ಹೊಸಪೇಟೆ: ಬಿಜೆಪಿ ಬಂಡಾಯ ಅಭ್ಯರ್ಥಿ ಕವಿರಾಜ ಅರಸ್ ಅವರನ್ನು ಮನವೊಲಿಸಲು ತೆರಳಿದ್ದ ಸಚಿವ ಶ್ರೀರಾಮುಲು ಪ್ರಯತ್ನ ಫಲ ನೀಡಿಲ್ಲ.
ವಿಜಯನಗರದ ಕ್ಷೇತ್ರದಲ್ಲಿ ಉಪಚುನಾವಣೆಯು ದಿನದಿಂದ ದಿನಕ್ಕೆ ರಣರಂಗವಾಗುತ್ತಿದ್ದು, ಕವಿರಾಜ ಅರಸ್ ಅವರನ್ನು ಮನವೊಲಿಸುವಲ್ಲಿ ಸಚಿವ ಶ್ರೀರಾಮುಲು ವಿಫಲವಾಗಿದ್ದಾರೆ. ಇನ್ನೂ ಯಾರ ಮಾತಿಗೂ ತಲೆಕೆಡಿಸಿಕೊಳ್ಳದೆ ಚುನಾವಣಾ ಅಖಾಡಕ್ಕೆ ಧುಮುಕಿದ್ದು, ಕ್ಷೇತ್ರದ ಜನರ ಬೆಂಬಲದಿಂದ ಗೆದ್ದು ಬರುವೆ ಎಂಬ ವಿಶ್ವಾಸವನ್ನು ಕವಿರಾಜ ಅರಸ್ ವ್ಯಕ್ತಪಡಿಸಿದ್ದಾರೆ.
ವಿಜಯನಗರ ಉಪಚುನಾವಣೆಯಲ್ಲಿ ಬಿಜೆಪಿ ಆನಂದ ಸಿಂಗ್ ಅವರಿಗೆ ಟಿಕೆಟ್ ನೀಡಿದ್ದು, ಅವರ ವಿರುದ್ಧವಾಗಿ ನಾಮ ಪತ್ರವನ್ನು ಸಲ್ಲಿಸುತ್ತೇನೆಂದು ಕವಿರಾಜ ಅರಸ್ ತಿಳಿಸಿದ್ದಾರೆ.