ETV Bharat / state

ಕೆ.ಸಿ ಕೊಂಡಯ್ಯ ಮನೆಗೆ ಪ್ರತಿಭಟನಾಕಾರರ ಮುತ್ತಿಗೆ : ತಡೆದ ಮಹಿಳಾ ಸಿಪಿಐ - ಕನ್ನಡಪರ ಸಂಘಟನೆಗಳ ಕಾರ್ಯಕರ್ತರು

ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆಗೆ ಸಹಮತ ಸೂಚಿಸಿರುವ ಎಂಎಲ್​ಸಿ ಕೆ.ಸಿ ಕೊಂಡಯ್ಯರ  ಬಳ್ಳಾರಿಯ ಮನೆಯನ್ನು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದಾಗ ಅವರನ್ನು ಮಹಿಳಾ ಪೊಲೀಸ್​ ಠಾಣೆಯ ಸಿಪಿಐ ಗಾಯತ್ರಿ ತಡೆದ ಪ್ರಸಂಗ ನಡೆಯಿತು.

author img

By

Published : Oct 1, 2019, 1:50 PM IST

ಬಳ್ಳಾರಿ: ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆಗೆ ಸಹಮತ ಸೂಚಿಸಿರುವ ಎಂಎಲ್​ಸಿ ಕೆ.ಸಿ ಕೊಂಡಯ್ಯರ ಬಳ್ಳಾರಿಯ ಮನೆಯನ್ನು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದಾಗ ಅವರನ್ನು ಮಹಿಳಾ ಪೊಲೀಸ್​ ಠಾಣೆಯ ಸಿಪಿಐ ಗಾಯತ್ರಿ ತಡೆದ ಪ್ರಸಂಗ ನಡೆಯಿತು.

ಎಂಎಲ್​ಸಿ ಕೆ.ಸಿ ಕೊಂಡಯ್ಯರ ಬಳ್ಳಾರಿಯ ಮನೆ ಬಳಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನ

ಜಿಲ್ಲಾ ಪೊಲೀಸ್ ಇಲಾಖೆ ಪೂರ್ವಾನುಮತಿ ಇಲ್ಲದೇ, ಜಿಲ್ಲೆಯ ಕಪ್ಪಗಲ್ಲು ರಸ್ತೆಯ ನಾಗೇಶ ಶಾಸ್ತ್ರೀ ನಗರದಲ್ಲಿರುವ ಕೊಂಡಯ್ಯರ ಮನೆಗೆ ಮುತ್ತಿಗೆ ಹಾಕಲು ಯತ್ನಿಸುವ ವಿಷಯ ತಿಳಿದ ಸಿಪಿಐ ಗಾಯತ್ರಿ ಹಾಗೂ ಸಿಬ್ಬಂದಿ ಕೂಡಲೇ ಘಟನಾ ಸ್ಥಳಕ್ಕಾಗಮಿಸಿದರು. ಕೊಂಡಯ್ಯನವರ ಮನೆಯ ಪ್ರವೇಶದ ಗೇಟ್ ಬಳಿ ಕೇವಲ ಐದಾರು ಮಂದಿ ಸಾಲಾಗಿ ಕುಳಿತು ಘೋಷಣೆ ಕೂಗಲಾರಂಭಿಸಿದರು.‌ ನಂತರ ಪೊಲೀಸ್ ಸಿಬ್ಬಂದಿ ಬಂದು ಕಾರ್ಯಕರ್ತರನ್ನು ಮೇಲೆಬ್ಬಿಸಲು ಮುಂದಾದಾಗ ಕನ್ನಡ ಪರ ಸಂಘಟನೆಯ ಮುಖಂಡ ಕುರುಗೋಡು ಚನ್ನಬಸವರಾಜ, ಸಿಪಿಐ ಗಾಯತ್ರಿಯೊಂದಿಗೆ ವಾಗ್ವಾದ ನಡೆಸಿದರು.

ಇನ್ನು ಸಿಪಿಐ ಗಾಯತ್ರಿ ಕಾರ್ಯಕರ್ತರಿಗೆ ನೀವು ಪ್ರತಿಭಟನೆ ನಡೆಸೋದು ಇಲ್ಲಿ ಅಲ್ಲ, ಗಡಿಗಿ ಚನ್ನಪ್ಪ ವೃತ್ತದ ಬಳಿ ನಿಮ್ಮ ಪ್ರತಿಭಟನೆಗೆ ಅವಕಾಶವಿದೆ. ಅಲ್ಲಿಗೆ ಹೋಗಿ ಮಾಡಿ ಎಂದು ಸಿಪಿಐ ಗಾಯತ್ರಿ ತಾಕೀತು ಮಾಡಿದ್ದಾರೆ.

