧ್ಯಾಯ ಶಾಲೆಗೆ ಸರಿಯಾಗಿ ಬರುತ್ತಿಲ್ಲ ಎಂದು ಊರಿನ ಎಸ್.ಡಿ.ಎಂ.ಸಿ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಊರಿನ ಯುವಕರು ಮೌನ ಪ್ರತಿಭಟನೆ ಮಾಡಿದರು.

ಶಾಲೆಯ ಮುಖ್ಯಗುರುಗಳಾದ ವಿ. ಪಕ್ಕಿರಪ್ಪ ವಿದ್ಯಾರ್ಥಿಗಳಿಗೆ ಬಿಸಿಯೂಟದಲ್ಲಿ‌ ಕನ್ನ ಹಾಕಿ, ತಿಂಗಳಲ್ಲಿ 10 ರಿಂದ 12 ದಿನಗಳು ಮಕ್ಕಳಿಗೆ ಹಾಲಿ ವಿತರಣೆ ಮಾಡಲ್ಲ , ಸರ್ಕಾರದ ಕಡೆಯಿಂದ ಬರುವ ಸೈಕಲ್ ಗಳಿಗೆ ಹಣವನ್ನು ಪಡೆಯುತ್ತಾರೆ ಇದನ್ನೆಲ್ಲಾ ವಿರೋಧಿಸಿ ಮೌನ ಪ್ರತಿಭಟನೆ ಮಾಡಿದರು.

ಕೂಡಲೇ ಮುಖ್ಯಗುರುಗಳಾದ ವಿ. ಪಕ್ಕೀರಪ್ಪ ಅವರನ್ನು ವರ್ಗಾವಣೆ ಮಾಡಬೇಕು. ಇನ್ನೊಬ್ಬ ಸಹಾಯಕ ಶಿಕ್ಷಕ ಎಸ್. ಪ್ರಭು ಮಧ್ಯಪಾನ ಮತ್ತು ಗುಟ್ಕ ಹಾಕಿಕೊಂಡು ಶಾಲೆಗೆ ಬರುತ್ತಾರೆ. ಇದಕ್ಕೆ ಸಂಭಂದಿಸಿದಂತೆ ಕ್ಷೇತ್ರ ಶಿಕ್ಷಣ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು.‌

Conclusion:ಈ ಮೌನ ಪ್ರತಿಭಟನೆಯಲ್ಲಿ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಜಿ.ಬಸವರಾಜ್, ಉಪಾಧ್ಯಕ್ಷರು ಓರ್ವಾಯಿ ದಾದಾಸಾಬ್, ವೆಂಕಟೇಶ, ಟಿ.ಪಂಪಾಪತಿ, ದಾದಾಸಾಬ್, ಹೋನ್ನುರಸಾಬ್, ಹೆಚ್.ಎಂ ಬಸವರಾಜ್, ಎಂ.ತೋಟಪ್ಪ, ಎ.ದೇವರಾಜ್ ಭಾಗವಹಿಸಿದ್ದರು.

ಸ್ಥಳಕ್ಕೆ ಕಂಪ್ಲಿ ಠಾಣೆಯ ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು. ‌
ETV Bharat Logo

Copyright © 2025 Ushodaya Enterprises Pvt. Ltd., All Rights Reserved.