ETV Bharat / state

ವಿಜಯನಗರ - ಶಾಲಾ ಆವರಣಕ್ಕೆ ಬರುವ ಕೊಳಚೆ ನೀರು: ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಆಕ್ರೋಶ - ಕೊಳಚೆ ನೀರು

ಶಾಲಾ ಆವರಣಕ್ಕೆ ಊರಿನ ಕೊಳಚೆ ನೀರು ನುಗ್ಗುತ್ತಿದ್ದು ಈ ಬಗ್ಗೆ ಗ್ರಾಮಸ್ಥರು ಗ್ರಾಮಪಂಚಾಯತ್​​ನಿಂದ ಹಿಡಿದು ಶಿಕ್ಷಣಾಧಿಕಾರಿಗಳ ವರೆಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಶಾಲೆಯಲ್ಲಿ ಮುನ್ನೂರಕ್ಕೂ ಅಧಿಕ ಮಕ್ಕಳಿದ್ದ ಅವರ ಆರೋಗ್ಯದ ಬಗ್ಗೆಯೂ ಅಧಿಕಾರಿಗಳು ಚಿಂತಿಸುವ ಅಗತ್ಯವಿದೆ.

Sewage water coming into the school premises
ಶಾಲಾ ಆವರಣಕ್ಕೆ ಬರುವ ಊರ ಕೊಳಚೆ ನೀರು: ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ
author img

By

Published : May 24, 2022, 10:49 PM IST

ವಿಜಯನಗರ: ಹಡಗಲಿ ತಾಲೂಕಿನ ಕಾಲ್ವಿತಾಂಡಾದ ಸರಕಾರಿ ಶಾಲೆಗೆ ಚರಂಡಿ ನೀರು ನುಗ್ಗಿ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ. ತಾಲೂಕು‌ ಕೇಂದ್ರದಿಂದ ಕಾಲ್ವಿತಾಂಡಾ ಕೇವಲ ಹತ್ತು ಹದಿನೈದು ಕಿ.ಮೀ. ದೂರದಲ್ಲಿದೆ. ಈ ಶಾಲೆಯಲ್ಲಿ 1 ರಿಂದ 8ನೇ ತರಗತಿವರೆಗೆ ಮುನ್ನೂರಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಆದರೆ, ಈ ಶಾಲೆಗೆ ಸರಿಯಾದ ಮೂಲಸೌಕರ್ಯ ಇಲ್ಲದಂತಾಗಿದೆ. ಅದಲ್ಲದೇ ಊರಿನ ಕೊಳಚೆ ನೀರು ಹರಿಯುವ ಕಾಲುವೆ ಶಾಲೆಯ ಕಾಂಪೌಂಡ್​ ಪಕ್ಕವೇ ಹರಿಯುತ್ತಿದ್ದು, ಅದು ಶಾಲಾ ಆವರಣಕ್ಕೆ ಬರುತ್ತಿದೆ. ಶಾಲಾ ಆವರಣದ ತುಂಬಾ ಕೊಳಚೆ ನೀರು ತುಂಬಿಕೊಂಡಿದೆ. ಇದರಿಂದ ಮಕ್ಕಳಲ್ಲಿ ಅನಾರೋಗ್ಯ ಕಾಡುವ ಭಯವೂ ಇದೆ.

ಶಾಲಾ ಆವರಣಕ್ಕೆ ಬರುವ ಊರ ಕೊಳಚೆ ನೀರು: ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ

ಕೊಳಚೆ ನೀರು ಶಾಲಾ ಆವರಣಕ್ಕೆ ಬರುತ್ತಿರುವ ಬಗ್ಗೆ ಎಸ್​ಡಿಎಂಸಿ ಅಧ್ಯಕ್ಷರು ಸೇರಿದಂತೆ, ಗ್ರಾಮಸ್ಥರು ಕೂಡ ದೂರು ಕೊಟ್ಟಿದ್ದು ಏನು ಪ್ರಯೋಜನವಾಗಿಲ್ಲ. ಗ್ರಾಮ ಪಂಚಾಯತ್​ ಅಧಿಕಾರಿಗಳಿಂದ ಹಿಡಿದು, ತಾಲೂಕು ಪಂಚಾಯತ್​ ಅಧಿಕಾರಿಗಳು ಹಾಗೇ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದರೂ ಏನು ಪ್ರಯೋಜನ ಆಗಿಲ್ಲ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸಮಸ್ಯೆ ಬಗೆಹರಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಹಿಂದೆ ಆಡಿಕೊಂಡವರೆಷ್ಟು.. ಕುಗ್ಗದೆ ಮುಂದೆ ಸಾಗಿದ ಸಾಧಕಿ ಬಾಕ್ಸಿಂಗ್​​ ವಿಶ್ವ ಚಾಂಪಿಯನ್​ ಆದ ಕಥೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.