Intro:ಎಂಎಲ್ ಸಿ ಕೆಸಿಕೆ ಮನೆಗೆ ಕಾರ್ಯಕರ್ತರ ಮುತ್ತಿಗೆಮುತ್ತಿಗೆ ಮಹಿಳಾ ಸಿಪಿಐಯೊಂದಿಗೆ ಕಾರ್ಯಕರ್ತರ ವಾಗ್ವಾದ...!
ಬಳ್ಳಾರಿ: ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆಗೆ ಸಹಮತ ಸೂಚಿಸಿರುವ ಎಂಎಲ್ ಸಿ ಕೊಂಡಯ್ಯನವ್ರು ಬಳ್ಳಾರಿಯ
ಮನೆಯನ್ನು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು
ಮುತ್ತಿಗೆ ಹಾಕಲು ಯತ್ನಿಸಿದಾಗ ಮಹಿಳಾ ಸಿಪಿಐ ಗಾಯತ್ರಿ
ತಡೆದ ಪ್ರಸಂಗ ನಡೆಯಿತು.
ಜಿಲ್ಲಾ ಪೊಲೀಸ್ ಇಲಾಖೆ ಪೂರ್ವಾನುಮತಿ ಇಲ್ಲದೇ,
ಬಳ್ಳಾರಿಯ ಕಪ್ಪಗಲ್ಲು ರಸ್ತೆಯ ನಾಗೇಶ ಶಾಸ್ತ್ರೀ ನಗರದಲ್ಲಿರುವ ಕೊಂಡಯ್ಯನವ್ರ ಮನೆಗೆ ಮುತ್ತಿಗೆ ಹಾಕಲು ಯತ್ನಿಸುವ ವಿಷಯ ತಿಳಿದ ಸಿಪಿಐ ಗಾಯತ್ರಿ ಹಾಗೂ ಸಿಬ್ಬಂದಿ ಕೂಡಲೇ ಘಟನಾ ಸ್ಥಳಕ್ಕಾಗಮಿಸಿ ಕೊಂಡಯ್ಯನವರ ಮನೆಯ ಪ್ರವೇಶದ ಗೇಟ್ ಬಳಿ ಕೇವಲ ಐದಾರು ಮಂದಿ ಸಾಲಾಗಿ ಕುಳಿತು ಘೋಷಣೆ ಕೂಗಲಾರಂಭಿಸಿದರು.‌ ಆಗ ತತ್ ಕ್ಷಣವೇ ಸಿಪಿಐ ಗಾಯತ್ರಿ
ಅವರು ಕಾರ್ಯಕರ್ತರನ್ನು ಮೇಲೆಬ್ಬಿಸಿ ಕರ್ನಾಟಕ ಜನಸೈನ್ಯ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷ ಕೆ.ಯರಿಸ್ವಾಮಿ ಅವರನ್ನು ಪೊಲೀಸ್ ಸಿಬ್ಬಂದಿ ಎರಡು ಕೈಗಳಿಂದ ಮೇಲೆತ್ತಿಕೊಂಡೇ ಎಳೆದು ಕೊಂಡು ಹೋಗಿ ಸಿಪಿಐ ಜೀಪ್ ಅನ್ನು ಹತ್ತಿಸಿದರು.
ಆದರೂ ಕೂಡ ಜೀಪ್ ನಿಂದ ಕೆಳಗಿಳಿದು ಬಂದ ಯರಿಸ್ವಾಮಿ ಗೇಟ್ ಮುಂಭಾಗದಿಂದ ಸ್ವಲ್ಪ ದೂರದಲ್ಲಿ ಪ್ರತಿಭಟನೆ ನಡೆಸಲು ಆರಂಭಿಸಿದರು.
Body:ಆಗಲೂ ಕೂಡ ಐದಾರು ಪೊಲೀಸ್ ಸಿಬ್ಬಂದಿ ಬಂದು ಕಾರ್ಯಕರ್ತರನ್ನು ಮೇಲೆಬ್ಬಿಸಲು ಮುಂದಾದಾಗ ಕನ್ನಡ ಪರ ಸಂಘಟನೆಯ ಮುಖಂಡ ಕುರುಗೋಡು ಚನ್ನಬಸವರಾಜ, ಸಿಪಿಐ ಗಾಯತ್ರಿಯೊಂದಿಗೆ ವಾಗ್ವಾದ ನಡೆಸಿದರು. ನೀವು ಪ್ರತಿ ಭಟನೆ ನಡೆಸೋದು ಇಲ್ಲಿ ಅಲ್ಲ. ಗಡಿಗಿ ಚನ್ನಪ್ಪ ವೃತ್ತದ ಬಳಿ ನಿಮ್ಮ ಪ್ರತಿಭಟನೆಗೆ ಅವಕಾಶವಿದೆ. ಅಲ್ಲಿಗೆ ಹೋಗಿ ಮಾಡಿ ಎಂದು ಸಿಪಿಐ ಗಾಯತ್ರಿ ತಾಕೀತು ಮಾಡಿದ್ದಾರೆ.
ನಮಗೆ ಪ್ರತಿಭಟನೆ ಮಾಡೋ ಹಕ್ಕಿಲ್ವ ಎಂದು ಕುರುಗೋಡು ಚನ್ನ ಬಸವರಾಜ ಸಿಪಿಐ ಗಾಯತ್ರಿ ಅವರನ್ನು ಪ್ರಶ್ನಿಸಿದಾಗ ಸಿಟ್ಟಿಗೆದ್ದ ಗಾಯತ್ರಿ, ಅದನ್ನ ನಮಗೆ ಕೇಳಬೇಡಿ. ಅಲ್ಲಿಗೆ ಹೋಗಿ ಎಂದು ತಾಕೀತು ಮಾಡಿದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_3_MLC_KCK_HOUSE_MUTHIGE_VISUALS_7203310

KN_BLY_3a_MLC_KCK_HOUSE_MUTHIGE_VISUALS_7203310

KN_BLY_3b_MLC_KCK_HOUSE_MUTHIGE_VISUALS_7203310

KN_BLY_3c_MLC_KCK_HOUSE_MUTHIGE_VISUALS_7203310

KN_BLY_3d_MLC_KCK_HOUSE_MUTHIGE_VISUALS_7203310

KN_BLY_3e_MLC_KCK_HOUSE_MUTHIGE_VISUALS_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.